*ಶ್ರೀ ಪಾಂಡುರಂಗ ರುಕುಮಾಯಿಯವರ  89ನೇ ವರ್ಷದ ಅದ್ದೂರಿ ದಿಂಡಿ ಮಹೋತ್ಸವ*

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

*ಶ್ರೀ ಪಾಂಡುರಂಗ ರುಕುಮಾಯಿಯವರ  89ನೇ ವರ್ಷದ ಅದ್ದೂರಿ ದಿಂಡಿ ಮಹೋತ್ಸವ*


ಹಾಸನ ಜಿಲ್ಲೆ ಅರಸೀಕೆರೆ ನಗರದಲ್ಲಿರುವ  ಶ್ರೀ ಪಾಂಡುರಂಗ ರುಕ್ಕುಮಾಯಿಯವರ 89ನೇ ವರ್ಷದ ಅದ್ದೂರಿ ದಿಂಡಿ ಮಹೋತ್ಸವ ಸಮಾರಂಭವನ್ನು  ದಿನಾಂಕ 20 4 26 ಅಂದರೆ ಸೋಮವಾರ ಮತ್ತು 21ನೇ  ತಾರೀಕು ಮಂಗಳವಾರ ನಡೆಯಲಿದೆ ಎಂದು ಅರಸೀಕೆರೆ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ನಾಜರೆ ನರೇಶ್ ತಿಳಿಸಿದ್ದಾರೆ
ಸೋಮವಾರ ಸಂಜೆ ಆರಕ್ಕೆ ಶ್ರೀ ಸಂತ ಸಾಮ್ರಾಟ ಜ್ಞಾನದೇವರ ವಿರಚಿತ ಶ್ರೀ ಜ್ಞಾನೇಶ್ವರಿ ಗ್ರಂಥದ ಪೋತಿಸ್ಥಾಪನೆ  ನಂತರ ಏಳು ಗಂಟೆಯಿಂದ ಕೀರ್ತನೆ ಖ್ಯಾತ ಕೀರ್ತನೆಕಾರರಾದ ಬಂಕಾಪುರದ  ಶ್ರೀ ಹ ಭ್ ಪ ಭಾನು ದಾಸ್ ಸರ್ವದೇ . ನಂತರ ಮಂಗಳವಾರ ಬೆಳಗ್ಗೆ 5 ರಿಂದ 6:30ವರೆಗೆ ಕಾಕಡಾರತಿ ಬೆಳಗ್ಗೆ 9:00 ರಿಂದ 11 ಗಂಟೆಯವರೆಗೆ ಶ್ರೀ ಪಂಡರಿ ಸಾಂಪ್ರದಾಯಿಕ ಭಜನೆ ಹಾಗೂ ಕೀರ್ತನೆ  ನಂತರ ಶ್ರೀ ಪಾಂಡುರಂಗ ರುಕ್ಕುಮಾಯಿ ಅವರಿಗೆ ಮಹಾಮಂಗಳಾರತಿ  ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಮತ್ತು  ಮಂಗಳವಾರ ಸಂಜೆ ಐದು ಮೂವತ್ತರಿಂದ ಶ್ರೀ ಪಾಂಡುರಂಗ ರುಕು ಮಾಯಿ ಅವರ ಪಂಡರಿ ಭಜನೆಯೊಂದಿಗೆ ಅರಸೀಕೆರೆ ನಗರದ ರಾಜಭೀದಿಗಳಲ್ಲಿ ರಾತ್ರಿ 7:00ಗೆ ಉತ್ಸವ  ನಂತರ ರಾತ್ರಿ 10 ಗಂಟೆಗೆ ಶ್ರೀ ಪಾಂಡುರಂಗ ರುಕ್ಕು ಮಾಯಿ ಅವರ ಶಯನೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ  ಈ ಸಮಾರಂಭದಲ್ಲಿ  ಖ್ಯಾತ ವೀಣೆ ಕರಿ ಹ ಭ ಪ ಡಿ ಮಂಜುನಾಥ ರಾವ್ ಭಾರಟಿಕೆ. ವಾರ್ ಕರಿಗಳಾದ ಆ ಬ ಪ ಎಸ್ ಕಿರಣ್ ಕಾಂಗೋಕರ್. ಹಾಗೂ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ನಾಗರಾಜ್  ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಂದು ಸಮಾಜದ ಅಧ್ಯಕ್ಷರಾದ  ನಾಜರೇ ನರೇಶ್ ತಿಳಿಸಿದ್ದಾರೆ

ಸಮಾರಂಭಕ್ಕೆ ಶಾಸಕರಿಗೆ ಆಹ್ವಾನ

ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ. ಕೆ   ಎಂ ಶಿವಲಿಂಗೇಗೌಡ ಮತ್ತು ಅರಸಿಕೆರೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬಿಎಸ್ ಅರುಣ್ ಕುಮಾರ್ ತಾಲೂಕ್ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಗಿಜಿ ಹೇಳಿ ಧರ್ಮ ಶೇಖರ್   ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷರಾದ ಎಮ್ ಸಮೀವುಲ್ಲಾ  ನಗರಸಭೆ ಮಾಜಿ ಉಪಾಧ್ಯಕ್ಷರಾದ ಎಮ್ ಮನೋಹರ್ ಮೇಸ್ತ್ರಿ  ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಮಾಜದ  ಮುಖಂಡರು ತಿಳಿಸಿದ್ದಾರೆ

Share This Article
Leave a Comment

Leave a Reply

Your email address will not be published. Required fields are marked *