

ದಿನಾಂಕ:23.06.2026 ರಂದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಯು child labour platform (CLP) ಅನುಷ್ಠಾನ ಹಾಗೂ ಸಮಿತಿ ರಚನೆಯ ಕುರಿತು ಪೂರ್ವಬಾವಿ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ಅಧ್ಯಕ್ಷತೆಯನ್ನು ಶ್ರೀ ಭಂವರ್ ಸಿಂಗ್ ಮೀನಾ, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ವಹಿಸಿದರು. ಹಾಗೂ Ranjith Prakash, Co-ordinator, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಪೊಲೀಸ್ ಇಲಾಖೆ, ಶ್ರೀ ಸಂತೋಷ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶ್ರೀಮತಿ ಸುಮಿತ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀಮತಿ ರಾಣಿ, ಸಮಾಜ ಕಲ್ಯಾಣ ಇಲಾಖೆ, ಶ್ರೀ ಮಂಜುನಾಥ್, ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶ್ರೀ ಮನೋಜ್, ರೇಷ್ಮೆ ಇಲಾಖೆ, ಶ್ರೀ ದಯಾ, ವಿಕಸನ ಸಂಸ್ಥೆ (NGO) ಹಾಗೂ ಶ್ರೀ ಸುಭಾಷ್ ಎಂ ಆಲದಕಟ್ಟಿ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿ, ಶ್ರೀ ಬಿ ಸಿ ಸುರೇಶ್, ಕಾರ್ಮಿಕ ಅಧಿಕಾರಿಗಳು, ಚಿಕ್ಕಮಗಳೂರು ಉಪವಿಭಾಗ, ಹಿರಿಯ ಕಾರ್ಮಿಕ ನೀರಿಕ್ಷಕರುಗಳು, 1 & 2 ನೇ ವೃತ್ತ ಚಿಕ್ಕಮಗಳೂರು, ಕೊಪ್ಪ ವೃತ್ತ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದರು. ನಂತರ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ತಂಡದೊಂದಿಗೆ ಸ್ಥಳೀಯ ಮೈಲಿಮನೆ ಟಾಟಾ ಕಾಫಿ ಎಸ್ಟೇಟ್ ಸಂಸ್ಥೆಗೆ ಭೇಟಿ ನೀಡಿ ಹಾಜರಿದ್ದ ಕಾರ್ಮಿಕರಗಳ ವೃತ್ತಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಅರಿವು ಮೂಡಿಸಲಾದ ಸಂದರ್ಭ🙏