

ಸಕಲೇಶಪುರ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ :
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲ್ಲೂಕು ಮಟ್ಟದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಗರದ ಹಿರಿಯ ಮಾಧ್ಯಮಿಕ ಪ್ರಾಥಮಿಕ ಶಾಲೆ ಮೈದಾನದಲ್ಲಿ ಜರುಗಿತು .
ಶಾಸಕರಾದ ಶ್ರೀ ಸಿಮೆಂಟ್ ಮಂಜು, ಧ್ವಜಾರೋಹಣ ನೆರವೇರಿಸಿ, ಗೌರವ ನಮನ ಸಲ್ಲಿಸಿ, ಆಕರ್ಷಣೆ ಹೆಚ್ಚಿಸಿದ ಎಲ್ಲಾ ವಿಭಾಗದ ಪಥಸಂಚಲನದ ಪರೇಡ್ ಗೌರವಿಸಿ. ಸಭೆಯನ್ನು ಉದ್ದೇಶಿಸಿ ಮಾತನಾಡಿ ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆ ನಡೆಸಿದ ಯೋಧರ ಶೌರ್ಯ ನಮಗೆಲ್ಲರಿಗೂ ಪ್ರೇರಣೆ, ಎಲ್ಲಾ ಯುವಕ ಯುವತಿಯರು ದೇಶ ಮೊದಲು ಎಂಬ ಧ್ಯೇಯಕ್ಕೆ ಸಿದ್ಧರಾಗಬೇಕು ಮತ್ತು ವಿದೇಶಿ ಮೋಹಕ್ಕೆ ಮಾರು ಹೋಗದೇ ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ದೇಶಕಟ್ಟುವ ಕಾರ್ಯದಲ್ಲಿ ಕೈ ಜೋಡಿಸಬೇಕೆಂದು ಕೋರಿದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನಿಸಲಾಯಿತು.
- ದೇಶ ಸೇವಾ ಕ್ಷೇತ್ರ ಶ್ರೀ ವೆಂಕಟೇಶ್ ಕೆ, ಮಾಜಿ ಸೈನಿಕರು, ಶ್ರೀ ಎಲ್. ಎಸ್ ನಾಗರಾಜು, ಲಕ್ಕುಂದ.
- ಉತ್ತಮ ಆಡಳಿತ ಕ್ಷೇತ್ರ ಶ್ರೀ ಎಸ್ ಡಿ ಸತೀಶ್, ಅಧ್ಯಕ್ಷರು ಹಾಗೂ ಶ್ರೀ ಗಿರೀಶ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಿರುಡಳ್ಳಿ, ಪಂಚಾಯಿತಿ ( ಸೋಲಾರ್ ಬಳಿಕೆ ಮತ್ತು ಹಸರೀಕರಣ ವಿಭಾಗದಲ್ಲಿ ದೇಶದ 2ನೇ ಅತ್ಯುತ್ತಮ ಪುರಸ್ಕೃತ ಗೊಂಡ ಬೀರಡಳ್ಳಿ ಗ್ರಾಮ ಪಂಚಾಯಿತಿ)
*ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ಬಿ.ಆರ್ ರೇಣುಕಾ. ಶಿಕ್ಷಕಿ ಸರ್ಕಾರಿ ಪ್ರಾಥಮಿಕ ಶಾಲೆ, ನೀಚನಹಳ್ಳಿ,
*ಕ್ರೀಡ ಕ್ಷೇತ್ರ ಶ್ರೀ.ನಿತಿನ್. ಬಿನ್ ಧರ್ಮರಾಜು ಕರಡಿಗಾಲ
*ಎಸ್ ಎಸ್ ಎಲ್ ಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಧನ್ಯಶ್ರೀ ಹೆಚ್ಚಿಸಿ ಕೋo ಆಫ್ ಚೇತನ್ ಹೆಚ್ ಎಸ್ - ಸಮಾಜ ಸೇವ ಕ್ಷೇತ್ರ ಶ್ರೀ ಶಶಿಧರ್ ಕೆ.ಬಿ, ಶ್ರೀ ಸಂಜೀತ್ ಶೆಟ್ಟಿ
- ಪೌರ ಕಾರ್ಮಿಕರ ಕ್ಷೇತ್ರ(ಮೇಲ್ವಿಚಾರಕ) ಶ್ರೀ ಡಿ ಎಂ ಚಂದ್ರಶೇಖರ್
- ಕೃಷಿ ಕ್ಷೇತ್ರ ಶ್ರೀ ಕೆ ಎನ್ ಸುಬ್ರಹ್ಮಣ್ಯ, ಕ್ಯಾನಳ್ಳಿ ಗ್ರಾಮ.
ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಭರತ್ ಮಲ್ನಾಡ್