ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಸನ್ನಿಧಿಯು ಭಕ್ತರ ಆಕಾಂಕ್ಷೆಗಳನ್ನು ಈಡೇರಿಸುವ ಸುಕ್ಷೇತ್ರ ಎಂದು ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬುಧವಾರ ತಿಳಿಸಿದರು ಕೋಡಿಮಠ ಮಹಾ ಸಂಸ್ಥಾನದ ವತಿಯಿಂದ ಈ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ಕಾಮಗಾರಿಯನ್ನು ಖುದ್ದು ವೀಕ್ಷಿಸಿ ನಂತರ ಅಲ್ಲಿ ಸೇರಿದ್ದ ಭಕ್ತರನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿದರು ಈ ವರ್ಷವೇ 2026 ಶ್ರಾವಣ ಪಂಚಮಿ ಯ೦ದು ನೂತನ ದೇವಾಲಯ ಲೋಕಾರ್ಪಣೆ ಆಗಲಿದ್ದು ಆ ವೇಳೆಗೆ ಮೊದಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಕೊಡಬೇಕೆಂದು ಕಾಮಗಾರಿ ಗುತ್ತಿಗೆದಾರ ಮುರುಡೇಶ್ವರದ ವಿನಾಯಕ್ ಅವರಿಗೆ ಸೂಚಿಸಿದರು . ದೇವಾಲಯದ ಕಾಮಗಾರಿಗೆ ಎಲ್ಲಾ ರೀತಿಯ ಸಹಕಾರವನ್ನು ಶ್ರೀ ಮಠದ ವತಿಯಿಂದ ನೀಡುವುದಾಗಿ ಶ್ರೀಗಳು ತಿಳಿಸಿದರು ಶ್ರೀ ಸ್ವರ್ಣ ಗೌರಮ್ಮ ದೇವಿಗೆ ಕೋಡಿಮಠದ ಮಹಾ ತಪಸ್ವಿ ಶಿವಲಿಂಗ ಸ್ವಾಮೀಜಿಯವರು ಕೋಟಿ ಜಪ ಮಾಡಿ ಸಿದ್ಧಿಸಿದ ಮೂಗುತಿಯನ್ನು ಆಶೀರ್ವದಿಸಿ ನೀಡಿದ್ದು ಆ ಮೂಗತ್ತಿಯ ದರ್ಶನದಿಂದ ಭಕ್ತರ ಸಕಲ ಇಷ್ಟಾರ್ಥಗಳು ಈಡೇರಿತ್ತಿರುವುದರಿಂದ ಈ ಕ್ಷೇತ್ರ ಇತಿಹಾಸ ಪ್ರಸಿದ್ಧಿ ಹೊಂದಿದೆ ಎಂದು ಅವರು ಹೇಳಿದರು ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ ಎಸ್ ನಟರಾಜ್ ಗೌರವಾಧ್ಯಕ್ಷ ಎಸ್ ಮಲ್ಲಿಕಾರ್ಜುನಪ್ಪ ಮುಖಂಡರಾದ ಎಂ ಸಿ ನಟರಾಜ್ ಮಾಡಾಳು ಶಿವಲಿಂಗಪ್ಪ ದುಮ್ಮೇನಹಳ್ಳಿ ಶಂಕ್ರಪ್ಪ ಎಂಬಿ ಅಶೋಕ್ ಹೊಸಳ್ಳಿ ಶಿವಣ್ಣ ಎಂ ಟಿ ಲೋಕೇಶ್ ಎಂ ಡಿ ಸೋಮಶೇಖರ್ ಚಂದ್ರಪ್ಪ ದಾಸಪ್ಪ ಕಟ್ನಿ ತಿಮ್ಮಯ್ಯ ಸೇವಾ ಸಮಿತಿ ಸದಸ್ಯರು ಮುಂತಾದವರಿದ್ದರು







