
ಇಂದು *”ವಿಶ್ವ ಹೃದಯ ದಿನದ* ಅಂಗವಾಗಿ ಬೆಂಗಳೂರು ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ, ಕರ್ನಾಟಕದ ಮೊದಲ ‘ನೆಕ್ಸೈಮರ್ ಲೇಸರ್ ಸಿಸ್ಟಮ್’ ಅನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾದ ಮಾನ್ಯ *ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್* ರವರು ಉದ್ಘಾಟಿಸಿ ಶುಭ ಹಾರೈಸಿದರು.
‘ವಿಶ್ವ ಹೃದಯ’ ದಿನವು ಕೇವಲ ಒಂದು ಆಚರಣೆ ಅಲ್ಲ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಜಾಗೃತಿಯಾಗಬೇಕಾದ ಸಂದೇಶ. ಹೃದಯದ ಆರೋಗ್ಯ ಕಾಪಾಡುವುದು ಎಂದರೆ — ಸರಿಯಾದ ಜೀವನಶೈಲಿ, ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಹಾಗೂ ಒತ್ತಡ ನಿಯಂತ್ರಣಕ್ಕೆ ಆದ್ಯತೆ ನೀಡುವುದು ಎಂದು ಮಾನ್ಯ ಸಂಸದರು ಹೇಳಿದರು.
Stop smoking, Start walking,
Less thinking, More working – ಇದು ಹೃದಯವನ್ನು ಆರೋಗ್ಯಕರವಾಗಿಡುವ ಮಂತ್ರ ಎಂದರು.
ಇಂದು ಉದ್ಘಾಟಿಸಲಾದ ‘ನೆಕ್ಸೈಮರ್ ಲೇಸರ್ ಸಿಸ್ಟಮ್’ ಮೂಲಕ ಸಂಕೀರ್ಣ ಆಂಜಿಯೋಪ್ಲ್ಯಾಸ್ಟಿಗೆ ಅತ್ಯಾಧುನಿಕ ಹಾಗೂ ಶ್ರೇಷ್ಠ ಚಿಕಿತ್ಸಾ ವ್ಯವಸ್ಥೆ ಲಭ್ಯವಾಗಿದ್ದು, ಕರ್ನಾಟಕದಲ್ಲಿ ಹೃದಯ ಚಿಕಿತ್ಸೆಯ ಹೊಸ ಅಧ್ಯಾಯ ಆರಂಭವಾಗಿದೆ. ಇದು ಸಾವಿರಾರು ಜೀವ ಉಳಿಸುವ ಮಹತ್ವದ ಹೆಜ್ಜೆ ಹೇಳಿದರು.
ಈ ಸಂದರ್ಭದಲ್ಲಿ ಆಸ್ಟರ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಡೈರೆಕ್ಟರ್ ಡಾ. ನಾಗಮಲ್ಲೇಶ್ ರವರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.