ಮಾಡಾಳು ಶ್ರೀ ಸ್ವರ್ಣ ಗೌರಿ ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪೂಜೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು  ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಣ್ಣೆತ್ತಿ ಅಮಾವಾಸ್ಯೆ ಅಂಗವಾಗಿ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿಶ್ರೀ ಚೇತನ್ ಮರಿದೇವರ ಪಾದಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ನೆರವೇರಿತು               ಹಾರನಹಳ್ಳಿ ಕೋಡಿಮಠದ ಪೂಜ್ಯ ಗುರುಗಳಾದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ಸತ್ ಸಂಕಲ್ಪದಂತೆ ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳ ಅಮಾವಾಸ್ಯೆ ಯಂದು ತಾಯಿ ಜಗನ್ಮಾತೆ ಅಮ್ಮನವರಿಗೆ ಧಾರ್ಮಿಕ ವಿಧಿ ವಿಧಾನಗಳಿಂದ ಶಾಸ್ತ್ರೋತ್ರವಾಗಿ ಪೂಜೆ ಸಲ್ಲಿಸಲಾಗುತ್ತದೆ       ಸ್ವಾಮೀಜಿಯವರ ಪಾದಪೂಜೆಯ ನಂತರ ನೆರೆದಿದ್ದ ಭಕ್ತರನ್ನು ಉದ್ವೇಶಿಸಿ ಮಾತನಾಡಿದ ಶ್ರೀಗಳು ಜೀವನದಲ್ಲಿ ನಂಬಿಕೆ ವಿಶ್ವಾಸಗಳು ಕಳೆದು ಹೋದರೆ ಬಾಳುವುದು  ಕಷ್ಟವಾಗುತ್ತಿದೆ ಬುದ್ಧಿ ಶಕ್ತಿ ಬೆಳದಂತೆ ಮನುಷ್ಯನ ಭಾವನೆಗಳು ಬೆಳೆಯಬೇಕಾಗಿದೆ ಎಂದು ಹೇಳಿದರು.ಸುಖ ಸಮೃದ್ಧಿಗಳುನೆಲೆಗೊಳ್ಳಲು ಸಂಸ್ಕಾರ ಬಹಳ ಮುಖ್ಯ ಸತ್ಯ ಶುದ್ಧ ಸಂಸ್ಕಾರ ಬಲದಿಂದ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು ಪ್ರಶಾಂತ ದೇವರು ಅಯ್ಯನಳ್ಳಿ ಹಿರೇಮಠ ಪೂಜೆಯಲ್ಲಿ ಪಾಲ್ಗೊಂಡಿದ್ದರು
  ವಿಶೇಷ ಪೂಜೆ ನಿಮಿತ್ತ ದೇವಿಗೆ ನಾನಾ
ವಿಧದ ಹೂವಿನ ಅಲಂಕಾರ ಮಾಡಲಾಗಿತ್ತು ದೇವಾಲಯವನ್ನು ಮಾವಿನ ತಳಿರು ತೋರಣ ಬಾಳೆಕಂದುಗಳಿಂದ ಶೃಂಗರಿಸಿದ್ದರೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಭಕ್ತರ ಕಣ್ಮನ ಸೆಳೆಯಿತು    ರಾತ್ರಿ 8 ಗಂಟೆಗೆ ಸರಿಯಾಗಿ ಅರ್ಚಕರು ಅಮ್ಮನವರಿಗೆ ಕೋಡಿಮಠದ ಮಹಾ ತಪಸ್ವಿ ಲಿಂಗೈಕ್ಯ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಗೆ ಅರ್ಚಕರು ಪೂಜೆ ಸಲ್ಲಿಸಿ ಕರ್ಪೂರದಾರತಿ  ಬೆಳಗಿದರು  ನಂತರ ಶ್ರೀಮತಿ ಭಾಗ್ಯಮ್ಮ ಹೆಚ್ ಎಂ ಬಸವರಾಜ್ ಮತ್ತು ಮಕ್ಕಳು ಹಿರಿಹಾದರಹಳ್ಳಿ
ಬಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದ್ದರು     ಮಾಡಾಳು ಗ್ರಾಮಸ್ಥರು ಸೇರಿದಂತೆ ಸೀತಾಪುರ ಕೊಪ್ಪಲು ಎರೆಹಳ್ಳಿ ವೈಜಿಹಳ್ಳಿ ಈ ಹೊಸಳ್ಳಿ ಕಿತ್ತನಕೆರೆ ದೋಣನ ಕಟ್ಟೆ  ಶಂಕರನಹಳ್ಳಿ ಕಡಲ ಮಗೆ ಡಿ ಎಂ ಕುರ್ಕೆ ಶಶಿ ವಾಳ ರಾಂಪುರ ಹಾರನಹಳ್ಳಿ ನ ಅಣ್ಣಾಯಕನಹಳ್ಳಿ ಸುತ್ತಮುತ್ತಲ ಗ್ರಾಮ ಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು

Share This Article
Leave a Comment

Leave a Reply

Your email address will not be published. Required fields are marked *