Home Uncategorized ಅರಸೀಕೆರೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಸಹಾಯಕ ಕೃಷಿ ನಿರ್ದೇಶಕರಾದ ಎ ಪಿ ಶಿವಕುಮಾರ್

ಅರಸೀಕೆರೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಸಹಾಯಕ ಕೃಷಿ ನಿರ್ದೇಶಕರಾದ ಎ ಪಿ ಶಿವಕುಮಾರ್

38
0

ಅರಸೀಕೆರೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ
ಪತಿ ವರ್ಷದಂತೆ ಡಿಸೆಂಬರ್ 23ನೇ ತಾರೀಕಿನಂದು ಭಾರತ ಸರ್ಕಾರದ ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಚೌದರಿ ಚರಣ್ ಸಿಂಗ್ ರವರ   ಜನ್ಮ ದಿನಾಚರಣೆ ಅಂಗವಾಗಿ  ಕಿಸಾನ್ ದಿವಸ್ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿದೆ ಅದರಂತೆ ಅರಸೀಕೆರೆ ತಾಲೂಕಿನ ಕೃಷಿ ಇಲಾಖೆ. ಅರಸೀಕೆರೆ ಕೃಷಿಕ ಸಮಾಜ. ತೋಟಗಾರಿಕೆ ಇಲಾಖೆ ರೇಷ್ಮೆ ಇಲಾಖೆ. ಪಶು ಸಂಗೋಪನೆ ಮೀನುಗಾರಿಕೆ ಹಾಗೂ ಕಂದಾಯ ಇಲಾಖೆ ಮತ್ತು  ಹಾಗೂ ತಾಲೂಕಿನ ಎಲ್ಲಾ ರೈತ ಸಂಘಟನೆಗಳ ಸಹಭಾಗಿತ್ವದಲ್ಲಿ  ದಿನಾಂಕ 23 12 2025ರ ಮಂಗಳವಾರದಂದು ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು  ಅರಸೀಕೆರೆ ತಹಸಿಲ್ದಾರ್ ರವರ ಕಚೇರಿ ಆವರಣದಲ್ಲಿ  ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿತ್ತು ಸದರಿ ಕಾರ್ಯಕ್ರಮದಲ್ಲಿ   ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರಾದ  ಕೆಎಂ ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸಲಿದ್ದು  ಅರಸಿಕೆರೆ ತಾಲೂಕಿನ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳು  ಹಾಗೂ ರೈತ ಸಂಘದ ಮುಖಂಡರುಗಳು ಹಾಗೂ ಸಂಘ ಸಂಸ್ಥೆಯ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತ ಮಹಿಳೆಯರು ಸೇರಿದಂತೆ  ಸ್ವಯಂ ಪ್ರೇರಿತರಾಗಿ ರೈತ ದಿನಾಚರಣೆಯಲ್ಲಿ  ಭಾಗವಹಿಸಬೇಕಾಗಿ ಅರಸೀಕೆರೆಯ ಸಹಾಯಕ ಕೃಷಿ ನಿರ್ದೇಶಕರಾದ  ಎ ಪಿ ಶಿವಕುಮಾರ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here