*ಶಾಲೆಗಳಿಗೆ ಸೋಮವಾರ ರಜೆ*
ಸಕಲೇಶಪುರ, ಆಲೂರು ಬೇಲೂರು : ಶಾಲೆ ಹಾಗು ಅಂಗನವಾಡಿಗಳಿಗೆ ಸೋಮವಾರ 18/08/2025 ರಂದು ರಜೆ ಘೋಷಣೆ ನಿರಂತರವಾಗಿ ಮಳೆಯಾಗುತ್ತಿದ್ದು ಕೆಲವೆಡೆ ಹಾನಿ ಸಂಭವಿಸಿದೆ. ಮಳೆ ಮುಂದುವರೆಯುವ ಮುನ್ಸೂಚನೆಯಿದ್ದು, ಹವಮಾನ ಇಲಾಖೆ ಅಲರ್ಟ್ ಘೋಷಿಸಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ಬಾರಿ ಮಳೆ ಹಿನ್ನೆಲೆಯಲ್ಲಿ ಸಕಲೇಶಪುರ, ಬೇಲೂರು ತಾಲೂಕಿನ ಎಲ್ಲಾ ಶಾಲೆಗಳಿಗೆ, ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆ ಹೋಬಳಿ ಶಾಲೆ ಹಾಗು ಅಂಗನವಾಡಿಗಳಿಗೆ ನಾಳೆ ಸೋಮವಾರ 18/08/2025 ರಂದು ರಜೆ ಘೋಷಣೆ ಮಾಡಿರುತ್ತಾರೆ.
ವರದಿ : ಭರತ್ ಮಲ್ನಾಡ್