

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಹಾಗೂ ಜಗಳೂರು ಲಕ್ಷ್ಮಣ್ ರಾವ್ ಅವರ ಮಾರ್ಗ ದರ್ಶನದಲ್ಲಿ ಇಂದು ಬೆಳಿಗ್ಗೆ 11.45 ಕ್ಕೆ ಬೆಂಗಳೂರು ನಗರದ ಗಾಯಿತ್ತಿ ನಗರದ ಹಿರಿಯ ಪತ್ರಕರ್ತರಾದ ಜಗಳೂರು ಇವರ ನಿವಾಸದಲ್ಲಿ ಎಲ್ಲಾ ಸದಸ್ಯರ ಒಮ್ಮತದಿಂದ ಇಂದು ನಡೆದ ಪೂರ್ವ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ಗೋವಿಂದರಾಜು ಹಾಗೂ ನಮ್ಮ ಪಂಚಾಯತಿ ಸುದ್ದಿ ಪತ್ರಿಕೆ ಸಂಪಾದಕರಾದ ಹೆಚ್.ವಿ.ಅರುಣ್ ಕುಮಾರ್ ಅವರನ್ನ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ
ನೂತನ ಪ್ರದಾನ ಕಾರ್ಯದರ್ಶಿ ಅರುಣ್ ಕುಮಾರ್ ಈ ಮೊದಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಯಲಹಂಕ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಅವರ ಕಾರ್ಯ ವೈಖರಿ ಮೆಚ್ಚಿ ಇದೀಗ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಲಾಗಿದೆ..
ನೂತನ ಅಧ್ಯಕ್ಷರು ಹಾಗೂ ಪ್ರದಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರಿಗೆ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ಜಗಳೂರು ಲಕ್ಷ್ಮಣ್ ರಾವ್ ಅವರು ಆದೇಶ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು, ಇದೆ ವೇಳೆ ನೂತನ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಗೋವಿಂದರಾಜು, ಮಂಜುನಾಥ್.ಚಂದ್ರಣ್ಣ, ಉಮಾಶಂಕರ್,ವಸಂತ್ ಕುಮಾರ್, ರುದ್ರಮುನಿ.ವಸಂತಾಚಾರ್ಯ.ಜಲಾಹುದ್ದಿನ್,ಹಾಗೂ ಸದಸ್ಯರು ಮತ್ತಿತರರಿದ್ದರು..
