Home ರಾಜಕಾರಣ ಸಾಧು ಸಂತರು ನೊಂದು ನೋಡಿದ ಶಾಪ ಜನ್ಮ ಜನ್ಮಾಂತರಕ್ಕೂ ತಟ್ಟುತ್ತದೆ ಕೋಡಿ ಶ್ರೀಗಳು

ಸಾಧು ಸಂತರು ನೊಂದು ನೋಡಿದ ಶಾಪ ಜನ್ಮ ಜನ್ಮಾಂತರಕ್ಕೂ ತಟ್ಟುತ್ತದೆ ಕೋಡಿ ಶ್ರೀಗಳು

ಮಾಡಾಳು  ಸಾಧು ಸಂತರ ಮಠಮಾನ್ಯರು  ನೊಂದು ನುಡಿದ ಶಾಪ ಜನ್ಮಜನ್ಮಂತರಕ್ಕೂ ಪಾಪದ ಮೂಟೆಯಾಗಿ ಕಾಡುತ್ತಾ ಬದುಕಿನಲ್ಲಿ ನೆಮ್ಮದಿ ಇಲ್ಲದೆ ತೊಂದರೆ ಅನುಭವಿಸುತ್ತಾರೆ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಂಗಳವಾರ  ತಮ್ಮ ಅಭಿಮತ ವ್ಯಕ್ತಪಡಿಸಿದರು       ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಶ್ರೀಗಳ ಸಂಕಲ್ಪ ಹಾಗೂ  ಸಾನಿಧ್ಯದಲ್ಲಿ ನಡೆದ ಕೋಡಿಮಠದ ಪರಮ ತಪಸ್ವಿ ಶಿವಲಿಂಗಜ್ಜ ಯ್ಯ ನವರ 139ನೇ ವರ್ಷದ ಕಾರ್ಯ ಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು       ಸರ್ವ ಸಂಘ ಪರಿತ್ಯಾಗಿ ಗಳಾಗಿರುವ ಸಾಧು ಸಂತರಿಗೆ ಮಾಡುವ ಅಪಪ್ರಚಾರ ನೋವು ಅವರು ವಂಶವನ್ನೇನಿರ್ನಾಮ ಮಾಡುತ್ತದೆ ಹಾಗಾಗಿ ಗುರು ಪರಂ ಪರೆಯ ಮೇಲೆ ಶ್ರದ್ದಾ ಭಕ್ತಿಯಿಂದನಡೆದುಕೊಳ್ಳುವ ಮನುಷ್ಯನನ್ನು ಹರ ಮುನಿದರೂ ಗುರು ಕಾಯುವನು ಎಂಬಂತಹ ವಿಶಿಷ್ಟ ಮಹತ್ವದ ಸ್ಥಾನ ನೀಡಲಾಗಿದೆ ಎಂದು ಹೇಳಿದರು    ಶ್ರೀ ಮಠವು ಯಾವುದೇ ಒಂದು ಜಾತಿ ಧರ್ಮಮತಕ್ಕೆ ಸೀಮಿತವಾಗಿಲ್ಲ ಸರ್ವಧರ್ಮಿಯರಿಗೂ ಹರಸಿ ಬದುಕಿಗೆ ಮಾರ್ಗದರ್ಶನ ನೀಡುವ ಮಠವಾಗಿದೆ ಎಂದು ಸ್ವಾಮೀಜಿ ತಿಳಿಸಿದರುಹಂದಿಗೂಡು ಮಠದ ಶಿವಯೋಗಿ   .