ಸಕಲೇಶಪುರ : ಜಲ ಜೀವನ್ ಮಿಷನ್ (JJM) ಮನೆ ಮನೆಗೆ ಗಂಗೆ, ಬೀರಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ,ದೊಡ್ಡ ನಗರ 24*7 ಕುಡಿಯುವ ನೀರು ಯೋಜನೆಗೆ ಜಿಲ್ಲಾ ಸಿಇಓ ಚಾಲನೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಆರ್ ಪೂರ್ಣಿಮಾರವರು ಬುಧವಾರ ಬೀರಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ನಾಗರ ಗ್ರಾಮವು ಜೆ ಜೆ ಎಂ ತಾಲ್ಲೂಕಿನ ಮೊದಲ ಗ್ರಾಮವಾಗಿ 24*7 ಕುಡಿಯುವ ನೀರು ಸರಬರಾಜು ಯೋಜನೆ ಚಾಲನೆ ನೀಡಿ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ ವೈಯಕ್ತಿಕ ಮನೆ ನಲ್ಲಿ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಜಲ ಜೀವನ್ ಮಿಷನ್ ಅನ್ನು ರೂಪಿಸಲಾಗಿದೆಯಂದು ತಿಳಿಸಿದರು.
ಸರ್ಕಾರದ ಸೂಚನೆಯಂತೆ ಕುಡಿಯುವ ನೀರಿನ ಬಳಕೆ ಶುಲ್ಕವನ್ನು ವಿಧಿಸಲಾಗುವುದು ನೀರನ್ನು ಮಿತವಾಗಿ ಬಳಸಿ ವ್ಯರ್ಥ ಮಾಡಬೇಡಿ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು ಬೀರಡಳ್ಳಿ ಗ್ರಾಮ ಪಂಚಾಯಿತಿಯು ಜಿಲ್ಲೆಯಲ್ಲಿಯೇ ಅಭಿವೃದ್ಧಿ ಕಾಮಗಾರಿಗಳಲ್ಲಿ ಮುಂದಿದ್ದು ಇತ್ತೀಚೆಗೆ ರಾಷ್ಟ್ರೀಯ ಪುರಸ್ಕಾರ ಪಡೆದಿದೆ ಎಂದು ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನವ್ಯಶ್ರೀ ಮಾತನಾಡಿ, ಜೆಜೆ ಎಂ ಯೋಜನೆಯ ಬಾಕಿ ಇರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು ಎಂದರು ತಿಳಿಸಿದರು.
ಬಿರಡಹಳ್ಳಿ ಪಂಚಾಯಿತಿ ಅಧ್ಯಕ್ಷರು ಎಸ್, ಡಿ ಸತೀಶ್, ಉಪಾಧ್ಯಕ್ಷೇ ಶೃತಿಸುದೀಶ್,ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣೆ ಅಧಿಕಾರಿ ಜಿ.ಡಿ ಗಂಗಾಧರನ್ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಕೆ ಹರೀಶ್, ಎಚ್. ಎಂ ಆದಿತ್ಯ, ಕುಡಿಯುವ ನೀರಿನ ಇಲಾಖೆಯ ಎ ಇ ಇ ಹರೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಆರ್ ಗಿರೀಶ್ ಕುಮಾರ್ ಗ್ರಾಮ ಪಂಚಾಯತಿ ಸದಸ್ಯರಾದ ಎನ್.ಇ ದೇವರಾಜು, ಬಿ ಸಿ ಸವಿವರ,ಬಿ, ಎಸ್.ಮಧುಮಣಿ, ಜೆ.ಕೆ ಸೋಮಶೇಖರ್ ಜೆಜೆ ಎಂ ಯೋಜನೆಯ ಸಿಬ್ಬಂದಿ ಇದ್ದರು..
ವರದಿ : ಭರತ್ ಮಲ್ನಾಡ್
