ರಂಜಾನ್ ಹಬ್ಬದ ಸಂಭ್ರಮ, ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಅರಸೀಕೆರೆ: ರಂಜಾನ್ ಹಬ್ಬದ ಸಂಭ್ರಮವನ್ನು ಪರಸ್ಪರ ವಿನಿಮಯ ಮಾಡಿಕೊಂಡ ಮುಸ್ಲಿಂ ಬಾಂಧವರು ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಸಾವಿರಾರು ಜನ ಮೆರವಣಿಗೆ ಮೂಲಕ ಬಿ ಎಚ್ ರಸ್ತೆಯಲ್ಲಿ ಸಾಗಿ ಈದ್ಗಾ ಮೈದಾನದಲ್ಲಿ ಸೇರಿದರು ಸಭಾ ಕಾರ್ಯಕ್ರಮದಲ್ಲಿ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಕೆಎಂ ಶಿವಲಿಂಗೇಗೌಡ ಮಾತನಾಡಿ ರಂಜಾನ್ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ತರಲಿ ನಾವೆಲ್ಲ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡೋಣ ಭಗವಂತ ಒಬ್ಬನೇ ನಾನಾ ರೂಪದಲ್ಲಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ ನಾವೆಲ್ಲ ಮಾನವರಾಗಿ ಬಾಳೋದು ಅವಶ್ಯ. ಮಾನವ ಜನ್ಮ ಅತಿ ಶ್ರೇಷ್ಠವಾದ ಜನ್ಮ ನಾನಾ ಧರ್ಮದಲ್ಲಿ ವಿವಿಧ ಭಾಷೆಯಲ್ಲಿ ಹಲವು ವೈವಿಧ್ಯತೆಯಲ್ಲಿ ಇಡೀ ಪ್ರಪಂಚದಲ್ಲಿ ಮಾನವ ಜನ್ಮ ತಾಳಿದೆ ಅನೇಕ ಸಂಸ್ಕೃತಿ, ಧರ್ಮ ಇದ್ರೂ ಏಕತೆಯಿಂದ ಇರಬೇಕು .
ಇದೇ ವೇಳೆ ಜಾಗತಿಕವಾಗಿ ಸೃಷ್ಟಿಯಾಗಿರುವ ಯುದ್ಧ ಮತ್ತು ಸಂಘರ್ಷದ ವಾತಾವರಣವು ತಿಳಿಯಾಗಿ, ಎಲ್ಲೆಡೆ ಶಾಂತಿ ಸ್ಥಾಪನೆಯಾಗಲಿ ಮತ್ತು ಸಂಕಷ್ಟದಲ್ಲಿರುವವರಿಗೆ ದೈವಿಕ ನೆರವು ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ತಿಳಿಸಿದರು
ತಹಶೀಲ್ದಾರ್ ಸಂತೋಷ್ ಕುಮಾರ್ ಹಾಗೂ ಡಿ ವೈ ಎಸ್ ಪಿ ಗೋಪಿ ಮಾತನಾಡಿದರು ನಗರಸಭಾ ಆಯುಕ್ತ ಕೃಷ್ಣಮೂರ್ತಿ ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಉಪಸ್ಥಿತರಿದ್ದರು ನಂತರ ನಡೆದ ಧರ್ಮ ಸಂದೇಶದಲ್ಲಿ ಸುನ್ನಿ ಜಾಮಿಯಾ ಮಸೀದಿ ಧರ್ಮ ಗುರುಗಳಾದ ಮೌಲಾನಾ ನಜರ್ ಆಲಂ ಸಾಬ್ ರವರು
ಪವಿತ್ರ ರಂಝಾನ್ ಮಾಸದಲ್ಲಿ ನಾವು ಪಾಲಿಸಿದ ಶಿಸ್ತು, ಸಂಯಮ ಮತ್ತು ಪ್ರಾರ್ಥನೆಗಳು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ ಜೀವನದುದ್ದಕ್ಕೂ ಆ ದೈವಭಕ್ತಿಯನ್ನು ಉಳಿಸಿಕೊಳ್ಳುವಂತಾಗಲಿ.
ಹಸಿದವರಿಗೆ ಊಟಬಡಿಸುವುದು ಮತ್ತು ಬಡವರ ಕಣ್ಣೀರು ಒರೆಸುವುದು ಈ ಹಬ್ಬದ ಮುಖ್ಯ ಉದ್ದೇಶ. ‘ಫಿತ್ರ್ ಝಕಾತ್’ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ.
ನೆರೆಹೊರೆಯವರೊಂದಿಗೆ, ಅನ್ಯಧರ್ಮೀಯ ಬಾಂಧವರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ವರ್ತಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಹಬ್ಬದ ಹೆಸರಿನಲ್ಲಿ ಅನಾಚಾರ ಅಥವಾ ದುಂದುವೆಚ್ಚಗಳಿಗೆ ಅವಕಾಶ ನೀಡದೆ, ಶರೀಅತ್ ಚೌಕಟ್ಟಿನೊಳಗೆ ಸಂಭ್ರಮಿಸಬೇಕು.
ರಂಝಾನ್ ನಮಗೆ ಕಲಿಸಿದ ತಾಳ್ಮೆ ಮತ್ತು ದೈವಭಕ್ತಿ ನಮ್ಮ ಮುಂದಿನ ಜೀವನದ ದಾರಿದೀಪವಾಗಲಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಅಲ್ಲಾಹನು ಬರಕತ್ ನೀಡಲಿ. ಈದ್ ಹಬ್ಬದ ಪವಿತ್ರ ಸಂದೇಶವು ಜಾಗತಿಕ ಸಾಮರಸ್ಯ, ಪರಸ್ಪರ ಗೌರವ ಮತ್ತು ಎಲ್ಲಾ ಗಡಿಗಳನ್ನು ಮೀರಿದ ಶಾಶ್ವತ ಶಾಂತಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗ ದಂತೆ ಜಾಗೃತಿ ಮೂಡಿಸಿದರು. ಅಲ್ಲದೆ ಎಲ್ಲರೂ ಪರಸ್ಪರ ಸಹೋದರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.
ಈದ್ಗಾ ಮೈದಾನದಲ್ಲಿ ಈದ್ ವಿಶೇಷ ನಮಾಝ್ ನಲ್ಲಿ ನಗರ ಸಭೆ ನಿಕಟಪೂರ್ವ ಅಧ್ಯಕ್ಷರಾದ ಎಂ ಸಮಿವುಲ್ಲಾ, ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷರಾದ ಸೈಯದ್ ಸಿಕಂದರ್,ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಅಧ್ಯಕ್ಷರಾದ ಅಪ್ರೋಜ್ ಪಾಷಾ, ಕಾರ್ಯದರ್ಶಿ ಅಬ್ದುಲ್ ಜಮೀಲ್, ಖಜಾಂಚಿ ಸೈಯದ್ ಸಾಬ್, ಹಾಗೂ ಪದಾಧಿಕಾರಿಗಳು ಸಮಾಜ ಸೇವಕರಾದ ಸೈಯದ್ ನವಾಜ್ ಮೋದ್ದೀನ್ ಪಾಷಾ ಪರ್ವೀಜ್ ಅಹಮದ್ ಅತಾವುಲ್ಲಾ ನಜುರುಲ್ಲಾ ಸಮೀರ್ ಜಾಕೀರ್ ಹಾಗೂ ಜನಪ್ರತಿನಿಧಿಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು







