🙏ಇಂದಿನ ಮತ್ತು ಮುಂದಿನ ಮಾನವ ಸಮಾಜಕ್ಕೆ ಮತ್ತು ಪ್ರಕೃತಿಗೆ ಪೂರಕವಾದ ಪರಿಸರ ನಿರ್ವಹಣೆ ನಮ್ಮೆಲ್ಲರ ಹೊಣೆ.
ಇಂದಿನ ಮತ್ತು ಮುಂದಿನ ಮಾನವ ಸಮಾಜಕ್ಕೆ ಮತ್ತು ಪ್ರಕೃತಿಗೆ ಪೂರಕವಾದ ಪರಿಸರ ನಿರ್ವಹಣೆ ನಮ್ಮೆಲ್ಲರ ಹೊಣೆ ಎಂದು ಯೋಗ ಗುರುಗಳಾದ ಶ್ರೀ ನಾಗೇಶ್ ರವರು ತಿಳಿಸಿದರು. ದಿನಾಂಕ 5/06/26 ರಂದು ಶ್ರೀ ಉದ್ಭವ ಗಣಪತಿ ಯೋಗ ಕೇಂದ್ರದ ವತಿಯಿಂದ ಸತ್ಯ ಮಂಗಲ ಕೆರೆ ಪಾರ್ಕ್ ನಲ್ಲಿ ವಿಶ್ವ ಪರಿಸರ ದಿನವನ್ನು ಹೂ ಮತ್ತು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಪರಿಸರ ಸಮತೋಲನಕ್ಕಾಗಿ ಗಿಡ ನೆಡುವ ಮತ್ತು ಬೆಳೆಸುವ ಕಾರ್ಯವನ್ನು ಮಾಡುತ್ತಾ ಸಾಗೋಣ ಎಂಬ ಸಂದೇಶ ವನ್ನು ಯೋಗ ಕೇಂದ್ರದ ಅಧ್ಯಕ್ಷರಾದ ಡಾ ಚಂದ್ರಶೇಖರ್ ರವರು ನೀಡಿದರು. ಯೋಗ ಕೇಂದ್ರದ ಮಹಿಳಾ ಪ್ರಭಾರಿಗಳಾದ ಶ್ರೀಮತಿ ಶಾರದಾ ಧರ್ಮನಂದ ರವರು ಯೋಗ ಕೇಂದ್ರದ ಪ್ರಮುಖರಾದ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಡಾ. ಜಿ ಡಿ ನಾರಾಯಣ, ಶ್ರೀ ರವಿಕುಮಾರ್, ಶ್ರೀ ಶಿವಮಲ್ಲಯ್ಯ, ಶ್ರೀ ಮಂಜರಾಜ್, ಶ್ರೀ ಶಂಕರಪ್ಪ ಶ್ರೀ ಗಣೇಶ್, ಇತರ ಮಹಿಳಾ ಯೋಗ ಬಂದುಗಳು ಉಪಸ್ಥಿತರಿದ್ದರು.
ಬರುವ ಮಾನವ ಸಮಾಜಕ್ಕೆ ಪ್ರಕೃತಿ ಪರಿಸರ ನಮ್ಮೆಲ್ಲರ ಹೊಣೆ
Leave a Comment