ಅತಿವೇಗ ತಿಥಿ ಬೇಗ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!



ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಚಿಕ್ಕೂರು ಗ್ರಾಮದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರಸೀಕೆರೆಯ ಹಿರಿಯ ಪ್ರಸಿದ್ಧ ವಕೀಲರಾದ ವಿಜಯಕುಮಾರ್ ಆರ್  ಇವರು ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಕಾನೂನಿನಬಗ್ಗೆ ಅರಿವು ಮೂಡಿಸುತ್ತ ಪ್ರತಿಯೊಬ್ಬ ಚಾಲಕನು ಚಾಲನ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಹಾಗೆಯೆ ವಾಹನಗಳಿಗೆ ವಿಮೆ ಮಾಡಿಸುವುದು ಬಹು ಮುಖ್ಯವಾಗಿದೆ. ಅತಿವೇಗ ತಿಥಿಬೇಗ ಅವಸರವೇ ಅಪಾಯಕ್ಕೆ ಕಾರಣ ನಿದಾನವಾಗಿ ವಾಹನ ಚಲಾಯಿಸಿ ಕಾನೂನು ಪಾಲಿಸಿ ಎಲ್ಲರೂ ಕಾನೂನಿನಮಂದೆ ಸಮಾನರು. ಕಾನೂನನ್ನು ಗೌರವಿಸಬೇಕು ಕಾನೂನಿನ ದುರುಪಯೋಗ ಮಾಡಿಕೊಳ್ಳಬಾರದು ನೀರು ಗಾಳಿ ಆಹಾರದಂತೆ ಕಾನೂನಿನ ಅರಿವು ಕೂಡ ಬಹುಮುಖ್ಯವಾದದ್ದು ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ ಪ್ರತಿಯೊಂದು ಸಮಸ್ಯೆಗಳನ್ನು  ಜನತಾ ನ್ಯಾಯಾಲಯದ ಮೂಲಕ ಪರಿಹರಿಸಿಕೊಳ್ಳುವ ಅವಕಾಶಗಳಿವೆ. ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ಶಾಂತಿಯುತ ಸಹಭಾಳ್ವೆ ನಡೆಸಬೇಕು ಎಂದು ಕರೆನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಕೀಲರಾದ ಶ್ರೀ ವಿರೂಪಾಕ್ಷಪ್ಪ ಟಿ ಟಿ ಅವರು ಪೋಕ್ಸೋ ಕಾಯಿದೆಯನ್ನು ಕುರಿತು ಅರಿವು ಮೂಡಿಸಿದರಲ್ಲದೆ ಪಹಣಿ ಎಂದರೇನು ಅದರಲ್ಲಿರುವ ಹದಿಮೂರು ಅಂಶಗಳು ಯಾವುವು ಎಂಬುದನ್ನು ಎಳೆಎಳೆಯಾಗಿ ವಿವರಿಸಿದರು. ಜಮೀನು ಹಾಗೂ ದಾರಿ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಕಾನೂನಿನ ಹರಿವು ಮೂಡಿಸಿದರು   ಆಕರ್ಷಣೆ ಹಾಗೂ ಮೊಬೈಲ್ ದುರ್ಬಳಕೆಗಳಿಂದ ಬಾಲ್ಯವಿವಾಹ ಹೆಚ್ಚುತ್ತಿವೆ  ತಂತ್ರಜ್ಜಾನದ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಪ್ರಾದ್ಯಾಪಕ ಡಾ. ಶಿವಕುಮಾರ್ ಅವರು ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಚಿಕ್ಕೂರು ಗ್ರಾಮಸ್ಥರು ಸಹಕಾರ ನೀಡುತ್ತಿರುವ ಬಗೆಯನ್ನು ಶ್ಲಾಗಿಸಿದರು. ಶಿಭಿರಾಧಿಕಾರಿಗಳಾದ ಪ್ರಾದ್ಯಾಪಕ ಕುಮಾರ್ ಡಾ. ಹರೀಶ್ ಡಾ.ವಸಂತಕುಮಾರಿ ಹಾಗೂ ಚಿಕ್ಕೂರಿನ ಗಂಗಾಧರಮೂರ್ತಿ ಸತೀಶ್ ಪುಟ್ಟೇಗೌಡ ಉಮೇಶ್ ಜಯಶಂಕರ್ ತೋಪೇಗೌಡ ಕೃಷ್ಣ ಮೂರ್ತಿ ಸೇರಿದಂತೆ ನೂರಾರು ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಸಭಾಕಾರ್ಯಕ್ರಮದ ನಂತರ  ಶಿಭಿರಾರ್ಥಿಗಳು ಕನ್ನಡ ನಾಡು ನುಡಿ ಹಾಗೂ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಭಿಸುವ ಮೌಲ್ಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು

Share This Article
Leave a Comment

Leave a Reply

Your email address will not be published. Required fields are marked *