Home ರಾಜಕಾರಣ ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ

ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ

58
0

ಶುಕ್ರವಾರ ನಡೆಯಲಿರುವ ಜನ ಸಂಪರ್ಕ ಸಭೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಾಗರೀಕರಿಗೆ ರೈತರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ಹಾಗೂ ಹಲವಾರು ಇಲಾಖೆಗಳ ತಾಂತ್ರಿಕ ದೋಷದಿಂದ ಸೌಲಭ್ಯಗಳು ವಿಳಂಬವಾದ ಅಂತಹ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವುದುಕ್ಕಾಗಿ ಅರಸೀಕೆರೆ ಕ್ಷೇತ್ರದ ಶಾಸಕರು ಹಾಗೂ ಗ್ರಹ ಮಂಡಳಿ ಅಧ್ಯಕ್ಷರಾದ ಕೆಎಂ ಶಿವಲಿಂಗೇಗೌಡರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದು ಇದರ ಸದುಪಯೋಗವನ್ನು ತಾಲೂಕಿನ ನಾಗರೀಕರು ಉಪಯೋಗಿಸಿಕೊಳ್ಳಬಹುದಾಗಿದೆ

ನಗರಸಭೆ ವತಿಯಿಂದ ಬಿ ಖಾತಾ ವಿತರಣೆ ಎಂ ಸಮೀವುಲ್ಲಾ

ನಾಳೆ ನಡೆಯಲಿರುವ ಜನ ಸಂಪರ್ಕ ಸಭೆಯಲ್ಲಿ ಅರಸೀಕೆರೆ ನಗರದ ನಾಗರೀಕರ ಬಹಳ ದಿನಗಳ ಸಮಸ್ಯೆಯಾಗಿದ್ದ ಕಂದಾಯ ನಿವೇಶನಗಳಿಗೆ ನಗರಸಭೆ ವತಿಯಿಂದ ಬಿ ಖಾತೆಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದ ಸುಮಾರು 180 ಫಲಾನುಭವಿಗಳಿಗೆ ಅರಸೀಕೆರೆ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರಾದ ಕೆ ಎಮ್ ಶಿವಲಿಂಗೇಗೌಡರ ಸಮ್ಮುಖದಲ್ಲಿ ನಗರಸಭೆ ವತಿಯಿಂದ ವಿತರಿಸಲಾಗುವುದೆಂದು ಅರಸೀಕೆರೆ ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ ತಿಳಿಸಿದರು

LEAVE A REPLY

Please enter your comment!
Please enter your name here