ಸಕಲೇಶಪುರ : ಬಾರಿ ಮಳೆ ಗಾಳಿಗೆ ಬಡ ಕುಟುಂಬಗಳು ಸೂರಿಗಾಗಿ ಅಂಗಲಾಚುತ್ತಿವೆ. ಮಲೆನಾಡು ಭಾಗದ ಜನರ ಜೀವನ ಅಸ್ತವ್ಯಸ್ತ.
ಸಕಲೇಶಪುರ ತಾಲ್ಲೂಕು ಯಶಳೂರು ಹೋಬಳಿಯ ಬಾಣಗೆರೆ ಗ್ರಾಮದ
ಕವಿತಾ w/o ಸತೀಶ ಮತ್ತು
ದೇವಮ್ಮ w/o ದರ್ಮೇಗೌಡ
ಬಾಣಗೆರೆ ಇವರುಗಳ
ಮನೆಗಳು ಗಾಳಿ ಮಳೆಗೆ ಬಿದ್ದು ಶೀಟ್ ಗಳೆಲ್ಲ ಒಡೆದು ಜೀವನ ಮಾಡಲೂ ನೆಲೆ ಇಲ್ಲದ ಪರಿಸ್ಥಿತಿ ಉಂಟಾಗಿ ನರಕ ಸದೃಷ್ಯ ಅವಾಂತರ ಸೃಷ್ಟಿ ಯಾಗಿದೆ.
ಸಂಬಂಧ ಪಟ್ಟ ಕಂದಾಯ ಇಲಾಖೆ ಮತ್ತು ವನಗೂರು ಗ್ರಾಮ ಪಂಚಾಯಿತಿ ಗೆ ತಿಳಿಸಿದರೆ
ಮನೆಗೆ ಹಕ್ಕು ಪತ್ರ ಇದ್ರೆ ಮಾತ್ರ ಇದಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಹೇಳುತ್ತಿದ್ದಾರೆ. ಮನೆ ಕಳೆದು ಕೊಂಡ ಎರೆಡೂ ಕುಟುಂಬಗಳು ಬೀದಿಗೆ ಬಿದ್ದಿದೆ. ಬಂಡವರ ಎದುರು ಪರಿಸ್ಥಿತಿ ವಿವರಿಸುತ್ತಾ ಆಳಲು ತೋಡಿಕೊಳ್ಳುತ್ತಿದ್ದಾರೆ.
ಭಾಣಗೆರೆ ಸುತ್ತಮುತ್ತಲ ಮಲೆನಾಡ ಭಾಗದಲ್ಲಿ ಶೇಕಡಾ ಎಂಭತ್ತು ಭಾಗ ಮನೆಗಳಿಗೆ ಹಕ್ಕು ಪತ್ರ ವಿತರಣೆ ಯಾಗಿಲ್ಲ ಕಛೇರಿ ಅಲೆದು ಜನಪ್ರತಿನಿಧಿಗಳ ಮನೆ ಅಲೆದು ಅತಿದು ನಿಲ್ಲಲು ನೆಲೆ ಇಲ್ಲದೆ ಕಂಗಾಲಾಗಿದ್ದೇವೆ
ಇದೂ ಮಾನ್ಯ ಶಾಸಕರಿಗೂ ಮತ್ತು ಇದಕ್ಕೆ ಸಂಬಂಧ ಪಟ್ಟ ಇಲಾಖೆಗೂ ಗೊತ್ತಿದೆ. ಆದರೆ ಯಾರೂ ಸಹ ಕರುಣೆ ತೋರಿ ಮನೆ ನಿವೇಶನ ಮಂಜೂರು ಮಾಡುವಲ್ಲಿ ಸಹಾಯ ಮಾಡದೆ ಮೀನಾಮೇಷ ಏಣಿಸುತ್ತಿದ್ದಾರೆ. ಮಳೆಗಾಳಿಯಲ್ಲಿ ದಿನವಿಡೀ ದುಡಿದು ನೆಮ್ಮದಿಯಾಗಿ ಮಲಗಲು ಸೂರಿಲ್ಲದೆ ಸಹಾಯಕ್ಕಾಗಿ ಹಾತೊರೆಯುತ್ತಿರುವ ಕುಟುಂಬಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯತೆ ತೋರಿ ಮನೆ ಕಳೆದುಕೊಂಡ ನಿರ್ಗತಿಕರಿಗೆ ಪರಿಹಾರ ನೀಡಿ ಹಾಗು ಮನೆ ಕಟ್ಟಿಕೊಂಡಿರುವ ಎಲ್ಲರಿಗೂ ನಿವೇಶನ ಮಂಜೂರು ಮಾಡಿ. ಸಕಲೇಶಪುರ ಪಶ್ಚಿಮ ಘಟ್ಟಗಳ ನಾಡಾಗಿ ವಿಷೇಷ ಪ್ಯಾಕೇಜ್ ಸರ್ಕಾರ ನೀಡುತ್ತಿದೆ ಎಂದು ಹೇಳುತ್ತಿರುವುದನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಯಾವ ಸೌಲಭ್ಯಗಳೂ ಸಕಲೇಶಪುರ ನಾಗರೀಕರಿಗೆ ಮರಿಚಿಕೆಯಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಿ ಪರಿಹಾರದ ಜೊತೆಗೆ ನಿವೇಶನ ಮುಂಜೂರು ಮಾಡುವಂತೆ ನಾಗರೀಕರು ಒತ್ತಾಯಿಸಿದ್ದಾರೆ.
ವರದಿ : ಭರತ್ ಮಲ್ನಾಡ್

