ನೂತನ ಜಿಲ್ಲಾಧಿಕಾರಿಗಳಾಗಿ ಆಗಮಿಸಿರುವ ಲತಾ ಕುಮಾರಿಯವರು ನಿನ್ನೆ ಅರಸೀಕೆರೆಗೆ ಭೇಟಿ ನೀಡಿ ನಗರದಲ್ಲಿ ನಡೆಯುತ್ತಿರುವ ಗುಂಪು ಮನೆಗಳು ಜಿ ಪ್ಲಸ್ ಒನ್ ಮತ್ತು ನಗರಸಭೆ ವತಿಯಿಂದ ನಡೆಯುತ್ತಿರುವ ಹಲವಾರು ಕಾಮಗಾರಿಗಳನ್ನು ವೀಕ್ಷಿಸಿದರು ಅರಸಿಕೆರೆ ನಗರದ ಜನತೆಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜುತ್ತಿರುವ ಗನ್ನಿ ಗಡದಿಂದ ಅರಸೀಕೆರೆಗೆ ಸರಬರಾಜು ಆಗುವ ಎಂ ಬಿ ಆರ್ ಫಿಲ್ಟರ್ ಘಟಕವನ್ನು ಸಹ ವೀಕ್ಷಿಸಿದರಲ್ಲದೆ ಅರಸೀಕೆರೆ ನಗರದ ಕಂತೆನಳ್ಳಿ ನಿರ್ಮಾಣವಾಗುತ್ತಿರುವ ಆರಸಿ ಉದ್ಯಾನವನದಲ್ಲಿ ನಿರ್ಮಾಣವಾಗುತ್ತಿರುವ ಈಜುಕೊಳವನ್ನು ಸಹ ವೀಕ್ಷಿಸಿದರು ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ. ನಗರಸಭೆ ಆಯುಕ್ತರದ ಕೃಷ್ಣಮೂರ್ತಿ. ಅರಸೀಕೆರೆ ತಾಲೂಕ ತಹಸಿಲ್ದಾರ್ ಮತ್ತು ದಂಡಾಧಿಕಾರಿಗಳಾದ ಸಂತೋಷ್ ಕುಮಾರ್ ನಗರಸಭೆ ಉಪಾಧ್ಯಕ್ಷರಾದ ಮನೋಹರ್ ಮೇಸ್ತ್ರಿ ಸೇರಿದಂತೆ ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.