ಶಿವಾಚಾರ್ಯ ಸ್ವಾಮೀಜಿ ಮಾತನಾಡಿ 12ನೇ ಶತಮಾನದ ಲ್ಲಿ ಬಸವಣ್ಣ ಸ್ಥಾಪಿಸಿದ ಮಠಗಳು ಇಂದಿಗೂ ಅದೇ ಸಿದ್ಧಾಂತ ತತ್ವದ ಅಡಿಯಲ್ಲಿಸಮಾಜಕ್ಕೆಸೇವೆ ಸಲ್ಲಿಸುತ್ತಾ ಬಂದಿವೆ ಅದರಲ್ಲೂ ವಿಶೇಷವಾಗಿ ಪುಣ್ಯಕ್ಷೇತ್ರ ಕೋಡಿಮಠವುಜಾತ್ಯಾತೀತವಾಗಿನಂಬಿ ಬರುವ ಎಲ್ಲಾ ಭಕ್ತರಿಗೂಆದರದಿಂದ ಬರಮಾಡಿಕೊಂಡು ಸನ್ಮಾರ್ಗ ತೋರುತ್ತಿ ದೆಮಠದ ಪೀಠಾಧ್ಯಕ್ಷರಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬಸವಣ್ಣನ ಆಶಯದಂತೆಜಾತಿ ಮತ ಪಂಥ ಭೇದ ಎಣಿಸದೆಎಲ್ಲರಿಗೂ ಸಾಮರಸ್ಯದ ಸಹಬಾಳ್ವೆಯ ಸಂದೇಶ ಸಾರುತ್ತಿರುವುದುಇತರೆ ಮಠಗಳಿಗೆ ಆದರ್ಶಪ್ರಾಯವಾಗಿದೆ ಎಂದುಪ್ರಶಂಸೆ ವ್ಯಕ್ತಪಡಿಸಿದರು     ಮೂಲಸ್ಥಾನ ಗೌರಮ್ಮ ದೇವಿ ಆಶಯದಂತೆನೂತನವಾಗಿ ನಿರ್ಮಾಣವಾಗುತ್ತಿಹತ್ತು ಶಕ್ತಿ ಪೀಠಗಳಂತೆ 11ನೇಶಕ್ತಿ ಪೀಠ ವಾಗಿಉಜ್ವಲವಾಗಿ ಬೆಳೆಯಲಿದ್ದು ನೊಂದು ಬರುವ ಭಕ್ತರಿಗೆ ತಾಯಿ ಜಗನ್ಮಾತೆಅಮ್ಮನವರು ಉದ್ದರಿಸಲಿದ್ದಾಳೆ ಎಂದು ತಿಳಿಸಿದರು    ಬಿಜೆಪಿ ಮುಖಂಡ ಜಿ ಬಿ ಟಿ ಬಸವರಾಜ್ ಉದ್ಯಮಿ ಕೆವಿಎನ್ ಶಿವು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಂಪುರ ಶೇಖರಪ್ಪ ಡಿಎಸ್ಎಸ್ ಜಿಲ್ಲಾಧ್ಯಕ್ಷ ಶಂಕರ್ ನಾರಾಯಣ್ ಕುರುಬ ಸಮಾಜದ ಮುಖಂಡ ಶ್ರೀಧರ್ ಮಾತನಾಡಿದರು ಸಮಾರಂಭದಲ್ಲಿ ಬೊಮ್ಮನಹಳ್ಳಿ ಶಿವಯೋಗಿ ಸ್ವಾಮೀಜಿ ಮಾಡಾಳು ನಿರಂಜನ ಪೀಠದ  ರುದ್ರಮುನಿ ಸ್ವಾಮೀಜಿ  ಮೂರು ಕಳಸು ಮಠದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಗೌರಮ್ಮ ಸೇವಾ ಸಮಿತಿ ಅಧ್ಯಕ್ಷ ಎಂಎಸ್ ನಟರಾಜ್ ಎಸ್ ಮಲ್ಲಿಕಾರ್ಜುನಪ್ಪ ಎಂಸಿ ನಟರಾಜ್ ಕೋಡಿ ಮಠದ  ಮಹದೇವಪ್ಪ ಎಂ ಜಿ ಶಿವಣ್ಣ ಮಾಡಾಳು ಶಿವಲಿಂಗಪ್ಪ ಸೋಮಶೇಖರ್ ಚಂದ್ರಪ್ಪ ದಾಸಪ್ಪ ತಿಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here