ಬೆಟ್ಟದ ಭೈರವೆಶ್ವರ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರುವಂತೆ ಹಿಂದೂ ಹಿತರಕ್ಷಣಾ ವೇದಿಕೆ “ಪತ್ರ ಸಮರ ಅಭಿಯಾನ”
ಸಕಲೇಶಪುರದ : ಸ್ಥಳಪುರಾಣದ ಪ್ರಕಾರ ಮಹಾಭಾರತದ ಕಾಲದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ದೇಶದಾದ್ಯಂತ ಸಂಚರಿಸುತ್ತಾ ಹಲವು ಶಿವದೇವಾಲಯಗಳನ್ನು ನಿರ್ಮಿಸಿದ್ದಾರೆ ಆ ದೇವಾಲಯಗಳ ಸಾಲಿನಲ್ಲಿ ಈ ಬೆಟ್ಟದ ಭೈರವೇಶ್ವರ ದೇವಾಲಯವು ಮುಂಚೂಣಿಯಲ್ಲಿ ಬರುತ್ತದೆ. ಪಾಂಡವರು ನಿರ್ಮಿಸಿದ ಈ ಮೂಲ ದೇವಾಲಯವನ್ನು ಸುಮಾರು ೭೦೦ ವರ್ಷಗಳ ಹಿಂದೆ ಹೊಯ್ಸಳರು ಮರುನಿರ್ಮಾಣ ಮಾಡಿದ್ದಾರೆ. ಪಾಂಡವರು ಈ ಬೆಟ್ಟದ ಮೇಲೆ ವಾಸಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಈ ದೇವಾಲಯದಲ್ಲಿ ದೊಡ್ಡ ದೊಡ್ಡ ರುಬ್ಬುವ ಕಲ್ಲುಗಳನ್ನು ನಾವು ನೋಡಬಹುದು. ಈ ದೇವಾಲಯದ ಸುತ್ತ ವೇದಿಕೆಯನ್ನೇ ನಿರ್ಮಿಸಲಾಗಿದೆ. ಇಲ್ಲಿಂದ ನಿತ್ತು ನಾವು ಬೆಟ್ಟದ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳನ್ನು ನೋಡಬಹುದು. ಪ್ರತೀವರ್ಷ ಜನವರಿಯಲ್ಲಿ ಈ ಭೈರವೇಶ್ವರನಿಗೆ ವಾರ್ಷಿಕ ಅಭಿಷೇಕವು ಜರಗುತ್ತದೆ ಆಗ ಭಗವಂತನ ಆರ್ಶೀವಾದವನ್ನು ಪಡೆಯಲು ಸುತ್ತ ಮುತ್ತಲಿನ ಸ್ಥಳಗಳಿಂದ ಹಾಗೂ ನಮ್ಮ ಕರ್ನಾಟಕದ ಇತರ ಜಿಲ್ಲೆಗಳಿಂದ ಅಪಾರ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ ಪುರಾಣ ಕಾಲಕ್ಕೆ ಸಂಬಂಧ ಹೊಂದಿರುವ ಬೆಟ್ಟಗಳ ಮೇಲೆ ನೆಲೆಸಿರುವ ದೇವಾಲಯ.
