Home ರಾಜ್ಯ ಹಾಸನಾಂಬ ದೇವಿಯ  ದರ್ಶನಕ್ಕೆ ಖುದ್ದು ಹಾಜರಿದ್ದು ಜನಸಂದಣಿ ನಿಯಂತ್ರಿಸಿದ ಉಸ್ತುವಾರಿ ಸಚಿವರು

ಹಾಸನಾಂಬ ದೇವಿಯ  ದರ್ಶನಕ್ಕೆ ಖುದ್ದು ಹಾಜರಿದ್ದು ಜನಸಂದಣಿ ನಿಯಂತ್ರಿಸಿದ ಉಸ್ತುವಾರಿ ಸಚಿವರು

48
0


ಹಾಸನ  ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ಅವರು ಶುಕ್ರವಾರ ಸಂಜೆಯಿAದ ಶನಿವಾರ ಬೆಳಗ್ಗಿನ ಜಾವ 4 ಗಂಟೆಯವರೆಗೆ ರಾತ್ರಿ ಇಡೀ ಹಾಸನಾಂಬ ದೇವಾಲಯದಲ್ಲೇ ಖುದ್ದು ಹಾಜರಿದ್ದು, ಸಾರ್ವಜನಿಕರಿಗೆ ಸುಗಮ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಶನಿವಾರ ಮತ್ತೆ ಬೆಳಗ್ಗೆ 7.30ಕ್ಕೇ ಫೀಲ್ಡ್ಗೆ ಇಳಿದು ಜನರಿಗೆ ಸುಗಮ ದರ್ಶನದ ಜೊತೆಗೆ ಶೌಚಾಲಯಗಳ ನೈರ್ಮಲ್ಯವನ್ನು ಪರಿಶೀಲಿಸಿದರು. ನಂತರ ದೇವಾಲಯದ ಆವರಣದಲ್ಲಿ ಖುದ್ದು ನಿಂತು ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗುವಾಗ ದರ್ಶನದ ಬಾಗಿಲ ಬಳಿ ಬಂದ ತಕ್ಷಣ ದೇವಿಯ ದರ್ಶನ ಮಾಡುತ್ತಾ ಸಾಗಿ ಇತರರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಧ್ವನಿ ವರ್ಧಕದ ಮೂಲಕ ಮನವಿ ಮಾಡುತ್ತಿದ್ದರು.

ನಾನು ಗಮನಿಸಿದ್ದೇನೆ ಕೆಲವರು ರ‍್ಯಾಂಪ್ ಹತ್ತಿದ ತಕ್ಷಣ ಅತ್ತಿತ್ತಾ ನೋಡುತ್ತಾರೆ ಹಾಗೆ ಮಾಡದೆ ಮುಂದೆ ನೋಡುತ್ತಾ ನೇರವಾಗಿ ದೇವಿ ದರ್ಶನ ಮಾಡುತ್ತಾ ಸಾಗಿ ಎಂದರಲ್ಲದೆ, ಭಕ್ತಾದಿಗಳು ಯಾವುದೇ ಗೊಂದಲಕ್ಕೀಡಾಗದೆ ದೇವಿ ದರ್ಶನ ಪಡೆದು ಪುನೀತರಾಗಿ ಎಂದು ತಿಳಿಸಿದರು. ನಿನ್ನೆ ಒಂದೇ ದಿನ 3,70,000 ಜನ ದೇವಿ ದರ್ಶನ ಪಡೆದಿದ್ದಾರೆ ಎಂದರು.

ಭಕ್ತಾದಿಗಳು ಸರಾಗವಾಗಿ ಸರತಿ ಸಾಲಿನಲ್ಲಿ ಸಾಗುವುದರ ಮೂಲಕ ಇತರರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸುತ್ತ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಸಂಸದರಾದ ಶ್ರೇಯಸ್ ಎಂ ಪಟೇಲ್, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಬಿ.ಆರ್.ಪೂರ್ಣಿಮಾ, ಉಪ ವಿಭಾಗಾಧಿಕಾರಿ ಮಾರುತಿ ಮತ್ತಿತರರು ಹಾಜರಿದ್ದರು.
**********-

LEAVE A REPLY

Please enter your comment!
Please enter your name here