ಹೆಚ್ ವಿ ನ್ಯೂಸ್ ಅರಸಿಕೆರೆ
ಎಮ್ ಸಮೀವುಲ್ಲಾ ರವರು ನಗರ ಸಭೆ ಅಧ್ಯಕ್ಷರಾಗುವ ಮುಂಚೆ ನಗರದ ವಾರ್ಡ್ ಗಳಿಗೆ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತವಾಗಿ ಚುನಾಯಿತ ಸದಸ್ಯರಿಗೆ ನಾಗರೀಕರು ಗೌರವ ನೀಡುತ್ತಿರಲಿಲ್ಲ ಕಳೆದ ಒಂದು ವರ್ಷದಿಂದ ಎಮ್ ಸಮೀವುಲ್ಲಾ ರವರು ಅಧ್ಯಕ್ಷರಾದ ನಂತರ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಚುನಾಯಿತ ನಗರಸಭಾ ಸದಸ್ಯರುಗಳಿಗೆ ಗೌರವ ಹೆಚ್ಚಾಗಿದೆ ಎಂದು ಅರಸೀಕೆರೆ ನಗರಸಭೆ ಸದಸ್ಯರಾದ ಹರೀಶ್ ತಿಳಿಸಿದರು
ಅಧ್ಯಕ್ಷರಾದ ಎಮ್ ಸಮೀವುಲ್ಲಾ ಉಪಾಧ್ಯಕ್ಷರಾದ ಮನೋಹರ್ ರವರು ಅಧಿಕಾರವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರಿಗೆ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಹರೀಶ್ ಅರಸೀಕೆರೆಯ ಹಾಸನ ಸರ್ಕಲ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಯ ಅತಿ ಹೆಚ್ಚು ಎತ್ತರದ ರಾಷ್ಟ್ರ ಧ್ವಜ ನಿರ್ಮಾಣ ಮಾಡಿ ಹಾಗೂ ನಗರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಿ ಪಿಪಿ ವೃತ್ತದ ಬಳಿ ನಗರ ಸಭೆಯ ಅಭಿವೃದ್ಧಿ ಕಾರ್ಯಗಳ ಹಾಗೂ ಅರಸಿಕೆರೆ ನಗರದ ವಿಶೇಷತೆಗಳನ್ನು ಜಾಹೀರಾತು ಮುಖಾಂತರ ನಗರಸಭೆಯ ಎಲ್ಇಡಿ ಸ್ಕ್ರೀನ್ ನಿರ್ಮಾಣವನ್ನು ಸಹ ಮಾಡಿ ನಗರದ ಅಂದವನ್ನು ಹೆಚ್ಚಿಸಿದ್ದಾರೆ ಹೀಗಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ನಗರ ಸಭೆಯ ಎಲ್ಲಾ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹರೀಶ್ ತಿಳಿಸಿದರು
ನಗರದ ನಾಗರಿಕರಿಗೆ ಸಹೋದ್ಯೋಗಿ ನಗರಸಭಾ ಸದಸ್ಯರುಗಳಿಗೆ ನಗರಸಭೆಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಅಭಿನಂದನೆ ಎಮ್ ಸಮೀವುಲ್ಲಾ ಪ್ರತಿಕ್ರಿಯೆ
ಮೂರನೇ ಬಾರಿ ಪುರಸಭೆ ಮತ್ತು ನಗರಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಕಾರಣರಾದ ಮತದಾರರು ಮತ್ತು ನಗರದ ಅಭಿಮಾನಿಗಳು ಇವರಿಗೆ ನಾನು ವೈಯಕ್ತಿಕವಾಗಿ ಆಭಾರಿಯಾಗಿದ್ದು ಕಳೆದ ಬಾರಿಗಿಂತ ಈ ಬಾರಿ ನಗರದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಗರ ಸಭೆಯ ಆಯುಕ್ತರು ಅಧಿಕಾರಿಗಳು ಸಿಬ್ಬಂದಿಗಳು ನಮ್ಮೊಂದಿಗೆ ಸಹಕರಿಸಿದ್ದು ಅತಿ ಹೆಚ್ಚಾಗಿ ನನ್ನ ಸಹೋದ್ಯೋಗಿ ನಗರಸಭಾ ಸದಸ್ಯರುಗಳು ಸಲಹೆ ಮತ್ತು ಸಹಕಾರದಿಂದ ಈ ಬಾರಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಅಲ್ಲದೆ ಇಂದು ಆಯೋಜಿಸಿರುವ ನಗರಸಭೆಯ ಸದಸ್ಯರುಗಳು ಮತ್ತು ಅಪಾರ ಅಭಿಮಾನಿಗಳು ಈ ಸಮಾರಂಭವನ್ನು ಆಯೋಜಿಸಿದ್ದರಿಂದ ನಾನು ವೈಯಕ್ತಿಕವಾಗಿ ಆಭಾರಿಯಾಗಿದ್ದೇನೆ ಎಂದು ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ ತಿಳಿಸಿದರು ಅರಸೀಕೆರೆ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅರಸಿಕೆರೆ ತಾಲೂಕು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಹಾಗೂ ಸರ್ಕಾರದ ನಾಮನಿರ್ದೇಶಕ ನಗರಸಭಾ ಸದಸ್ಯರಾದ ಕಿರಣ್ ಕುಮಾರ್ ಸೇರಿದಂತೆ ಇನ್ನಿತರೆ ನಗರಸಭೆ ಸದಸ್ಯರುಗಳು ಹಾಗೂ ಅಪಾರ ಅಭಿಮಾನಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು
