Home ರಾಜ್ಯ ಹಾಸನದಲ್ಲಿ ಪರಿಸರಕ್ಕಾಗಿ ನಡಿಗೆ ಕಾರ್ಯಕ್ರಮ

ಹಾಸನದಲ್ಲಿ ಪರಿಸರಕ್ಕಾಗಿ ನಡಿಗೆ ಕಾರ್ಯಕ್ರಮ

33
0

*ಪರಿಸರಕ್ಕಾಗಿ ನಡಿಗೆ*
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನದಲ್ಲಿ ತೀವ್ರ ಬದಲಾವಣೆಗಳಾಗುತ್ತಿವೆ. ಹಿಂದೆ ನಾಲ್ಕಾರು ವರ್ಷಗಳಿಗೊಮ್ಮೆ ಜಲಪ್ರಳಯವಾಗುತ್ತಿತ್ತು ಈಗ ಪ್ರತಿದಿನ ಒಂದಲ್ಲ ಒಂದು ಕಡೆ ಮೇಘಸ್ಪೋಟ ಮತ್ತು ಜಲಪ್ರಳಯ ಆಗುತ್ತಿರುವುದನ್ನು ಕಾಣುತ್ತಿದ್ದೇವೆ, ವಾತಾವರಣದಲ್ಲಿ ಅಸಮಾತೋಲನ ಉಂಟಾಗುತ್ತಿದೆ, ಇದಕ್ಕೆಲ್ಲ ಪರಿಸರ ನಾಶವೇ ಕಾರಣವಾಗಿದೆ. ಆ ಬಗ್ಗೆ ಜಾಗೃತಿ ಮೂಡಿಸಲಿಕ್ಕಾಗಿ ಪರಿಸರಕ್ಕಾಗಿ ನಡಿಗೆ ಕಾರ್ಯಕ್ರಮವನ್ನು ದಿನಾಂಕ 24/8/2025 ರ ಭಾನುವಾರ ಬೆಳಿಗ್ಗೆ 7:00 ಗಂಟೆಗೆ ಹಾಸನದ ಎಸ್ ಎಂ ಕೃಷ್ಣ ನಗರದ ಮುಖ್ಯ ಪ್ರವೇಶ ದ್ವಾರದಿಂದ ಪ್ರಾರಂಭಿಸಲಾಗುವುದು. ಪರಿಸರಕ್ಕಾಗಿ ನಡಿಗೆಯಲ್ಲಿ ಪೂಜ್ಯ ಸ್ವಾಮೀಜಿಗಳು, ಜಿಲ್ಲಾ ಆಡಳಿತ, ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳು ಮತ್ತು ನಾಗರಿಕರು ಭಾಗವಹಿಸಬೇಕೆಂದು *’ಪರಿಸರಕ್ಕಾಗಿ ನಾವು’* ಸಂಘಟನೆಯ *ಹಾಸನ ಜಿಲ್ಲಾ ಸಮಿತಿ ಮತ್ತು ಕರ್ನಾಟಕ ರಾಜ್ಯ ಸಮಿತಿ ತಮ್ಮನ್ನು ಆಹ್ವಾನಿಸುತ್ತಿದೆ*

LEAVE A REPLY

Please enter your comment!
Please enter your name here