ಸಂವಿಧಾನ ರಚನೆಗೂ ಮೊದಲೇ ಮನುಷ್ಯನ ಮೌಲ್ಯಧಾರಿತ ಜೀವನವನ್ನು ರೂಡಿಸಿಕೊಳ್ಳಲು ಶ್ರಮಿಸಿದ್ದರು ಎಂದು ಶ್ರೀಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮೀಜಿಗಳು ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಡೆಕೆರೆ ಮಹಾಸಂಸ್ಥಾನದಲ್ಲಿ ನಡೆದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರ ಅನುಯಾಯಿಗಳಾದ ನಾವು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡೋದರಲ್ಲಿ ಶರಣರ ಪಾತ್ರ ದೊಡ್ಡದಾಗಿದೆ. ಹಾಗೇ ತುಮಕೂರು ಜಿಲ್ಲೆಯ ಈ ಗೋಡೆಕೆರೆ ಕ್ಷೇತ್ರ ಕೂಡಾ ಒಂದು ಶಕ್ತಿ ಸ್ಥಳವಾಗಿದೆ ಎಂದರು.
ಇನ್ನು ಕೇವಲ 22ನೇ ವಯಸ್ಸಿಗೆ ಅಲೌಕಿಕ ಕಡೆಗೆ ದೀಕ್ಷೆ ಪಡೆದ ಶ್ರೀಗಳು, ಬಸವಲಿಂಗ ಪ್ರಭುಗಳ ಮಾರ್ಗದರ್ಶನದಲ್ಲಿ ಗೋಡೆಕೆರೆ ಶ್ರೀ ಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ಇಲ್ಲಿಯ ತನಕ ಸಮಾಜದ ಉದ್ದಾರಕ್ಕೆ ತಮ್ಮನ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 65ರ ಹರೆಯದಲ್ಲೂ ಕೂಡ ಆಧ್ಯಾತ್ಮಿಕ ಮತ್ತು ಸಮಾಜ ಸೇವೆ ಕಿಂಚಿತ್ತು ಕಡಿಮೆಯಾಗಿಲ್ಲ ಎಂದರು.
ಬಳಿಕ ಗೃಹಸಚಿವ ಜಿ.ಪರಮೇಶ್ವರ್ ಮಾತನಾಡಿ, ಧಾರ್ಮಿಕ ಚಿಂತನೆ ಮೌಲ್ಯಗಳು ನಶಿಸಿ ಹೋಗುತ್ತಿದೆ. ಆದರೇ ದುಡಿಮೆಗೆ ನಿಜವಾದ ಫಲವಿದೆ ಎಂಬುದನ್ನು 150 ವರ್ಷದ ಹಿಂದೆಯೇ ಶರಣರು ಪ್ರತಿಪಾದಿಸಿದ್ದಾರೆ. ಸಿದ್ದರಾಮೇಶ್ವರ ಸ್ವಾಮಿ ದೇವಾಲಯದ ನಿರ್ಮಾಣಕ್ಕೆ ನಾಲ್ಕು ಕೋಟಿ ರೂ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದ್ದು. ಶ್ರೀಗಳು ಇನ್ನೂ ಐದು ಕೋಟಿ ಮನವಿ ಸಲ್ಲಿಸಿದ್ದಾರೆ ಈ ನಿಟ್ಟಿನಲ್ಲಿ ನಾನು ಸರ್ಕಾರಕ್ಕೆ ಶಿಪಾರಸು ಮಾಡಿ ಹಣವನ್ನು ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ಕೊಟ್ಟರು
ಈ ವೇಳೆ, ಮೃತ್ಯುಂಜಯ ದಶಿಕೇಂದ್ರ ಸ್ವಾಮಿಜೀ, ಶಾಸಕ ಸಿಬಿ ಸುರೇಶ್ ಬಾಬು, ಕರಡಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ತುಮಕೂರು ಶಾಸಕ ಜ್ಯೋತಿ ಗಣೇಶ್, ತುಮಕೂರು ಗ್ರಾಮಾಂತರ ಶಾಸಕ. ಸುರೇಶ್ ಗೌಡ, ತಮ್ಮಡಿಹಳ್ಳಿ ವಿರಕ್ತಮಠದ ಅಭಿನವ ಡಾ. ಮಲ್ಲಿಕಾರ್ಜುನ್ ದೇಶಿ ಕೇಂದ್ರ ಸ್ವಾಮೀಜಿ, ಗುಬ್ಬಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.