ದಿನಾಂಕ 27.03.2026 ರಂದು ಸಕಲೇಶಪುರದ ಐತಿಹಾಸಿಕ ದೇವಸ್ಥಾನ ಬೆಟ್ಟದ ಭೈರವೆಶ್ವರ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ಮಾಡುತಿದ್ದ ಛಾಯಾಗ್ರಾಹಕ ಅಸಭ್ಯ ಹಾಗೂ ದುರಹಂಕಾರದ ವರ್ತನೆ ಮತ್ತು ದೇವಸ್ಥಾನದ ಪಾವಿತ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಸ್ಥಳೀಯ ಭಕ್ತರ ಮೇಲೆ ದಬ್ಬಾಳಿಕೆ ಮಾಡಿದ ಘಟನೆ ತದನಂತರ ಸಾಮಾಜಿಕ ಜಾಲತಾಣದಲ್ಲಿ ಸ್ಥಾಳ್ಳಿಯರದ್ದೇ ತಪ್ಪು ಎಂದು ಬಿಂಬಿಸಿ ಅಮಾಯಕರು ಜೈಲು ಪಾಲಾಗುವಂತೆ ಮಾಡಿದ್ದೂ ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು. ಈ ಮದ್ಯೆ ಹಾಸನ ಜಿಲ್ಲಾಧಿಕಾರಿಗಳು ದೇವಸ್ಥಾನಕ್ಕೆ ಬಂದು ಗ್ರಾಮಸ್ಥರ ಹೇಳಿಕೆ ಪಡೆದು ನಿರ್ಧಾರ ಮಾಡುತ್ತೇನೆ ಎಂದು ಹೇಳಿ ಇತಿಹಾಸ ಪ್ರಸಿದ್ಧ ಮತ್ತು ತನ್ನದೇ ಪಾರಂಪರಿಕ ಹಿನ್ನಲೆ ಹೊಂದಿರುವ ಹೊಯ್ಸಳರ ಕಾಲದಲ್ಲಿ ಜೀರ್ಣೋದ್ದಾರವಾಗಿ ಪಾಂಡವರ ಕಾಲದ್ದು ಎಂಬ ಕುರುಹುಗಳಿದ್ದರು ಸಹ ಜಿಲ್ಲಾಧಿಕಾರಿಗಳು ಯಾವುದೇ ಮನ್ನಣೆ ನೀಡದೆ ಚಿತ್ರೀಕರಣಕ್ಕೆ ಹಣ ಪಾವತಿಸಿದರೆ ಅನುಮತಿ ನೀಡಬಹುದು ಎಂಬ ನಿರ್ಧಾರ ಮಾಡಿರುವುದು ಖಂಡನೀಯ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಹಾನಬಾಳು ಅಧ್ಯಕ್ಷ ರತನ್ ಮರಗುಂದ ಖಂಡಿಸಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳು ಪ್ರತಿ ಚಿತ್ರೀಕರಣಕ್ಕೆ 4 ಗಂಟೆ ಚಿತ್ರಿಸಲು 5000=00 ಹಣ ನಿಗಧಿ ಮಾಡಿರೋದು ಗ್ರಾಮಸ್ಥರು ಮತ್ತು ಮನೆ ದೇವರಾಗಿ ಪೂಜಿಸುವವರ ಭಾವನೆಗೆ ಮನ್ನಣೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ಗ್ರಾಮಸ್ಥರು ಮತ್ತು ಬೆಟ್ಟದ ಭೈರವೆಶ್ವರನ್ನ ಮನೆದೇವರಾಗಿ ಪೂಜೆ ಮಾಡುವ ಕುಟುಂಬ ಹಾಗೂ ಸಾಮಾನ್ಯ ಭಕ್ತರಿಂದ “ನಾನು ಬೆಟ್ಟದ ಭೈರವೆಶ್ವರ ದೇವರ ಭಕ್ತ ನನ್ನ ಭಾವನೆಗೆ ದಕ್ಕೆ ತರಬೇಡಿ ನನ್ನ ಶ್ರದ್ದೆ, ನನ್ನ ಭಕ್ತಿ ನಮ್ಮ ಅಸ್ಮಿತೆ “ಬೆಟ್ಟದ ಭೈರವೆಶ್ವರ ಆದ್ದರಿಂದ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಮತ್ತು ಫೋಟೋ ಶೂಟ್ ಮಾಡಲು ಅವಕಾಶ ನೀಡಬಾರದು ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಾವಿರಾರು ಜನ ಭಕ್ತರಿಂದ ಪತ್ರ ರವಾನೆಯಾಗುತ್ತದೆ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ಶೇಖರ್ ಕಬ್ಬಿನಗದ್ದೆ ತಿಳಿಸಿದ್ದಾರೆ.
ಮುಂದಿನ ಪೀಳಿಗೆಗೂ ದೇವಸ್ಥಾನ ಸಂರಕ್ಷಣೆ ಆಗಬೇಕು ಎಂಬ ಉದ್ದೇಶದಿಂದ ಪತ್ರ ಅಭಿಯಾನ
ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಾದ ದೀಪಕ್, ಮಹೇಶ್, ಬೈಕೆರೆ ಬಸವರಾಜು, ಗಣೇಶ್, ಮುಖಂಡರಾದ ದುಷ್ಯಂತ್ ಉಪಸ್ಥಿತರಿದ್ದರು
✍️ ಭರತ್ ಮಲ್ನಾಡ್







