Home ರಾಜಕಾರಣ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ,

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ,

4
0


ಕುಟುಂಬ ವಾಕ್ಯ ಪರಿಪಾಲನೆ ನಮ್ಮ ಪೂರ್ವಿಕರಲ್ಲಿತ್ತು ಎಂಬ ಸಂದೇಶ ವಾಲ್ಮಿಕಿ ನೀಡಿದ್ದಾರೆ.
ಸಕಲೇಶಪುರ: ಶ್ರೀ ಯುತ ಅಣ್ಣಪ್ಪ ಸ್ವಾಮಿ ನಿವೃತ್ತ ಪ್ರಾಂಶುಪಾಲರು ಮಾತನಾಡಿ  ನಮ್ಮ ಪೂರ್ವಜರು ತುಂಬು ಕುಟುಂಬದಲ್ಲಿ ಹೇಗೆ ಬದುಕಬೇಕು ಎಂದು ವಾಲ್ಮಿಕಿ ರಾಮಾಯಣ ಮತ್ತು  ಪೌರಾಣಿಕ ಕಥೆಗಳಲ್ಲಿ ನೋಡುತ್ತೇವೆ. ಕುಟುಂಬದ ವಾಕ್ಯ ಪಾಲಿಸಬಲ್ಲ ಮತ್ತು ಸಾಮರಸ್ಯದಿಂದ ಬದುಕುವ ಕಲೆ ಪೂರ್ವಜರಿಗೆ ಇತ್ತು ಈಗ ಕ್ಷೀಣಿಸುತ್ತಿದೆ ರಾಮ ಬೇರೆಯಲ್ಲ ವಾಲ್ಮಿಕಿ ಬೇರೆ ಅಲ್ಲ, ರಾಮ ವಾಲ್ಮಿಕಿ ಕಥೆಯ ಪಾತ್ರದಾರಿ ಮಹಿಳೆಯರಿಗೆ ಗೌರವ ನೀಡುವುದನ್ನು ರೂಡಿಸಿಕೊಂಡಿದ್ದ ಮಲತಾಯಿ ಮಾತಿಗೆ ಕಟ್ಟುಬಿದ್ದು ರಾಮ ವನವಾಸ ಮಾಡುತ್ತಾನೆ. ಇದರಿಂದ ಕುಟುಂಬದ ಮಾತಿಗೆ ಮರುಮಾತಾಡದೆ ಭರತನಿಗೆ ಅಧಿಕಾರ ವಹಿಸಿ ಕಾಡಿಗೆ ಹೋಗುತ್ತಾನೆ ತಮ್ಮ ಲಕ್ಷ್ಮಣನನ್ನು ಅಣ್ಣನ ರಕ್ಷಣೆಗೆ ಕಳುಹಿಸಿಕೊಡುತ್ತಾರೆ. ಕುಟುಂಬ ಎಂದರೆ ಹೇಗಿರಬೇಕು ಎಂದು ವಾಲ್ಮಿಕಿ ತುಂಬಾ ವಿವರವಾಗಿ ಹೇಳಿದ್ದಾರೆ.
ಕಂದ ರಾಮಾಯಣ, ವಾಲ್ಮಿಕಿ ರಾಮಾಯಣ ಸೀತಾ ರಾಮಾಯಣ. ಎಂದಲ್ಲ ಹಲವು ಕವಿವರ್ಯರು ತಮ್ಮದೇ ಶೈಲಿಯಲ್ಲಿ ರಾಮಾಯಣ ಮಂಡನೆ ಮಾಡಿದ್ದಾರೆ ಎಂದು ವಾಲ್ಮಿಕಿ ಕುರಿತು ಉಪನ್ಯಾಸ ನೀಡಿದರು. ನಂತರ ಎಸ್ಟಿ ಸಮುದಾಯದ ಮಾದ ಅವರನ್ನು ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುಪ್ರಿತಾ, ಪುರಸಭೆ ಅಧ್ಯಕ್ಷ ಜ್ಯೋತಿರಾಜ್ ಕುಮಾರ್ ಸಮಾಜ ಕಲ್ಯಾಣ ಅಧಿಕಾರಿ ಮೋಹನ್ ಕುಮಾರ್. ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಪಿಡಬ್ಲ್ಯೂಡಿ ಇಂಜಿನಿಯರ್ ಮುರುಗೇಶ್ . ಕುಡಿಯುವ ನೀರಿನ ಇಂಜಿನಿಯರ್ ಹರೀಶ್ ಇನ್ನು ಮುಂತಾದ ಅಧಿಕಾರಿಗಳು ನಾಗರೀಕರು ಪತ್ರಕರ್ತರು ಉಪಸ್ಥಿತರಿದ್ದರು.
✍🏻 ಭರತ್ ಮಲ್ನಾಡ್

LEAVE A REPLY

Please enter your comment!
Please enter your name here