ಅರಸೀಕೆರೆ ನಗರದ ಪಿಪಿ ವೃತ್ತದಲ್ಲಿ ಭೈರವ ಯುವಕ ಸಂಘ ವತಿಯಿಂದ ಶ್ರೀ ಪದ್ಮಭೂಷಣ  ಡಾಕ್ಟರ್ ಬಾಲಗಂಗಾಧರ ನಾಥ ಸ್ವಾಮೀಜಿಯವರ 13ನೇ ವರ್ಷದ ಪುಣ್ಯಾರಾಧನೆ ಮಹೋತ್ಸವ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಅರಸೀಕೆರೆ ನಗರದ ಪಿಪಿ ವೃತ್ತದಲ್ಲಿ  ಭೈರವ ಯುವಕ ಸಂಘ ದಿಂದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿ 13ನೇ ವರ್ಷದ ಪುಣ್ಯಾರಾಧನಾ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್ ಅನಂತಕುಮಾರ್  ಪೂಜ್ಯ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಸೇವೆಯ ಮೂಲಕ ದೇಶದ ಗಮನ ಸೆಳೆದವರು. ಆದಿಚುಂಚನಗಿರಿ ಶ್ರೀ ಮಠದ 71ನೇ ಪೀಠಾಧೀಶರಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ.30 ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡು ತ್ರಿವಿಧ ದಾಸೋಹಿಗಳೆಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು ತಮ್ಮ ಮಠದ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಯನ್ನುಂಟು ಮಾಡುವ ತಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅವಿಶ್ರಾಂತವಾಗಿ ಶ್ರಮಿಸಿದರು. ಎಂದು ತಿಳಿಸಿದರು
ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ವೆಂಕಟಮನಿ, ರಮೇಶ್, ದರ್ಶನ್ ನಗರಸಭಾ ಆಯುಕ್ತ ಕೃಷ್ಣಮೂರ್ತಿ  ಭೈರವ ಯುವಕ ಸಂಘದ ಅಧ್ಯಕ್ಷ ಎ ಪ್ರಶಾಂತ್ ನಗರ ಸಭೆ ಮಾಜಿ ಆಯುಕ್ತ ಪರಮೇಶ್ ಒಕ್ಕಲಿಗ ಸಮಾಜದ ಮುಖಂಡರಾದ ಗುಂಡಣ್ಣ ರಾಮಚಂದ್ರ ಸೈಕಲ್ ತಿರುಪತಿಹಳ್ಳಿ ಧರ್ಮೇಶ್ ಹೈಟೆಕ್ ಕುಮಾರ್ ಕರವೇ  ಹೇಮಂತ್ ಕುಮಾರ್, ಕಿರಣ್, ರಾಘು, ಮುಖಂಡರುಗಳಾದ ಗಣೇಶ್, ಮಂಜು ರೈಸ್ ಮಿಲ್ಸ್, ಶ್ರೀಧರ್, ಅರುಣ್, ಜಿಮ್ ಕೃಷ್ಣ , ನವೀನ್, ರವಿ ಮುಂತಾದವರಿದ್ದರು

Share This Article
Leave a Comment

Leave a Reply

Your email address will not be published. Required fields are marked *