Home ರಾಜ್ಯ ಸಕಲೇಶಪುರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಕಲೇಶಪುರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

22
0

“ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ” ಶ್ರೀ ಕೃಷ್ಣ ಮತ್ತು ರಾಧೆಯರ ವೇಷದಾರಿ ಸ್ಪರ್ಧೆ” ಹಿಂದೂ ಹಿತರಕ್ಷಣಾ ವೇದಿಕೆ ಸಕಲೇಶಪುರ (ತಾ), ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ

ಸಕಲೇಶಪುರ: ಪ್ರತಿ ವರ್ಷದಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ  ಶ್ರೀ ಕೃಷ್ಣ ಮತ್ತು ರಾಧೆಯರ  ವೇಷ ಸ್ಪರ್ಧೆಯನ್ನು ಮಕ್ಕಳಿಗಾಗಿ ಪುರಭವನದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಕೃಷ್ಣ ಹಾಗೂ ರಾಧೆ ವೇಷದಾರಿಗಳ ಸ್ಪರ್ಧೆಯನ್ನು ಆಯೋಜಿಸಿದ್ದರು,ಪಟ್ಟಣದ ಪುರಭವನದ ಆವರಣದಲ್ಲಿ ಇಂದು ಈ ಬಾರಿ 560ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು ಮಕ್ಕಳು ಕೃಷ್ಣ ಮತ್ತು ರಾಧೆ ವೇಷಧಾರಿಗಳಾಗಿ ಭಾಗವಹಿಸಿ ಗಮನಸೆಳೆದರು.  ಪಾಲಕರು ಮಕ್ಕಳಿಗೆ ವೇಷ ತೊಡಿಸಿಕೊಂಡು ಆಗಮಿಸಿದ್ದರು.ವಿಶೇಷವಾಗಿ ಸ್ಪರ್ಧೆಯಲ್ಲಿ ಎಲ್ಲಾ ಧರ್ಮಗಳ ಬಾಂದವರು ಈ ಬಾರಿ 560ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು, ಬೆಣ್ಣೆ ಕೃಷ್ಣ, ತುಂಟ ಕೃಷ್ಣ, ಮುದ್ದು ಕೃಷ್ಣ, ಬಾಲಕೃಷ್ಣ ಹಾಗೆ ರಾಧೆಯರು ವೇಷ ಸ್ಪರ್ಧೆ ಹಾಗೂ ಪ್ರತ್ಯೇಕವಾಗಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಮಕ್ಕಳು ಭಾವ ಲಹರಿಯಲ್ಲಿ ಮಿಂದೆದ್ದರು.
*ಪುರಭವನದಲ್ಲಿ ಕೃಷ್ಣ – ರಾಧೆಯರ ಕಲರವ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕ್ರಮದಲ್ಲಿ 560 ರಾಧೆ ಕೃಷ್ಣ ವೇಷಧಾರಿಗಳು ಭಾಗಿ.*
*ಈ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ಸೇರಿದಂತೆ ಪ್ರಶಾಂತ್ ಶೆಟ್ಟಿ. ಪುರಸಭೆ ಸದಸ್ಯ ಆದರ್ಶ. ಶ್ರೀಮತಿ ಶೀಲಾ ಸುಧಾಕರ್. ಕೋಮಲ ದಿನೇಶ್. ಸಂಕಿರ್ತನ ನವೀನ್. ಗೀತಾ ಕುಮಾರ್ ಗಣ್ಯರಾಗಿ ಭಾಗಿಯಾಗಿದ್ದರು.
*ವಿಶೇಷವಾಗಿ ಈ ಬಾರಿ ಬರೋಬ್ಬರಿ 560 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಇದು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಮೆರುಗು ನೀಡಿತ್ತು.
*ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಕೂಡ ಸಾಮೂಹಿಕ ಬಹುಮಾನ ವಿತರಿಸಿದ ಆಯೋಜಕರು ಸ್ಮರಣಿಕೆ ನೀಡಿ ಗೌರವಿಸಿದರು. ಮದ್ಯಾಹ್ನ ಲಘು ಉಪಾಹಾರದ ನಂತರ ಕಾರ್ಯಕ್ರಮ ಸಮಾಪ್ತಿ ಗೊಂಡಿದ್ದು ಈ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡರಾದ ರಘು ಸಕಲೇಶಪುರ. ಸೇರಿದಂತೆ ಆಯೋಜಕರಾದ ಕೌಶಿಕ್ ಹೆಚ್.ಎಂ, ಮಂಜುನಾಥ್ ಕಬ್ಬಿನಗದ್ದೆ, ದಿಲೀಪ್, ಮನು, ದುಶ್ಯಾಂತ್ ಗೌಡ, ಶ್ರೀ ಜಿತ್ ಗೌಡ, ವಿಜೀತ್, ಶಿವು ಜಿಪ್ಪಿ, ಜತಿನ್, ವಿರೇಶ್, ರವಿ ಹೆಬ್ಬಸಾಲೆ, ಇತರರು ಉಪಸ್ಥಿತರಿದರು
ಈ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಸಹಕರಿಸಿ ಈ ಸಂದರ್ಭ ನಗರದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ವರದಿ : ಭರತ್ ಮಲ್ನಾಡ್

LEAVE A REPLY

Please enter your comment!
Please enter your name here