Home Uncategorized ಪರಸ್ಪರ ಸಹಕಾರ ಮನೋಭಾವನೆಯಿಂದ ಸಹಕಾರಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ

ಪರಸ್ಪರ ಸಹಕಾರ ಮನೋಭಾವನೆಯಿಂದ ಸಹಕಾರಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ

28
0

ಮಾಡಾಳು  ಒಬ್ಬರಿಗೊಬ್ಬರ ಸಹಕಾರದಿಂದ ಸಹಕಾರಿ ಕ್ಷೇತ್ರವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಿರಂಜನ ಪೀಠ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ಗುರುವಾರ ತಿಳಿಸಿದರು      ಅರಸೀಕೆರೆ       ತಾಲೂಕಿನ ಕಣಕಟ್ಟೆ ಹೋಬಳಿ  ಮಾಡಾಳುಗ್ರಾಮದ ನಿರಂಜನ ಪೀಠದ ಆಭರಣದಲ್ಲಿಆಯೋಜಿಸಿದ್ದ ಸೌಹಾರ್ದ ಸಹಕಾರ ಸಂಘದ 2026 ನೇ ಸಾಲಿನ ಸಹಕಾರ ಸಪ್ತಾಹ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸ್ವಾಮೀಜಿಸಹಕಾರ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯ  ಅಧ್ಯಕ್ಷರು ನಿರ್ದೇಶಕರು ಹಾಗೂ ನೌಕರವರ್ಗ ಪ್ರಾಮಾಣಿ ಕತೆಯಿಂದ ಪಾರದರ್ಶಕವಾಗಿ ಬಡವ ಬಲಿದ ಎಂಬ ಯಾವುದೇ ತಾರತಮ್ಯವಿಲ್ಲದೆಉತ್ತಮ ಮನೋಭಾವ ಹೊಂದಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸ್ಥಳೀಯ ಸಂಸ್ಥೆಗಳು ಪ್ರಗತಿ ಪಥ ದಲ್ಲ ಸಾಕುವುದಲ್ಲದೆ ಸಹಕಾರ ಸಂಘದ ಷೇರುದಾರರಿಗೆ ಮತ್ತು ರೈತರಿಗೆ ಆರ್ಥಿಕ ನೆರವು ನೀಡಲು ಅನುಕೂಲ ವಾಗುತ್ತದೆ ಎಂದರು  ಗ್ರಾಮೀಣ ಭಾಗದಲ್ಲಿ ಇಂತಹ ಸಹಕಾರ ಸಂಘಗಳ ನ ಸ್ಥಾಪಿಸಿ ಆರ್ಥಿಕವಾಗಿ ಹಿನ್ನಡೆಯಲಿರುವ ಮತ್ತು ದುರ್ಬಲವಾಗಿ ರುವ ಸಂಘದ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಸ್ವಾವಲಂಬಿಗಳನ್ನಾಗಿಮಾಡಿದಾಗ ಮಾತ್ರ ಅವರ ಬದುಕು ಹಸನಾಗುತ್ತದೆ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು      ಸೌಹಾರ್ದ ಸಹಕಾರ ಸಂಘದ ಉಪಾಧ್ಯ ಕ್ಷಎನ್ ಜಿ ಮ ರುಳಸಿದ್ದ ಸ್ವಾಮಿ ನಾಗಸಮುದ್ರ  ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಸ್ ಎಂ ಗಂಗಾಧರ್ ಸಂಘದ ನಿರ್ದೇಶಕರಾದ ಸುಧಾ ಮಹೇಶ ಕುಮಾರ್ ದುಮ್ಮೇನಹಳ್ಳಿ ಮುಖಂಡರಾದ ಮಾಡಾಳು ಶಿವಲಿಂಗಪ್ಪಸಂಘದ ವೈ ಬಿ ನಟರಾಜ್ ಕಾರ್ಯ ನಿರ್ವಹಣಾಧಿಕಾರಿ ಹಾರಆರ್ ಬಿ ಸುಷ್ಮಾ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here