ಅರಸೀಕೆರೆ ತಾಲೂಕಿನ ಮಾಡಾಳು ಸ್ವರ್ಣಗೌರಿ ಶ್ರೀ ಕ್ಷೇತ್ರದಲ್ಲಿ  ಅದ್ದೂರಿಯಾಗಿ ನಡೆದ ಅಮಾವಾಸ್ಯೆ ಪೂಜೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧ ಹೊಂದಿರುವ ಪುಣ್ಯಕ್ಷೇತ್ರ ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಜರುಗಿತು             ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ದೂರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಂಕಲ್ಪದಂತೆ ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳ ಅಮಾವಾಸ್ಯೆ ಯೆಂದು ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ಬಾರಿಯೂ ಸಹ ಧಾರ್ಮಿಕ ವಿಧಿ ವಿಧಾನಗಳಿಂದ ಅಮ್ಮನವರಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಲಾಯಿತು       ಪೂಜೆ ಯ ಹಿನ್ನೆಲೆಯ ಲ್ಲಿ   ದೇವಾಲಯವನ್ನು ತಳಿರು ತೋರಣ ಬಾಳೆ ಕಂದುಗಳಿಂದ ಶೃಂಗರಿಸಿದ್ದರೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು           ಪೂಜೆ ಅಂಗವಾಗಿ ಸ್ವರ್ಣ ಗೌರಮ್ಮ ದೇವಿ ಭಾವಚಿತ್ರವನ್ನು ಬಗೆ ಬಗೆಯ ಹೂಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು ರಾತ್ರಿ 8.30 ಗಂಟೆಗೆ ಸರಿಯಾಗಿ ಕೋಡಿಮಠದ ಮಹಾ ತಪಸ್ವಿಲಿಂಗೈಕ್ಯ ಶಿವಲಿಂಗ ಜ್ಜಯ್ಯ ಮೂರ್ತಿಗೆ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರಿಗೆ ಪೂಜೆ ಸಲ್ಲಿಸಿ ಕರ್ಪೂರದಾರತಿ ಮೂಲಕ ಮಹಾಮಂಗ ಳಾರತಿಯನ್ನು ನೆರವೇರಿಸಲಾಯಿತು ಬಂದ ಭಕ್ತಾದಿಗಳಿಗೆ ಕಿತ್ತನ ಕೆರೆ ಗ್ರಾಮದ ಶೆಟ್ರು ವಂಶಸ್ಥರಿಂದ ಅನ್ನದಾಸೋ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಮಾಡಾಳು ಸೇರಿದಂತೆ ಸೀತಾಪುರ ಕೊಪ್ಪಲು ಎರೆಹಳ್ಳಿ ವೈಜಿಹಳ್ಳಿ ದಿಬ್ಬೂರು ಶಶಿ ವಾಳ ಡಿ ಎಂ ಕುರ್ಕೆ   ರ ಹೊಸಳ್ಳಿ ಕಿತ್ತನಕೆರೆ ದೋಣ ನಕಟ್ಟೆ ಬೊಮ್ಮಸಮುದ್ರ ಶಂಕರನಹಳ್ಳಿ ಕಡಲ ಮಗೆ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು

Share This Article
Leave a Comment

Leave a Reply

Your email address will not be published. Required fields are marked *