ಎಚ್ ವಿ ನ್ಯೂಸ್

ಅರಸೀಕೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಹಾಲಯ ಅಮಾವಾ ಸ್ಯೆ ಅಂಗವಾಗಿ ಮೂಗುತಿ ಸುಂದರಿ ಅಮ್ಮನವರಿಗೆ ನೂರಾರು ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಭಾನುವಾರ ಸಂಜೆ ವಿಶೇಷ ಪೂಜೆಯನ್ನು ವಿಜೃಂಭಣೆಯಿ೦ದ ನೆರವೇರಿಸಿದರು ಪ್ರತಿ ತಿಂಗಳು ದೇವಾಲಯದಲ್ಲಿ ಲೋಕಕಲ್ಯಾಣ ರ್ಥವಾಗಿ ಅಮಾವಾಸ್ಯೆ ದಿನದಂದು ಧಾರ್ಮಿಕ ಪೂಜಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳ ಲಾಗುತ್ತದೆ ಇಂದು ಸಹ ಅಮ್ಮನವ ರಿಗೆ ಕುಂಕುಮಾರ್ಚನೆ ಸುಕ್ಷೇತ್ರ ಕೂಡಿಮಠದ ಲಿಂಗೈಕ್ಯ ಶ್ರೀ ಶಿವಲಿಂಗ ಸ್ವಾಮಿ ವಿಗ್ರಹ ಹಾಗೂ ಗ್ರಾಮ ದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಯನ್ನು ಸಂಪ್ರದಾಯ ದಂತೆ ಧಾರ್ಮಿಕ ವಿಧಿ ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು ದೇವಾಲಯದಲ್ಲಿ ಮುಂಜಾನೆಯಿಂದಲೇ ಸಡಗರ ಸಂಭ್ರಮ ಮನೆ ಮಾಡಿತ್ತು ತಾಯಿ ಜಗನ್ಮಾತೆ ಗೌರಮ್ಮ ದೇವಿಯನ್ನು ಬಣ್ಣ ಬಣ್ಣದ ಹೂಗಳಿಂ ದ ಅಲಂಕರಿಸಿದ್ದು ಭಕ್ತ ರ ಗಮನ ಸೆಳೆಯಿತು ದೇವಾಲಯವನ್ನುತಳಿರು ತೋರಣ ಬಾಳೆಕಂದುಗಳಿಂದ ಶೃಂಗರಿಸಿದ್ದು ಬಣ್ಣ ಬಣ್ಣದ ಹೂಗಳು ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು ಮಹಾಮಂಗಳಾರತಿಯ ನಂತರಅತ್ತಿಗುಪ್ಪೆ ಗಂಗಮ್ಮಕುಟುಂಬ ವರ್ಗದವರುದಾಸೋಹದ ವ್ಯವಸ್ಥೆ ಕಲ್ಪಿಸಿದ್ದರು ಮಾಡಾಳು ಸೇರಿದಂತೆ ಸೀತಾಪುರ ಕೊಪ್ಪಲು ಡಿಎಂ ಕುರ್ಕೆ ಶಶಿವಾಳ ರಾಂಪುರ ಹರಳಕಟ್ಟಸೊಪ್ಪಿನಳ ವೈ ಜಿ ಹಳ್ಳಿ ಪಿ ಹೊಸಹ ಳ್ಳಿ ಕಿತ್ತನ ಕೆರೆ ದೊಣನಕ ಟ್ಟೆ ಬೊಮ್ಮಸಮುದ್ರ ಶಂಕರನಹಳ್ಳಿ ಕಡಲ ಮಗೆ ಮುಂತಾದ ಗ್ರಾಮಗಳ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು