ಸಕಲೇಶಪುರ : ಸಕಲೇಶಪುರದಲ್ಲಿ ಬೆಳ್ಳಂ ಬೆಳಗ್ಗೆ‌ ಜೆಸಿಬಿ ಘರ್ಜನೆ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ.

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!


ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಪಟ್ಟಣದ ಹಳೆ ಬಸ್‌ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ, ಹಳೆ ತಾಲ್ಲೂಕು ಕಚೇರಿ ಜಾಗ, ಬಿ.ಎಂ. ರಸ್ತೆ ಹಾಗೂ ಹೊಸ ಬಸ್‌ ನಿಲ್ದಾಣಕ್ಕೆ ತೆರಳಿ ಸುಮಾರು 2 ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿಯೇ ಪಟ್ಟಣದ ಸಮಸ್ಯೆಗಳನ್ನು ಪರಿಶೀಲಿಸಿದರು. ಪಟ್ಟಣದ ಹಳೆ ಬಸ್‌ ನಿಲ್ದಾಣ ಮುಂಭಾಗ ಹಾಗೂ ಅಂಚೆ ಕಚೇರಿ ಪಕ್ಕದಲ್ಲಿ ಫುಟ್‌ಪಾತ್‌ ಅಕ್ಕಪಕ್ಕ ಬೀದಿ ಬದಿಯ ವ್ಯಾಪಾರಿಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಪುರಸಭೆ ಮುಖ್ಯಾಧಿಕಾರಿಗೆ ಖಡಕ್ ಆದೇಶ ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟು, ಪಾದಚಾರಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದೀರಾ? ಜನ ಹೇಗೆ ನಡೆದಾಡುತ್ತಾರೆ? ಹಾಸನ ಕಡೆಯಿಂದ ಬರುವ ಬಸ್‌ಗಳು ಹಾಗೂ ಹಾಸನದ ಕಡೆಗೆ ಹೋಗುವ ಬಸ್‌ಗಳು ಹಳೆ ಬಸ್‌ ನಿಲ್ದಾಣ ಮುಂಭಾಗ ರಸ್ತೆಯಲ್ಲಿ ನಿಂತರೆ ಜನ ಎಲ್ಲಿ ನಡೆದಾಡಬೇಕು? ಪಟ್ಟಣದ ಈ ರಾಜಬೀದಿಯಲ್ಲಿ ಫುಟ್‌ಪಾತ್‌ ಅತಿಕ್ರಮಣ ಸಂಪೂರ್ಣ ತೆರವುಗೊಳಿಸಬೇಕು. ಅಂಗಡಿ ಮುಂಗಟ್ಟುಗಳ ಮುಂದೆ ಫುಟ್‌ಪಾತ್‌ಗಳ ಮೇಲೆ ಯಾವುದೇ ವಸ್ತು, ಫಲಕಗಳನ್ನು ಇಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ನೌಕರರ ಸಂಘದಿಂದ ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಸ್ಥಳ, ಕಸ ಎಸೆಯುವ ತೊಟ್ಟಿ ಆಗಿರುವುದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಪಟ್ಟಣದ ಹೃದಯ ಭಾಗದಲ್ಲಿ ಇಂತಹ ಗುಂಡಿಗಳನ್ನು ನೆಲ ಮಟ್ಟದವರೆಗೆ ಮುಚ್ಚಿ, ಸ್ವಚ್ಛತೆ ಹಾಗೂ ಸುರಕ್ಷತೆ ಕಾಯ್ದುಕೊಳ್ಳಲು ಕೂಡಲೇ ಸೂಚನೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಹೇಳಿದರು.
ಇಂದು  29 ಡಿಸೆಂಬರ್ 2025 ಸಕಲೇಶಪುರದಲ್ಲಿ ಬೆಳ್ಳಂಬೆಳ್ಳಗೆ ಜೆಸಿಬಿ ಸದ್ದು: ಫುಟ್‌ಪಾತ್‌ ಮೇಲಿದ್ದ ನೂರಾರು ಅಕ್ರಮ ಅಂಗಡಿಗಳ ತೆರವು, ವ್ಯಾಪಾರಿಗಳ ಆಕ್ರೋಶ
ಸಕಲೇಶಪುರ ಮಲೆನಾಡಿನ ಹೆಬ್ಬಾಗಿಲು. ಪಶ್ಚಿಮಘಟ್ಟದ ನಿಸರ್ಗದ ಮಡಿಲಿನಲ್ಲಿ ಇರುವ ಇಂತಹ ಸುಂದರವಾದ ಊರಿನ ಮುಖ್ಯ ರಸ್ತೆಯನ್ನೇ ಸರಿಯಾಗಿ ನಿರ್ವಹಣೆ ಮಾಡಿಲ್ಲ. ರಸ್ತೆ ಬದಿಯಲ್ಲಿ ಪಾದಚಾರಿಗಳು ಹೇಗೆ ನಡೆದಾಡುತ್ತಾರೆ? ರಸ್ತೆ ಬದಿಯಲ್ಲಿ ಈ ರೀತಿ ಪ್ಲಾಸ್ಟಿಕ್ ಕಟ್ಟಿಕೊಂಡು ವ್ಯಾಪಾರ ಮಾಡುವುದಕ್ಕೆ ಯಾರು ಇವರಿಗೆ ಅನುಮತಿ ಕೊಟ್ಟಿದ್ದು? ನೀವೆಲ್ಲಾ ಏನು ಮಾಡುತ್ತಿದ್ದೀರಿ? ವ್ಯಾಪಾರಿಗಳು ಇಲ್ಲಿ ಇಲ್ಲವಾದರೆ, ಬೇರೆ ಕಡೆ ಮಾಡುತ್ತಾರೆ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಕಲೇಶಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-75ರ ಫುಟ್‌ಪಾತ್‌ಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. ಸುಮಾರು ಐದು ವರ್ಷಗಳಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
•ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ತೆರವುಗೊಳಿಸಬೇಕೆಂಬ ಆದೇಶವಿದ್ದರೂ, ಏಕಾಏಕಿ ಬುಲ್ಡೋಜರ್‌ ಸದ್ದಿಗೆ ವ್ಯಾಪಾರಿಗಳ ಆಕ್ರೋಶ
•ಸಾರ್ವಜನಿಕರಿಂದ ಹೆಚ್ಚುತ್ತಿದ್ದ ದೂರಿನ ಹಿನ್ನಲ್ಲೇಯಲ್ಲಿ ತೆರವು ಕಾರ್ಯಚರಣೆ ನಡೆಸಲಾಗಿದೆ ಎಂದ ಅಧಿಕಾರಿಗಳು
• ಬೀದಿಬದಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

✍🏻 ಭರತ್ ಮಲ್ನಾಡ್

Share This Article
Leave a Comment

Leave a Reply

Your email address will not be published. Required fields are marked *