Home Uncategorized ಉಡುಪಿ ವಾಸುದೇವ ಕೃಪಾ ವಿದ್ಯಾಮಂದಿರ: ಶಾಲೆಯ ವಿಂಷತಿ  ವಾರ್ಷಿಕೋತ್ಸವ

ಉಡುಪಿ ವಾಸುದೇವ ಕೃಪಾ ವಿದ್ಯಾಮಂದಿರ: ಶಾಲೆಯ ವಿಂಷತಿ  ವಾರ್ಷಿಕೋತ್ಸವ

42
0


ಉಡುಪಿಯ ವಾಸುದೇವ ಕೃಪಾ ಆಂಗ್ಲ. ಆಂಗ್ಲಮಾಧ್ಯಮ ಶಾಲೆಯ ಇಪ್ಪತ್ತನೆಯ ವಾರ್ಶಿಕೋತ್ಸವ, ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಧಜಾರೋಹಣ ಮಾಡಿ, ಬಹುಮಾನ ವಿತರಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಹಳೆ ವಿದ್ಯಾರ್ಥಿ ರಂಜನ್ ರಾವ್ ಉಪಸ್ಥಿತರಿದ್ದು ಬಹುಮಾನ ವಿತರಣೆಯಲ್ಲಿ ಪಾಲ್ಗೊಂಡರು. ಧ್ವಜಾರೋಹಣದ ಬಳಿಕ ಮಕ್ಕಳಿಂದ ಅಂದದ ಕವಯತು, ವ್ಯಾಯಾಮ ನಡೆಯಿತು.
ವೇದಿಕೆಯಲ್ಲಿ ಸಂಚಾಲಕರಾದ ಶ್ರೀ ಕೆ. ಅಣ್ಣಪ್ಪ ಶೆಣೈ ಅಧ್ಯಕತೆ ವಹಿಸಿದ್ದರು. ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ್ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ನಿಶಾ ಉಪಸ್ಥಿತರಿದ್ದು, ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕರಾದ ರೋಷನ್ ವಂದಿಸಿದರು. ವಿದ್ಯಾರ್ಥಿಗಳಾದ ವಲ್ಲರೀ, ಕೇನಿಷಾ ನಿರೂಪಿಸಿದರು.

LEAVE A REPLY

Please enter your comment!
Please enter your name here