ಶ್ರೀ ಸ್ವರ್ಣ ಗೌರಿ ಅಮ್ಮನವರ 167ನೇ ವರ್ಷದ ಜಾತ್ರಾ ಮಹೋತ್ಸವ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು ನಾಡಿನ ಲಕ್ಷಾಂತರ  ಭಕ್ತರ ಆರಾಧ್ಯ ದೇವತೆಯಾಗಿರುವ  ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ಅಮ್ಮನವರ 167ನೇ ವರ್ಷದಜಾತ್ರಾ ಮಹೋತ್ಸವಕ್ಕೆ ಭಾನುವಾರ ವಿದ್ಯುಕ್ತವಾಗಿ ಚಾಲನೆ ದೊರೆಯಿತು       ಆಗಸ್ಟ್ ಮಾಸದಲ್ಲಿ   ನೂಲ ಹುಣ್ಣಿಮೆಯ ನಂತರ ಬರುವ ಶುಭದಿನದಂದು ಅಮ್ಮನವರ ಮೂರ್ತಿ ತಯಾರಿಕೆಗೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮುರಿದೇವರ ಸಾನಿಧ್ಯದಲ್ಲಿ ಮೂಲ ಸನ್ನಿದಿಯಲ್ಲಿ ಪೂಜೆ ಸಲ್ಲಿಸಲಾಯಿತು   ನಂತರ ಶ್ರೀಗಳ ಸಮ್ಮುಖದಲ್ಲಿ ನೂರಾರು ಭಕ್ತರು ಪಾದಯಾತ್ರೆ ಮೂಲಕ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಇರುವ ತೋಟಕ್ಕೆ ತೆರಳಿದರು   ಬಳಿಕ ಮ್ಯತ್ತಿ ಕೆ ತರುವ ಸ್ಥಳದಲ್ಲಿ ಪದ್ಧತಿ ಪ್ರಕಾರ ಶ್ರೀಗಳ ಪಾದಪೂಜೆ ನೆರವೇರಿಸಿ ಮ್ಯತ್ತಿಕೆಯನ್ನು (ಮಣ್ಣನ್ನು ) ಸಂಗ್ರಹಿಸಲಾಯಿತು   ಅಲ್ಲಿಂದ ಶ್ರೀಗಳ ಸಮ್ಮುಖದಲ್ಲಿ ವಾಪಸ್ ಮೂಲ ಸನ್ನಿಧಿಗೆ ಮೆರವಣಿಗೆ ಮೂಲಕ ಬದಲಾಯಿತು   ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಸ್ವಾಮೀಜಿ 167 ವರ್ಷಗಳ ಹಿಂದೆಯೇ ಕೋಡಿಮಠದ ಮಹಾ ತಪಸ್ವಿ ಶಿವಲಿಂಗ ಜ್ಜು ಯ್ಯ ಕೋಟಿ ಜಪ ಮಾಡಿ ಸ್ವರ್ಣ ಗೌರಿ ಅಮ್ಮನವರಿಗೆ ಮೂಗುತಿ ಧರಿಸಿ ಆಶೀರ್ವದಿಸಿದ್ದರಂತೆ ಅಂದಿನಿಂದ ಇಂದಿನವರೆಗೂ ಸಂಪ್ರದಾಯದಂತೆ ಜಾತ್ರಾ ಮಹೋತ್ಸವವನ್ನು ಜಾತಿ ಮತ ಭೇದಬಾವವಿಲ್ಲದೆ ಆಚರಿಸಿಕೊಂಡು ಬರುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು    ನಾಡಿನ ಎಲ್ಲಾ ಕಡೆ ಗಣಪತಿಯನ್ನು ಹೊತ್ತು ಮೆರೆದರೆ ಇಲ್ಲಿ ಗಣಪನ ಅಮ್ಮ ಗೌರಮ್ಮನಿಗೆ ಆದ್ಯತೆ ಹೆಚ್ಚು ಗಣಪ ಗೌಣ  ಮಾತ್ರ ಶ್ರೀಸ್ವರ್ಣ ಗೌರಿ ಅಮ್ಮನ ವರ ಮೂರ್ತಿಯನ್ನು ಶಿಲ್ಪಿ ಮಧು ಆಚಾರ್ ತಯಾರಿಸಲಿದ್ದು ಭಾದ್ರಪದ ಮಾಸದ  ತದಿಗೆ ದಿನದಂದು ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾ ದೇವಾಲಯದಲ್ಲಿ ಕೋಡಿಮಠ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು ಈ ಕಾರ್ಯಕ್ರಮದಲ್ಲಿ ಮಾಡಾಳು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು

Share This Article
Leave a Comment

Leave a Reply

Your email address will not be published. Required fields are marked *