
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆಯ ಹೊಲಿಗೆ ಕಾರ್ಮಿಕರು ಈ ಹಿಂದೆ ಕಾರ್ಮಿಕರ ಎನ್‌ಪಿಎಸ್ ನ್ಯಾಷನಲ್ ಪೆನ್ಷನ್ ಸಿಸ್ಟಮ್ ಮುಖಾಂತರ ಪ್ರತಿ ವರ್ಷ ಹಣವನ್ನು ಬೆಂಗಳೂರಿನ ಅಲಂಕೀತ್ ಎಂಬ ಸಂಸ್ಥೆಯ ಮುಖಾಂತರ ಹಣ ಜಮಾ ಮಾಡುತ್ತಿದ್ದರು ಅರಸೀಕೆರೆ ತಾಲೂಕಿನಲ್ಲಿ ಸುಮಾರು ಹತ್ತು ಜನ ಹೊಲಿಗೆ ಕಾರ್ಮಿಕರು ತಮ್ಮ ನಿವೃತ್ತಿ ಹಣ ಪಡೆಯಲು ದಾಖಲಾತಿಗಳನ್ನು ಸಲ್ಲಿಸಿ ಸುಮಾರು ಆರು ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದರು ಇದುವರೆಗೂ ಸಹ ಅವರ ಖಾತೆಗೆ ಹಣ ಜಮಾ ಆಗಿರುವುದಿಲ್ಲ ಇದರಿಂದ ಹೊಲಿಗೆ ಕಾರ್ಮಿಕರು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಅರಸೀಕೆರೆ ತಾಲೂಕ್ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಮತ್ತು ಸಕಲೇಶಪುರ ತಾಲೂಕ ಅಧ್ಯಕ್ಷರಾದ ಸತ್ಯನಾರಾಯಣ್. ಮಂಜುನಾಥ್ ಮತ್ತು ರಾಜೇಶ್ ಕರ್ನಾಟಕ ರಾಜ್ಯ ಸರ್ಕಾರದ ಗೌರವಾನ್ವಿತ ಸಭಾಧ್ಯಕ್ಷರಾದ ಯು ಟಿ ಖಾದರ್ ರವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಸಭಾಧ್ಯಕ್ಷರ ಗಮನಕ್ಕೆ ತಂದಾಗ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ಸೂಚನೆ ನೀಡಿದರು ಎಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು