ಅಂತರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣಾ ಮಂಡಳಿ ವತಿಯಿಂದ.
2025ನೇ ಆಗಸ್ಟ್ 15ಕ್ಕೆ ದೇಶಕ್ಕಾಗಿ ತ್ಯಾಗ ಮಾಡಿರುವ ಹುತಾತ್ಮರಿಗುವ ಸೈನಿಕರ ಹೆಸರಿನಲ್ಲಿ ಗಿಡ ನೆಟ್ಟುವ ಕಾರ್ಯಕ್ರಮ ದೇಶಾದ್ಯಂತ ನಡೆಯಲಿದೆ
ಭಾರತೀಯ ಹುತಾತ್ಮನ ಹೆಸರಿನಲ್ಲಿ – ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ” ರಾಷ್ಟ್ರೀಯ ಮರ ನೆಡುವ ಅಭಿಯಾನಕ್ಕೆ ಸಹಕಾರ ಮತ್ತು ಅನುಮತಿಗಾಗಿ ತುಮಕುರು ಜಿಲ್ಲಾಅಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಸಹಕಾರ ನೀಡುವಂತೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದಂತಹ ಅಂತರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣಾ ಮಂಡಳಿಯ ರಾಜ್ಯ ಉಸ್ತುವಾರಿಯಾದ ಮಂಜುನಾಥ್ ಆರ್.
ನಮ್ಮ ಸಂಸ್ಥೆ “ಅಂತರಾಷ್ಟ್ರೀಯ ಮಾನವಾಧಿಕಾರ ನ್ಯಾಯಿಕ್ ಸುರಕ್ಷಾ ಪರಿಷತ್” ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, 15 ಆಗಸ್ಟ್ 2025 ರಂದು, ಕರ್ನಾಟಕ ರಾಜ್ಯ ಮತ್ತು ಭಾರತದ ಇತರ ರಾಜ್ಯಗಳಾದ್ಯಂತ “ಏಕ್ ವೃಕ್ಷ ಶಹೀದ್ ಕೆ ನಾಮ್ – ಹರಿಯಲಿ ಸೆ ಕರೆನ್ ರಾಷ್ಟ್ರ ಕೋ ಸಲಾಮ್” ಎಂಬ ರಾಷ್ಟ್ರವ್ಯಾಪಿ ಮರ ನೆಡುವ ಅಭಿಯಾನವನ್ನು ಆಯೋಜಿಸುತ್ತಿದೆ ಎಂದು ನಾವು ಗೌರವಪೂರ್ವಕವಾಗಿ ಸಲ್ಲಿಸುತ್ತೇವೆ.
ನಮ್ಮ ಮಾತೃಭೂಮಿಯ ಹುತಾತ್ಮರ ನೆನಪಿಗಾಗಿ ಮರಗಳನ್ನು ನೆಡುವುದು, ಅವರ ಕುಟುಂಬಗಳನ್ನು, ವಿಶೇಷವಾಗಿ ತಾಯಂದಿರನ್ನು ಗೌರವಿಸುವುದು ಮತ್ತು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಜಾಗೃತಿಯನ್ನು ಉತ್ತೇಜಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು
ಈ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು..

ವರದಿ. ಎಂ ಡಿ ನಾಸೀರ್