Home ರಾಜಕಾರಣ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅರಸೀಕೆರೆ ತಾಲೂಕು ವಿಶ್ವಕರ್ಮ ಸಮುದಾಯದಿಂದ ಸ್ವಾಗತ.. ಬರುವ 26ರಂದು...

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅರಸೀಕೆರೆ ತಾಲೂಕು ವಿಶ್ವಕರ್ಮ ಸಮುದಾಯದಿಂದ ಸ್ವಾಗತ..

ಬರುವ 26ರಂದು ಅಂದರೆ ಶನಿವಾರ ಅರಸೀಕೆರೆ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪಮುಖ್ಯಮಂತ್ರಿ  ಡಿ ಕೆ ಶಿವಕುಮಾರ್ ಹಾಗೂ ಇನ್ನಿತರ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ವತಿಯಿಂದ ಕಾರ್ಯಕ್ರಮ ಯಶಸ್ವಿಯಾಗಲೆಂದು  ಅರಸಿಕೆರೆ ತಾಲೂಕ್  ವಿಶ್ವಕರ್ಮ ಸಮುದಾಯದ  ಅಧ್ಯಕ್ಷರಾದ ಯೋಗೀಶ್ ಆಚಾರ್ ತಿಳಿಸಿದರು. ತಾಲೂಕಿನ  ವಿಶ್ವಕರ್ಮ ಸಮುದಾಯ ಭವನ  ಪ್ರಪ್ರಥಮವಾಗಿ ಜಾಗ ಗುರುತು ಮಾಡಿಸಿ ಕೊಟ್ಟಿದ್ದು  ಈಗಿನ ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ ಅವರು  ನಂತರ ಶಾಸಕ ಶಿವಲಿಂಗೇಗೌಡರು  ನಮ್ಮ ಸಮುದಾಯವನ್ನು ಗುರುತಿಸಿ ನಮ್ಮನ್ನು ಕರೆಸಿ  ಹಂತ ಹಂತವಾಗಿ 65 ಲಕ್ಷಕ್ಕೂ ಹೆಚ್ಚು  ಅನುದಾನವನ್ನು ಕೊಡಿಸಿ  ಇನ್ನು ಮುಂದೆಯೂ ಸಹ  ಸಮುದಾಯ ಭವನ ಪೂರ್ಣಗೊಳಿಸಲು ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿರುವುದು  ನಮ್ಮ ಇಡೀ ವಿಶ್ವಕರ್ಮ ಸಮುದಾಯಕ್ಕೆ  ಸಂತೋಷ ತಂದಿದೆ ಎಂದರು  ಅಲ್ಲದೆ  ರಾಷ್ಟ್ರೀಯ ಹೆದ್ದಾರಿ  206 ರಲ್ಲಿ ಎಪಿಎಂಸಿ ಮುಂಬಾಗ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಲು  ಸರ್ಕಾರಕ್ಕೆ ಮತ್ತು ಶಾಸಕರಿಗೆ ಮನವಿ ನೀಡಿದ್ದು  ಇದಕ್ಕೂ ಸಹ ಶಾಸಕ ಶಿವಲಿಂಗೇಗೌಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಗಂಡಸಿಗೆ ಹೋಬಳಿ ಸಂಘಟನಾ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ದೇವರಾಜ್. ಕಾರ್ಯದರ್ಶಿ ಪ್ರಸನ್ನ ಆಚಾರ್. ಸಹ ಸಂಘಟನಾ ಕಾರ್ಯದರ್ಶಿ ಸ್ವಾಮಿ. ನಿರ್ದೇಶಕರಾದ ನವೀನ್. ಉಪಸ್ಥಿತರಿದ್ದರು

104
0

LEAVE A REPLY

Please enter your comment!
Please enter your name here