
ಮಾಡಾಳು ಮಠ ಮಂದಿರಗಳು ಹಾಗೂ ದೇವಾಲಯಗಳ ಅಭಿವೃದ್ಧಿಗೆತಾವು ಸಲ್ಲಿಸುವ ಅಳಿಲು ಸೇವೆ ನಮ್ಮ ಪೂರ್ವಜರುಮಾಡಿರುವ ಪುಣ್ಯದ ಫಲ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಕೆಎಂ ಶಿವಲಿಂಗೇಗೌಡ ಬುಧವಾರ ತಿಳಿಸಿದರು ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮೂಲಸ್ಥಾನ ಶ್ರೀ ಸುವರ್ಣ ಗೌರಮ್ಮ ದೇವಿ ದೇವಾಲಯಕ್ಕೆ ತೆರಳುವ ಮಾರ್ಗದ ಸ್ವಾಗತ ಕಮಾನ್ಅಂದಾಜು10 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು ಮಾನವ ನಿಮಿತ್ತ ಮಾತ್ರ ದೈವ ಸಂಕಲ್ಪದಂತೆ ನಮ್ಮೆಲ್ಲರ ಜೀವನ ಸಾಗುತ್ತಿದೆ ಅದೇ ರೀತಿ ದೇವರ ಕೆಲಸ ಕಾರ್ಯಗಳಿಗೆ ನಾವುಗಳು ಶ್ರಮವಹಿಸದಾಗ ಜನ್ಮ ಜನ್ಮಂತರದ ಕರ್ಮಗಳ ಪರಿಹಾರವಾಗಲು ದೇವಾಲಯಗಳ ಅಭಿವೃದ್ಧಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಎಲ್ಲರೂ ಕೈಜೋಡಿಸಿ ದಾಗ ಮಾತ್ರ ಗ್ರಾಮಗಳಲ್ಲಿ ಸೌಹಾರ್ದತೆ ನೆಲಸಿ ಶಾಂತಿಯಿಂದ ಬಾಳಲು ಸಾಧ್ಯ ಎಂದು ಅವರು ಹೇಳಿದರು ಈ ಸಂದರ್ಭದಲ್ಲಿ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ಎಂ ಎಸ್ ನಟರಾಜ್ ಗೌರವಾಧ್ಯಕ್ಷ ಎಸ್ ಮಲ್ಲಿಕಾರ್ಜುನಪ್ಪ ಮುಖಂಡರಾದ ಎಂಸಿ ನಟರಾಜ್ ಮಾಡಾಳು ಶಿವಲಿಂಗಪ್ಪ ಅಶೋಕ್ ವೈ ಬಿ ನಟರಾಜ್ ಹೊಸಳ್ಳಿ ಶಿವಣ್ಣಎಂ ಟಿ ಲೋಕೇಶ್ ಎಚ್ ಕೆ ಚಂದ್ರಪ್ಪ ದಾಸಪ್ಪ ಕಟ್ನಿ ತಿಮ್ಮಯ್ಯ ಗೌರಮ್ಮ ದೇವಿ ಸೇವಾ ಸಮಿತಿ ಸದಸ್ಯರು ಮುಂತಾದವರು ಪಾಲ್ಗೊಂಡಿದ್ದರು







