
ಅರಸೀಕೆರೆ : ಹಾಸನ-ಹಿರಿಯೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಚೇರಿಯಲ್ಲಿ ಇತ್ತೀಚಿಗೆ ತರೀಕೆರೆ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆಗೊಂಡ ಈ ಕಚೇರಿಯ ವಿಶೇಷ ಭೂಸ್ವಾಧೀನಾಧಿಕಾರಿ ಎನ್. ವಿ.ನಟೇಶ್ ಅವರಿಗೆ ಇಲ್ಲಿಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರಿಂದ ನಿನ್ನೆ ಹೃದಯ ಸ್ಫರ್ಶಿ ಬೀಳ್ಕೋಡಿಗೆ ಸಮಾರಂಭ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶೇಷ ಭೂಸ್ವಾಧೀನ ಅಧಿಕಾರಿ ಎನ್. ವಿ.ನಟೇಶ್ ರವರು, ಹಾಸನ -ಹಿರಿಯೂರು ರಾಷ್ಟ್ರೀಯ ಹೆದ್ದಾರಿಯು ಹಾಸನ ಜಿಲ್ಲೆಯ ಪ್ರಥಮ ಗ್ರೀನ್ ಫೀಲ್ಡ್ ಯೋಜನೆಯಾಗಿದ್ದು , ತನ್ನ ಎರಡು ವರ್ಷದ ಅವಧಿಯಲ್ಲಿ ಈ ಯೋಜನೆಯ 56 ಗ್ರಾಮಗಳ ಒಟ್ಟು ರೂ.419 ಕೋಟಿಗೆ ಅವಾರ್ಡ್ ರಚಿಸಿ ಈ ಶ್ರಮದಿಂದ, ಯೋಜನೆಯು ಕಾಲಮಿತಿಯೊಳಗೆ ಜಾರಿಗೆ ಬರಲು ಅನುಕೂಲ ಮಾಡಿ ಕೊಟ್ಟಿದ್ದಾನೆ ಎಂದು ತಿಳಿಸಿದರು.
ಮುಂದುವರಿದ ಮಾತನಾಡಿದ ಅವರು ಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ, ಆದರೆ ಅವರು ಕಾರ್ಯನಿರ್ವಹಿಸಿದ ಸ್ಥಳದಲ್ಲಿ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯು ಕಾರ್ಯಮಾಡಬೇಕೆಂದು ತಿಳಿಸಿದರು.ಕಚೇರಿ ವ್ಯವಸ್ಥಾಪಕರಾದ ಎ.ಆರ್. ಕೃಷ್ಣೇಗೌಡ ಸಿಬ್ಬಂದಿಗಳಾದ ತುಳಸಿರಾಜ್ ಕೃಷ್ಣ ಮೂರ್ತಿ ಮಾತನಾಡಿದರು.
ಮೊದಲು ಕೆ.ಪಿ.ರಂಗಸ್ವಾಮಿ ಸ್ವಾಗತಿಸಿದರು.
———————–+——