ವಿಧಾನಸಭೆ ಅಧಿವೇಶನ : ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿರುವ ರಾಜ್ಯ ಸರ್ಕಾರ ಸಂತೋಷದ ವಿಚಾರ, ಆದರೆ ಕೇವಲ ನಾಮಕಾವಸ್ಥೆಗೆ ಮೇಲ್ದರ್ಜೆಗೇರಿಸಿ ಸರ್ಕಾರ ಅದಕ್ಕನುಗುಣವಾಗಿ ಅನುದಾನ ನೀಡದೆ ವಂಚನೆ ಮಾಡಿದೆ ಹಾಗೂ ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂದು ಶಾಸಕ ಸ್ವರೂಪ ಪ್ರಕಾಶ್.
ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿರುವ ಸರ್ಕಾರ ಅದಕ್ಕನುಗುಣವಾಗಿ ಅನುದಾನ ನೀಡದೆ ವಂಚನೆ ಮಾಡಿದೆ ಎಂದು ಶಾಸಕ ಸ್ವರೂಪ ಪ್ರಕಾಶ್ ಹೇಳಿದರು.
ಅಧಿವೇಶನದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಅವರು. ಕಳೆದ ಅಧಿವೇಶನದಲ್ಲಿ ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ್ದು ಸಂತೋಷದ ವಿಚಾರ ಇದಕ್ಕೆ ನಾವು ಕೂಡ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೆವು ಆದರೆ ಕೇವಲ ನಾಮಕಾವಸ್ಥೆಗೆ ಮೇಲ್ದರ್ಜೆಗೇರಿಸಿ ಅನುದಾನ ನೀಡದೆ ಇದ್ದರೆ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮಹಾನಗರ ಪಾಲಿಕೆಗಾಗಿ ಹಾಸನದ ಸುತ್ತಮುತ್ತಲ 37 ಹಳ್ಳಿಗಳನ್ನು ನಗರಸಭೆಗೆ ಸೇರಿಸಿಕೊಂಡಿದೆ ಆದರೆ ಅವರಿಗೆ ನೀಡಬೇಕಾಗಿರುವ ಸೌಲಭ್ಯಗಳಲ್ಲಿ ವಂಚನೆ ಮಾಡಿದಂತಾಗಿದೆ. ಈ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಇದ್ದ ಗ್ರಾಮಗಳು ಇದೀಗ ಮಹಾನಗರ ಪಾಲಿಕೆಗೆ ಒಳಗೊಂಡಿವೆ. ಅದಕ್ಕನುಗುಣವಾಗಿ ಅವರು ಕೂಡ ಹತ್ತುಪಟ್ಟು ಹೆಚ್ಚು ಕಂದಾಯ ಕಟ್ಟುತ್ತಿದ್ದಾರೆ ಆದರೆ ಆ ಗ್ರಾಮಗಳನ್ನು ಮಹಾನಗರ ಪಾಲಿಕೆ ಹಂತದಲ್ಲಿ ಅಭಿವೃದ್ಧಿಪಡಿಸಲು ಆಗುತ್ತಿಲ್ಲ. ಈ ಹಿಂದೆ ಸರ್ಕಾರ ಅನುದಾನ ನೀಡುವ ಭರವಸೆ ನೀಡಿ ಇದೀಗ ಪೌರಾಡಳಿತ ಇಲಾಖೆಗೆ ಮುಂದಿನ ಮೂರು ವರ್ಷಗಳು ಯಾವುದೇ ನೇಮಕಾತಿ ಅಥವಾ ಹಣ ಬಿಡುಗಡೆ ಮಾಡಲು ಆಗುವುದಿಲ್ಲ ಎಂಬ ಪತ್ರವನ್ನು ಹೊರಡಿಸಿದೆ ಇದರಿಂದ ನಮಗೆ ತುಂಬಾ ಅನ್ಯಾಯವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈಗಾಗಲೇ ಹಾಸನ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುತ್ತಿದ್ದು ರಸ್ತೆಗಳು ಗುಂಡಿಮಯವಾಗಿದೆ ಆದರೆ ಅವುಗಳನ್ನು ಮುಚ್ಚಲು ಹಣವಿಲ್ಲದೆ ಪರದಾಡುವಂಥಾಗಿದೆ, ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಹಾಕುತ್ತಿದ್ದು ನಮ್ಮ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಮನಗಂಡು ಆಡಳಿತ ಪಕ್ಷದ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ಹೆಚ್ಚಿನ ಅನುದಾನ ನೀಡಿ ಹೊಸದಾಗಿ ಶಾಸಕರಾಗಿರುವ ನಮಗೆ ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ವರದಿ : ಭರತ್ ಮಲ್ನಾಡ್