ಒಟ್ಟು 56473 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದರು ಸಹ ಬಹುತೇಕ ಶೇಕಡ 90ರಷ್ಟು ಪ್ರದೇಶದಲ್ಲಿ, ತೆಂಗಿನ ಬೆಳೆಯ ಇಳುವರಿಯಲ್ಲಿ ಗಣನೀಯ ಪ್ರಮಾಣದ ಇಳಿಮುಖ ಕಂಡು ಬಂದಿರುತ್ತದೆ.
ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ತೆಂಗು ಬೆಳೆಯ ಇಳುವರಿ ಕುಂಠಿತವಾಗಲು ಪ್ರಮುಖವಾದ ಕಾರಣಗಳೆಂದರೆ ಹವಮಾನ ವೈಪರಿತ್ಯ ಕೀಟ ಮತ್ತು ರೋಗಗಳ ಭಾದೆ :- ತಾಲೂಕಿನ ತೆಂಗು ಬೆಳೆಯಲ್ಲಿ ಶೇಕಡ 70ರಷ್ಟು ಪ್ರದೇಶದಲಿ ಬಿಳಿನೊಣಗಳ ಬಾದೆ, ಕಪ್ಪು ತಲೆ ಹುಳಗಳು ಕಾಂಡ ಸೋರುವ ರೋಗ, ಅಣಬೆ ರೋಗ ಮತ್ತು ರೈನಾಸರಸ್ ದುಂಬಿಯ ಹಾವಳಿ ಹೆಚ್ಚಾಗಿರುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ:- ಪೊಟ್ಯಾಷ್, ಸೂಕ್ಷ್ಮ ಪೋಷಕಾಂಶಗಳು ಮತ್ತು ಸಾವಯವ ಇಂಗಾಲದ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯವು ಕುಂಠಿತಗೊಂಡಿರುತ್ತದೆ,
ತೆಂಗು ಬೆಳೆಗಾರರು ಸಂಕಷ್ಟದಲ್ಲಿರುವುದನ್ನು ಗಮನಿಸಿ ಜಿಲ್ಲೆಯ ಅಧಿಕಾರಿಗಳ ತಂಡಗಳನ್ನು
ಒಳಗೊಂಡಂತೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ (CPCRI), ಕಾಸರಗೋಡು ಇಲ್ಲಿಂದ ವಿಜ್ಞಾನಿಗಳಾದ ಡಾ.ಪ್ರತಿಭಾ, ಡಾ.ಸುರೇಖ ಇವರನ್ನು ದಿನಾಂಕ :17-07-2025ರಿಂದ 18-07-2025ರವರೆಗೆ ಎರಡು ದಿನಗಳ ಕಾಲ ಕೆ.ವೆಂಕಟಾಪುರ, ಬೈರನಾಯಕನಹಳ್ಳಿ, ನಾಗತಿಹಳ್ಳಿ, ಜಾಜೂರು, ಹಿರಿಯೂರು ಚಿಕ್ಕೂರು, ಕರಡಿಹಳ್ಳಿ, ಕುರುವಂಕ, ಗರುಡನಗಿರಿ, ಕಲ್ಲು ಸಾದರಹಳ್ಳಿ, ಗ್ರಾಮಗಳ ತೆಂಗು ತೋಟಗಳಿಗೆ ಬೇಟಿ ನೀಡಿಸಿ ತೆಂಗು ಬೆಳೆಯಲ್ಲಿನ ಇಳುವರಿ ಕುಂಠಿತಕ್ಕೆ ಕಾರಣವೇನು ಎಂಬ ಬಗ್ಗೆ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.
ವಿಜ್ಞಾನಿಗಳು ತೆಂಗಿನ ತೋಟಗಳನ್ನು ಪರಿಶೀಲಿಸಿದಾಗ ತೆಂಗು ಬೆಳೆಯಲ್ಲಿ ಸಮಸ್ಯೆಯಾಗಿರುವುದನ್ನು ಗಮನಿಸಿ ಹೆಚ್ಚಿನ ವಿಶ್ಲೇಷಣೆಗಾಗಿ ರೋಗ, ಕೀಟಬಾಧಿತ ಮತ್ತು ಅನುತ್ಪಾದಕ ತೆಂಗಿನ ತೋಟಗಳ ಎಲೆ ಹಾಗೂ ಮಣ್ಣಿನ ಮಾದರಿಯನ್ನು ಸಂಗ್ರಹಿಸಿರುತ್ತಾರೆ,
ತೆಂಗಿನಲಿ ಕಂಡು ಬರುವ ಕಪ್ಪುತಲೆ ಹುಳುಗಳ ನಿಯಂತ್ರಣಕ್ಕಾಗಿ ಇಲಾಖಾ ಪ್ರಯೋಗ ಶಾಲೆಯಲ್ಲಿ ಗೋನಿಯೋಜಸ್ ನೆಫಾಂಡಿಟಿಸ್ ಪರೋಪ ಜೀವಿಗಳನ್ನು ಉತ್ಪಾದಿಸಿ ಬಿಡುಗಡೆಗೊಳಿಸಲಾಗುತ್ತಿದೆ. 2024-25 ನೇ ಸಾಲಿನಲ್ಲಿ 14 ಲಕ್ಷ ಪರೋಪ ಜೀವಿಗಳನ್ನು ಉತ್ಪಾದಿಸಿ ಬಿಡುಗಡೆಗೊಳಿಸಲಾಗಿದ್ದು, 2025-26ನೇ ಸಾಲಿನಲ್ಲಿ ಉತ್ಪಾದನೆ ಗುರಿಯನ್ನು 40 ಲಕ್ಷಗಳಿಗೆ ಹೆಚ್ಚಿಸಲಾಗಿರುತ್ತದ
ಇದಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಆದಷ್ಟು ಬೇಗ ಹಣವನ್ನು ಬಿಡುಗಡೆಗೊಳಿಸಬೇಕೆಂದು ತಿಳಿಸಿದರು