ಯಾವುದೇ ಬಂಡವಾಳಶಾಹಿಗಳಿಲ್ಲದೆ ಸಮಾಜದಲ್ಲಿ ತುಳಿತಕ್ಕೊಳಗಾದ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಪ್ರಾರಂಭವಾದ ಈ ದಿನ ಸುದ್ದಿವಾಹಿನಿ ರಾಜ್ಯದ್ಯಂತ ಸಂಚಲನ ಮೂಡಿಸಿದೆ ಈ ದಿನ ಸುದ್ದಿ ವಾಹಿನಿಯ ಸಂಸ್ಥೆಯ ಮೈಸೂರು ವಿಭಾಗದ ಸಂಚಾಲಕರಾದ ಮೋಹನ್ ತಿಳಿಸಿದರು ಅರಸೀಕೆರೆ ತಾಲೂಕಿನಲ್ಲಿ ಈ ದಿನ ಸುದ್ದಿ ಸಂಸ್ಥೆಯ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯ ಚುನಾವಣಾ ಸಮೀಕ್ಷೆ ನೀಡಿದ್ದರ ಹಿನ್ನೆಲೆಯಲ್ಲಿ ಎಲ್ಲಾ ಮಾಧ್ಯಮಗಳಿಂದ ಈ ದಿನ ಸುದ್ದಿ ಸಂಸ್ಥೆಯ ಚುನಾವಣಾ ಸಮೀಕ್ಷೆ ನಿಜವಾಯಿತು ಇದಲ್ಲದೆ ರಾಜ್ಯದಲ್ಲಿ ನಡೆದಿರುವ ಹಲವಾರು ದುಷ್ಕೃತ್ಯಗಳ ಬಗ್ಗೆ ಸುದ್ದಿ ಮಾಡಿದ್ದರೆ ಹಿನ್ನೆಲೆಯಲ್ಲಿ ಕಾನೂನು ಹೋರಾಟವನ್ನು ನಡೆಸಬೇಕಾಯಿತು ಈ ದಿನ ನಮ್ಮ ಸಂಸ್ಥೆಯ ವಿಶೇಷವೇನೆಂದರೆ ಎಲ್ಲರೂ ವರದಿಗಾರರಾಗಿ ತಮ್ಮ ತಮ್ಮ ಸ್ಥಳಗಳಲ್ಲಿಯ ಸಮಸ್ಯೆಗಳು ಭ್ರಷ್ಟಾಚಾರ ಸಾರ್ವಜನಿಕರಿಗೆ ಆಗುವ ಕಿರುಕುಳದ ಬಗ್ಗೆ ವರದಿ ಮಾಡಬಹುದು ಎಂದು ಪೂರ್ಣ ಮಾಹಿತಿ ನೀಡಿದರು ಹಾಸನ ಜಿಲ್ಲಾ ವಿಭಾಗದ ಸಂಚಾಲಕರಾದ ದೇಶಾಣಿ ಗಿರೀಶ್ ಉಪಸ್ಥಿತರಿದ್ದರು ಭೀಮಾ ಸ್ಫೂರ್ತಿ ಪತ್ರಿಕೆ ಸಂಪಾದಕ ಕಿರಣ್ ಪತ್ರಕರ್ತ ಕೃಷ್ಣಮೂರ್ತಿ. ಆದರ್ಶ ಷಡಕ್ಷರಿ. ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಗೋವಿಂದ್ ರಾಜ್ ಕಾರ್ಮಿಕ ಮುಖಂಡ ನಾಗರಾಜ್ ಸೇರಿದಂತೆ ಪತ್ರಿಕೆ ಮಾಧ್ಯಮದ ಹಲವರು ಉಪಸ್ಥಿತರಿದ್ದರು .