ಮಾಡಾಳು ಗ್ರಾಮದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು  ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಜೂನ್ 30 ಮಂಗಳವಾರ ಚುನಾವಣಾ ಆಯೋಗ ರಾಜ್ಯಾದ್ಯಂತ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ಬಿ ಎಲ್ ಓ ಗಳು ಮನೆ ಮನೆಗೆ ತೆರಳಿ ಚಾಲನೆ ನೀಡಿದರು          ಮಾಡಾಳು ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಐದು ಬೂತ್ ಗಳ ಪೈಕಿ ಎರಡನೇ  ಬೂತ್ ನ ಮನೆಗಳಿಗೆ ಭೇಟಿ ನೀಡಿದ ಬಿ ಎಲ್ ಓ ಆನಂದ್ ರವರು ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರು ಹೆಚ್ಚಿನ ಜವಾಬ್ದಾರಿ ಹಾಗೂ ಎಚ್ಚರಿಕೆಯಿಂದ ಸಮಗ್ರ ಮಾಹಿತಿ ನೀಡಬೇಕು ಎಂದರು                   ಎರಡನೇ ಬ್ಲಾಕ್  ಮನೆ ಮನೆಗೆ ಭೇಟಿ ನೀಡಿದ ಅವರು ಮನೆಯ ಸದಸ್ಯರು ಅಧಿಕಾರಿಗಳು ನೀಡುವ ಅರ್ಜಿ ಬರ್ತಿ ಮಾಡಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು ಸದಸ್ಯರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು ಮನೆಯಲ್ಲಿ ಒಬ್ಬರು ಸದಸ್ಯರಿದ್ದು ಸ್ಥಳದಲ್ಲಿ ಇಲ್ಲದೇ ಇದ್ದರೂ ಅವರನ್ನು ಮತ ಪಟ್ಟಿ ಪರಿಷ್ಕರಣೆಗೆ ಸೇರ್ಪಡೆ ಮಾಡಬಹುದುಆದರೆ ಮರಣ ಹೊಂದಿದವರನ್ನು ಮತದಾರರಪಟ್ಟಿಯಿಂದ ಕೈ ಬಿಡಲಾಗುವುದು ಎಂದು ಅವರು ತಿಳಿಸಿದರು  ಈ ವೇಳೆ ಎರಡನೇ ಬ್ಲಾಕ್ ನ ಬಿ ಎಲ್ ಎ ಗಳಾದ ಎಂ ಟಿ ರಂಗನಾಥ್ ಮಾಡಾಳು ಶಿವಲಿಂಗಪ್ಪ ಎಂಡಿ ಸೋಮಶೇಖರ್ ಕಟ್ನೆ ತಿಮ್ಮಯ್ಯ ದಾಸಪ್ಪ ಎಮ್ ರವಿ ಪರಿಷ್ಕರಣೆ  ಕಾರ್ಯಕ್ಕೆ ಅಧಿಕಾರಿಗಳಿಗೆ ನೇರವಾದರು

Share This Article
Leave a Comment

Leave a Reply

Your email address will not be published. Required fields are marked *