ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಬೆಂಗಳೂರು ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಇವರ ಸಹಯೋಗದೊಂದಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಗಟಿಕೋತ್ಸವ ಭವನ ಹುಣಸೂರ್ ರಸ್ತೆ ಮೈಸೂರಿನಲ್ಲಿ ಇಂದು ಬೆಳಗ್ಗೆ 11:30ಕ್ಕೆ ವಿಶ್ವ ಪತ್ರಿಕಾ ದಿನಾಚರಣೆ ಹಾಗೂ ಐದನೇ ರಾಜ್ಯ ಪತ್ರಿಕೆ ವಿತರಕರ ಸಮ್ಮೇಳನ ನಡೆಯುತ್ತಿದ್ದು ಈ ಸಮಾರಂಭಕ್ಕೆ ಅರಸೀಕೆರೆ ತಾಲೂಕಿನ ಪತ್ರಿಕಾ ವಿತರಕರು ತೆರಳುತ್ತಿರುವದಾಗಿ ಅರಸಿಕೆರೆ ತಾಲೂಕು ಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಬಾಲಕೃಷ್ಣ ತಿಳಿಸಿದರು
ಈ ಸಮಾರಂಭದಲ್ಲಿ ಸುತ್ತೂರು ವೀರ ಸಿಂಹಾಸನ ಮಠ ಕ್ಷೇತ್ರ ಸುತ್ತೂರು ಕ್ಷೇತ್ರದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಜಿಗಳು. ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಸಚ್ಚಿದಾನಂದ ಆಶ್ರಮ ಮೈಸೂರು ಇವರು ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸಮಾಜ ಕಲ್ಯಾಣ ಸಚಿವರಾದ ಎಚ್ ಸಿ ಮಾದೇವಪ್ಪ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರಾದ ಮೈಸೂರು ರಾಜ ವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಚಾಮರಾಜ ಲೋಕಸಭಾ ಸದಸ್ಯರಾದ ಸುನಿಲ್ ಬೋಶ್ ಎಚ್ ಡಿ ಕೋಟೆ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಸೇರಿದಂತೆ ಹಲವಾರು ಸಚಿವರು ಶಾಸಕರು ಅಧಿಕಾರಿಗಳು ರಾಜ್ಯ ಪತ್ರಿಕೆಗಳ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅರಸಿಕೆರೆ ಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಬಾಲಕೃಷ್ಣ ತಿಳಿಸಿದರು
Home ರಾಜಕಾರಣ ಮೈಸೂರಿನಲ್ಲಿ ಇಂದು ಐದನೇ ರಾಜ್ಯಪತ್ರಿಕ ವಿತರಕರ ಸಮ್ಮೇಳನ ಅರಸಿಕೆರೆ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಾಲಕೃಷ್ಣ