Home ರಾಜಕಾರಣ ರಸಗೊಬ್ಬರದ ಕೊರತೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ : ಹಾಸನ...

ರಸಗೊಬ್ಬರದ ಕೊರತೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ : ಹಾಸನ ನಗರದ ಕೃಷಿ ಜಂಟಿ ನಿರ್ದೇಶಕರ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆ :

ಬೇಡಿಕೆ ತಲುಪದ ಪೂರೈಕೆ

ಜಿಲ್ಲೆಯಲ್ಲಿ ಆಗಾಗ ‌ಸುರಿಯುತ್ತಿರುವ ಧಾರಾಕಾರ, ಸಾಧಾರಣ ಹಾಗೂ ಜಡಿಮಳೆಯು ಬಿತ್ತನೆ ಚಟುವಟಿಕೆಗೆ ಮತ್ತಷ್ಟು ಹುರುಪು ನೀಡಿದೆ. ಇದರ ಜೊತೆಗೆ ವಿವಿಧ ರಸಗೊಬ್ಬರಗಳಿಗೂ ರೈತರಿಂದ ಬೇಡಿಕೆ ಹೆಚ್ಚಾಗಿದೆ. ಆದರೆ, ಜಿಲ್ಲೆಗೆ ಬೇಡಿಕೆ ಇರುವಷ್ಟು ರಸಗೊಬ್ಬರವು ಸರಬರಾಜು ಆಗಿಲ್ಲ. ಕೆಲ ಗೊಬ್ಬರಗಳ ಕೊರತೆ ಎದುರಾಗಿದೆ.
ಕೇಂದ್ರ ಸರ್ಕಾರ ಸಮರ್ಪಕವಾಗಿ ನೀಡಿರುವ ರಸಗೊಬ್ಬರವನ್ನು ಸರಿಯಾಗಿ ರೈತರಿಗೆ ಹಂಚಿಕೆ ಮಾಡದ ರೈತವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಾಸನ ನಗರದ ಕೃಷಿ ಜಂಟಿ ನಿರ್ದೇಶಕರ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಅನ್ಯಾಯವೆಸಗುತ್ತಿರುವ ರಾಜ್ಯ ಸರ್ಕಾರದ ಬೇಜವಾಬ್ದಾರಿತನವನ್ನು ಖಂಡಿಸಿ ರಾಜ್ಯ ಸರ್ಕಾರ ನಿರ್ಲಕ್ಷೆ ವಹಿಸದೆ ತಕ್ಷಣದಿಂದಲೇ ರೈತರು ಅನುಭವಿಸುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದರು.
ಪ್ರತಿಭಟನೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಕೆ ಸುರೇಶ್ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ರೈತ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರುಗಳು, ಇನ್ನಿತರ ಮುಖಂಡರು, ರೈತರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ: ಭರತ್ ಮಲ್ನಾಡ್

67
0

LEAVE A REPLY

Please enter your comment!
Please enter your name here