ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮದೇವಿ ದೇವಾಲಯದಲ್ಲಿ ಯುಗಾದಿ ಅಮಾವಾಸ್ಯೆ ವಿಶೇಷ ಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ದಾ ಭಕ್ತಿಯಿಂದ ಗುರುವಾರ ರಾತ್ರಿ ವಿಜೃಂಭಣೆಯಿಂದಅದ್ದೂರಿಯಾಗಿ ಜರುಗಿತು ಅರಸೀಕೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ತಾಯಿ ಜಗನ್ಮಾತೆ ಅಮ್ಮನವರ ದೇವಾಲಯದಲ್ಲಿ ಸಂಪ್ರದಾಯದಂತೆ ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳು ದೇವಿಗೆ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಲಾಗುತ್ತದೆ ಆದರೆ ಈ ಬಾರಿ ಯುಗಾದಿ ಹಬ್ಬ ಹಾಗೂ ಅಮಾವಾಸ್ಯೆ ನಿಮಿತ್ತ ಅಮ್ಮನವರಿಗೆ ಬಣ್ಣ ಬಣ್ಣದ ಹೂಗಳಿಂದ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು ಮುಂಜಾನೆ ರುದ್ರಾಭಿಷೇಕ ಸಹಸ್ರವಿಲ್ವಾರ್ಚನೆಯ ರನ್ನು ಪುರೋಹಿತರು ಶಾಸ್ತ್ರೋಕ್ತವಾಗಿ ನೆರವೇರಿಸಿದರು ಪೂಜೆಯ ಅಂಗವಾಗಿ ದೇವಾಲಯವನ್ನು ತಡೆದು ತೋರಣ ಬಾಳೆ ಕಂದುಗಳಿಂದ ಶ್ಯ O ಗರಿಸಿದ್ದು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ನಯನ ಮನೋಹರವಾಗಿತ್ತು ರಾತ್ರಿ 8 ಗಂಟೆಗೆ ಸರಿಯಾಗಿ ಪುರೋಹಿತರಿಂದ ಕೋಡಿಮಠಗದ್ದುಗೆಯಲ್ಲಿ ಯೋಗ ಸಮಾದಿಯಲ್ಲಿರುವಮಹಾ ತಪಸ್ವಿ ಶಿವಲಿಂಗ ಜ್ಯಯ್ಯ ಮೂರ್ತಿಹಾಗೂ ಗ್ರಾಮದ ಆರಾಧ್ಯದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಮತ್ತು ಅಮ್ಮ ನವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿಯನ್ನು ಭಕ್ತಿ ಭಾವದಿಂದ ನೆರವೇರಿಸಲಾಯಿತು ನಂತರ ಬಂದ ಭಕ್ತಾದಿಗಳಿಗೆ ಕಡಲಮಗೆ ಗ್ರಾಮಸ್ಥರು ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು ಮಾಡಾಳು ಗ್ರಾಮಸ್ಥರು ಸೇರಿದಂತೆ ಸೀತಾಪುರ ಕೊಪ್ಪಲು ಯೆರೆಹಳ್ಳಿ ಡಿಎಂ ಕುರ್ಕೆ ಶಸಿವಾಳ ರಾಂಪುರ ಸೊಪ್ಪಿನ ಹಳ್ಳಿ ದಿಬ್ಬೂರು ವೈಜಿಹಳ್ಳಿ ಪಿ ಹೊಸಳ್ಳಿ ಕಿತ್ತನಕೆರೆ ದೋಣನಕಟ್ಟೆ ಬೊಮ್ಮ ಸಮುದ್ರ ಶಂಕರನಹಳ್ಳಿ ಮದ್ದರಹಳ್ಳಿ ಕಡಲ ಮಗೆ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು







