ಆಹಾರ ನಿರೀಕ್ಷಕ ಕುಮಾರಸ್ವಾಮಿಗೆ ನಿವೃತ್ತಿ ಆದ ಕಾರಣ ಹೃದಯಸ್ಪರ್ಸಿ ಬೀಳ್ಕೊಡುಗೆ ಸಮಾರಂಭ*

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!



ಅರಸೀಕೆರೆ ತಾಲ್ಲೂಕು ಕಚೇರಿಯಲ್ಲಿ ಆಹಾರ ಇಲಾಖೆಯ  ನಿರೀಕ್ಷಕರಾದ ಕುಮಾರಸ್ವಾಮಿಯವರಿಗೆ  ನಿವೃತ್ತಿ ಆದಕಾರಣ  ಅರಸೀಕೆರೆ ತಾಲ್ಲೂಕು ಪಡಿತರ ವಿತರಕರ ಸಂಘದ ವತಿಯಿಂದ  ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭವನ್ನು  ಅರಸೀಕೆರೆ ನಗರದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ  ಹಮ್ಮಿಕೊಳ್ಳಲಾಗಿತ್ತು

ಈ ಸಮಾರಂಭದಲ್ಲಿ  ಹಾಸನದ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ  ಪ್ರಭುಶಂಕರ್  ಅರಸಿಕೆರೆ ಆಹಾರ ಶಿರಸ್ತೆದಾರರಾದ ಬಾಲಚಂದ್ರ  ಆಹಾರ ನಿರೀಕ್ಷಕರಾದ ಶುಭ  ಕರ್ನಾಟಕ ಪರಿಸರ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಬೆಳಗುಂಬ ಜಯಣ್ಣ    ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು 

ಆಹಾರ ಶಿರಸ್ತೆದಾರ್ ಬಾಲಚಂದ್ರ ರವರು ಮಾತನಾಡಿ  ಕುಮಾರಸ್ವಾಮಿ  ಸಿಟ್ಟಿನ ಮನುಷ್ಯ ಆದರೆ ತಮ್ಮ ಕರ್ತವ್ಯದಲ್ಲಿ  ಹಾಗೂ ಕೆಲಸ ಕಾರ್ಯಗಳಲ್ಲಿ  ಯಾವಾಗಲೂ  ಭಾಗಿಯಾಗಿ ತಮ್ಮ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳದೆ  ಆಹಾರ ಇಲಾಖೆಯ  ಕೆಲಸಗಳನ್ನು ಅಂದಿನ ದಿನವೇ ಮುಗಿಸುತ್ತಿದ್ದರು  ಹೀಗಾಗಿ ಅವರ ಸೇವೆಯನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದರು 
ಅಲ್ಲದೆ ಅರಸಿಕೆರೆ ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರು  ಹಾಗೂ  ಅಧ್ಯಕ್ಷರಾದ ವೇದಮೂರ್ತಿ  ಉಪಾಧ್ಯಕ್ಷರಾದ ಚನ್ನಾಪುರ ಶಿವರಾಜ್  ಕಾರ್ಯದರ್ಶಿಯಾದ ರಾಮಸ್ವಾಮಿ  ಖಜಾಂಚಿಗಳಾದ ಬಾಣಾವರ ಜಯಣ್ಣ  ಕುಮಾರಸ್ವಾಮಿಯವರ  ಸೇವೆಯನ್ನು ಬಣ್ಣಿಸಿದರು
ಹಾಸನದ ಆಹಾರ ಇಲಾಖೆಯಲ್ಲಿ ಪದನ್ನೋತಿ ಹೊಂದಿ ಸಹಾಯಕ ನಿರ್ದೇಶಕರಾಗಿರುವ   ಪ್ರಭು ಶಂಕರ್ ಅವರನ್ನು  ಮತ್ತು ಆಹಾರ ಶಿರಸ್ತೆದಾರ್ ಬಾಲಚಂದ್ರ. ಆಹಾರ ನಿರೀಕ್ಷಕರಾದ ಶುಭಶ್ರೀ  ಹಾಗೂ ಕುಮಾರಸ್ವಾಮಿ ದಂಪತಿಗಳನ್ನು ಅರಸೀಕೆರೆ ತಾಲ್ಲೂಕು ಪಡಿತರ ವಿತರಕರ ಸಂಘದ ವತಿಯಿಂದ  ಹೃದಯಸ್ಪರ್ಶಿ ಸನ್ಮಾನಿಸಲಾಯಿತು

ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ ಅರಸೀಕೆರೆ ತಾಲ್ಲೂಕು ಪಡಿತರ ವಿತರಕರ ಸಂಘಕ್ಕೆ ನಾನು ಆಭಾರಿಯಾಗಿದ್ದೇನೆ  ನಿಮಗೆ ಮತ್ತು ನಿಮ್ಮ ಸಂಸ್ಥೆಗೆ  ಒಳ್ಳೆಯದಾಗಲಿ ಎಂದು ಹಾರೈಸಿದರು  ನ್ಯಾಯ ಬೆಲೆ ಅಂಗಡಿ ಮಾಲೀಕರಾದ ತಳಲುತೊರೆ ಲೋಕೇಶ್. ಶಶಿವಾಳ ಸಿದ್ದರಾಜು ಸೇರಿದಂತೆ ಅರಸೀಕೆರೆ ತಾಲೂಕಿನ ಎಲ್ಲಾ ನ್ಯಾಯ ಬೆಲೆ ಅಂಗಡಿ ಮಾಲೀಕರು ಉಪಸ್ಥಿತರಿದ್ದರು

Share This Article
Leave a Comment

Leave a Reply

Your email address will not be published. Required fields are marked *