ಸ್ವರ್ಣಗೌರಿ ಪುಣ್ಯಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಾಲಯದ ಕಾಮಗಾರಿಯನ್ನು ವೀಕ್ಷಿಸಿದ ಕೋಡಿಮಠದ ಶ್ರೀಗಳು

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು 
ಅರಸೀಕೆರೆ: ತಾಲೂಕಿನ ಮಾಡಾಳು   ಗ್ರಾಮದ ಲ್ಲಿರುವ ಮೂಲಸ್ಥಾನ ಶ್ರೀ ಸ್ವರ್ಣಗೌರಿ ಪುಣ್ಯಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ  ದೇವಾಲಯದ ಕಾಮಗಾರಿಯನ್ನು ಹಾರನಹಳ್ಳಿ ಕೋಡಿಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ವೀಕ್ಷಿಸಿದರು

ಬುದುವಾರ ಸಂಜೆ ಮಾಡಾಳು ಗ್ರಾಮಕ್ಕೆ ಆಗಮಿಸಿದ ಶ್ರೀಗಳು, ದೇವಾಲಯದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿಗುತ್ತಿಗೆದಾರ ಹಾಗೂ ಶಿಲ್ಪಿ ವಿನಾಯಕ ರೊಂದಿಗೆಮಾಹಿತಿ ಪಡೆದರು. ನಭಕ್ತರನ್ನುದ್ದೇಶಿಸಿ ಮಾತನಾಡಿದ  ಸ್ವಾಮೀಜಿ ನೂತನ ದೇವಾಲಯದ ಕಟ್ಟಡ ಕಾಮಗಾರಿ ಮುಂದಿನ ಶ್ರಾವಣ ಮಾಸದಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.

ದೇವಾಲಯದ ನಿರ್ಮಾಣವು ಭಕ್ತರ ಸಹಕಾರ ಮತ್ತು ನಿಷ್ಠೆಯಿಂದ ಮುಂದುವರಿಯಬೇಕಿದೆ. ಯಾವುದೇ ಗೊಂದಲಗಳಿಗೆ ಒಳಗಾಗದೆ ಎಲ್ಲರೂ ದೇವಾಲಯದ ಕಾರ್ಯಗಳಲ್ಲಿ ತೊಡಗಿ, ಕಾಯಕಯೋಗಿಗಳಾಗಿ ಸೇವೆ ಸಲ್ಲಿಸಬೇಕುಎಂದು ಹೇಳಿದರು. ಬಸವಣ್ಣನವರ ತತ್ವದಂತೆ ಕಾಯಕ ಮತ್ತು ಭಕ್ತಿಯೇ ಜೀವನದ ಮೂಲ ಧ್ಯೇಯವಾಗಿದ್ದು, ಫಲಾಪೇಕ್ಷೆಯನ್ನು ಭಗವಂತನಿಗೆ ಬಿಟ್ಟರೆ ಸಾಕು ಎಂದು ಮಹಾಸ್ವಾಮೀಜಿ ಕಿವಿಮಾತು ಹೇಳಿದರು.

ಸ್ವರ್ಣಗೌರಿ ದೇವಿಯ ಈ ಪುಣ್ಯಕ್ಷೇತ್ರವು ಮುಂದಿನ ದಿನಗಳಲ್ಲಿ ನಾಡಿನ ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆಯಬೇಕು. ಅದಕ್ಕಾಗಿ ನಾಡಿನ ಎಲ್ಲ ವರ್ಗದ ಜನರು ಭಕ್ತಿಭಾವದಿಂದ ದೇವಾಲಯದ ಅಭಿವೃದ್ಧಿಗೆ ಕೈಜೋಡಿಸಿ ಈ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿ ಭಕ್ತ ಸಮೂಹದ ಮೇಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿಶ್ರೀ ಸ್ವರ್ಣಗೌರಮ್ಮನವರ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ನಟರಾಜ್, ಗೌರವಾಧ್ಯಕ್ಷ ಮಲ್ಲಿಕಾರ್ಜುನಪ್ಪ  ,ಮಾಡಾಳು ಶಿವಲಿಂಗಪ್ಪ ಮಹದೇವಪ್ಪ ಎಂ ವಿ ಸೋಮಶೇಖರ್  ನಂಜುಂಡ ಶಟ್ರು, ಜೊಮ್ಮ ಸಮುದ್ರದ ಮಲ್ಲಣ್ಣ, ಮಹೇಶ್ವರಪ್ಪ, ಬೋರ್‌ವೆಲ್ ನಟರಾಜು, ಎಂ ಎಸ್ ಮರಳೇಗೌಡ ಎಂ ಜಿ ಶಿವಣ್ಣಅಶೋಕ್, ಹೊಸಹಳ್ಳಿ ಶಿವಣ್ಣ, ದಲಿತ ಮುಖಂಡ ಚಂದ್ರಪ್ಪ, ತಿಮ್ಮಯ್ಯ, ದಾಸಪ್ಪ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಅನೇಕ ಭಕ್ತರು ಉಪಸ್ಥಿತರಿದ್ದರು.   ಮಾಡಾಳು ನಂದೀಶ್ ಕುಮಾರ್

Share This Article
Leave a Comment

Leave a Reply

Your email address will not be published. Required fields are marked *