ಮಾಡಾಳು ಗ್ರಾಮದ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಗುರುವಾರ ಸಂಜೆ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆಯನ್ನು ನೂರಾರು ಭಕ್ತರ ಸಮ್ಮುಖದಲ್ಲಿಶ್ರದ್ಧಾ ಭಕ್ತಿಯೊಂದಿಗೆ ಗುರುವಾರ ಸಂಜೆ ಸಲ್ಲಿಸಲಾಯಿತು ಲೋಕಕಲ್ಯಾಣಾರ್ಥವಾಗಿ ಸಂಪ್ರದಾಯದಂತೆ ಪ್ರತಿ ತಿಂಗಳು ಅಮಾ ವಾಸ್ಯೆ ಯಂದು ಗ್ರಾಮ ದ ಹೊರ ಭಾಗದ ಶಿವಬಸವ ಕುಮಾರ ಆಶ್ರಮ ರಸ್ತೆ ಬದಿ ಯಿ ರುವ ಶ್ರೀ ಸ್ವರ್ಣ ಗೌರಮ್ಮ ದೇವಿಗೆ ವಿಶೇಷ ಪೂಜೆಯನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನಡೆಸಿಕೊಂಡು ಬರಲಾಗುತ್ತಿದೆ ಪೂಜೆಯ ಹಿನ್ನಲೆಯಲ್ಲಿ ದೇವಾಲಯವನ್ನು ತಳಿರು ತೋರಣ ಬಾಳೆ ಕಂದುಗಳಿಂದ ಶೃಂಗರಿಸಿದ್ದರೆ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿದ್ದು ನೋಡುಗರ ಕಣ್ಮನ ಸೆಳೆಯಿತು ಇಂದು ಮುಂಜಾನೆ ಬ್ರಾಹ್ಮಿ ಮುಹೂ ರ್ತದಲ್ಲಿ ಅಮ್ಮನವರಿಗೆ ಕುಂಕುಮಾರ್ಚನೆ ಹಾರನಹಳ್ಳಿ ಕೋಡಿಮಠದ ಮಹಾ ತಪಸ್ವಿ ಲಿಂಗೈಕ್ಯ ಶಿವಲಿಂಗಜ್ಜಯ್ಯನವರ ಮೂರ್ತಿಗೆ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸ ವೇಶ್ವರ ಸ್ವಾಮಿಯ ವರಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚ ನೆಯನ್ನು ಪುರೋಹಿತರು ಭಕ್ತರ ಸಮ್ಮುಖದಲ್ಲಿಧಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿಸಿದರು ಸಂಜೆ 8:30ಕ್ಕೆ ಸರಿಯಾಗಿ ಸ್ವರ್ಣ ಗೌರಮ್ಮ ದೇವಿಯ ವರಿಗೆ ಪೂಜೆ ಸಲ್ಲಿಸಿ ಕರ್ಪೂರದಾರತಿ ಸಲ್ಲಿಸಲಾಯಿತು ನಂತರ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಭಕ್ತವೃಂದದವರಿಂದ ಬಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಮಾಡಾಳು ಗ್ರಾಮ ಸೇರಿದಂತೆ ಸೀತಾಪುರ ಕೊಪ್ಪಲು ಡಿ ಎಂ ಕುರ್ಕೆ ಶಶಿವಾಳ ರಾಂಪುರ ಹೊಳಲ್ಕೆರೆ ಹರಳಕಟ್ಟ ವೈ ಜಿ ಹಳ್ಳಿ ಪಿ ಹೊಸ ಹಳ್ಳಿ ಕಿತ್ತನಕೆರೆ ದೊಣನಕಟ್ಟೆ ಬೊಮ್ಮ ಸಮುದ್ರಶಂಕರ ನಹಳ್ಳಿ ಕಡಲ ಮಗೆ ಮುಂತಾದ ಗ್ರಾಮಗಳಿಂದ ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು







