Home ರಾಜಕಾರಣ ಸಕಲೇಶಪುರ : ‘ಮನೆ ಮನೆಗೆ ಪೊಲೀಸ್’ ಅಭಿಯಾನಕ್ಕೆ ಚಾಲನೆಕರ್ನಾಟಕ ಸರ್ಕಾರ ಉಪಕ್ರಮ ‘ಮನೆ ಮನೆಗೇ ಪೊಲೀಸ್’...

ಸಕಲೇಶಪುರ : ‘ಮನೆ ಮನೆಗೆ ಪೊಲೀಸ್’ ಅಭಿಯಾನಕ್ಕೆ ಚಾಲನೆಕರ್ನಾಟಕ ಸರ್ಕಾರ ಉಪಕ್ರಮ ‘ಮನೆ ಮನೆಗೇ ಪೊಲೀಸ್’ ಎಂಬ ವಿನೂತನ ಕಾರ್ಯಕ್ರಮ ಅಂಗವಾಗಿ, ಸಕಲೇಶಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಯುತ ಮಹೇಶ್ ಅವರು ಚಾಲನೆ ನೀಡಿದರು.ಅಭಿಯಾನದ ಉದ್ದೇಶ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಅಸ್ತಿತ್ವದಲ್ಲಿರುವ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿ ಮತ್ತು ಕ್ರಿಯಾಶೀಲ ಪಡೆಯನ್ನಾಗಿ ಪರಿವರ್ತಿಸುವುದಾಗಿದೆ.’ಮನೆ ಮನೆಗೇ ಪೊಲೀಸ್’ ಪರಿಕಲ್ಪನೆ, ಪೊಲೀಸ್ ಸೇವೆ ಪ್ರತಿ ಮನೆಗೆ ತಲುಪಲಿ ಮತ್ತು ಪೊಲೀಸರ ಕಾರ್ಯಮನೆ ಮಂದಿಗೆ ಮನವರಿಕೆಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹೊರಡಿಸಿರುವ 27 ಅಂಶಗಳ ಸುತ್ತೋಲೆಯನ್ನು ಮನವರಿಕೆ ಮಾಡಿಕೊಂಡು ಪ್ರತಿ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶ.ಕಾರ್ಯಕ್ರಮದ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ. “ಸಾರ್ವಜನಿಕರು ತಮ್ಮ ಸಹಕಾರವನ್ನು ವಿಸ್ತರಿಸಲು ಪೊಲೀಸ್ ಇಲಾಖೆ ವಿನಂತಿಸುತ್ತದೆ” ಎಂದು ಸಾರ್ವಜನಿಕ ಜಾಗೃತಿಗಾಗಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಾಗ ತಿಳಿಸಲಾಗಿದೆ, ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ನಗರ ಪೋಲಿಸ್ ಸಿಬ್ಬಂದಿಗಳಾದ ಶ್ರೀಯುತ ಶ್ರೀಧರ್,ಶ್ರೀಯುತ ರೇವಣ್ಣ ಹಾಗೂ ಶ್ರೀಯುತ ಸುಜಾತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

43
0

ವರದಿ : ಭರತ್ ಮಲ್ನಾಡ್

LEAVE A REPLY

Please enter your comment!
Please enter your name here