ಉಮೇಶ್ ಬಾಣಾವರ

ಉಮೇಶ್ ಬಾಣಾವರ

360 Articles

ಸಕಲೇಶಪುರ : ‘ಮನೆ ಮನೆಗೆ ಪೊಲೀಸ್’ ಅಭಿಯಾನಕ್ಕೆ ಚಾಲನೆಕರ್ನಾಟಕ ಸರ್ಕಾರ ಉಪಕ್ರಮ ‘ಮನೆ ಮನೆಗೇ ಪೊಲೀಸ್’ ಎಂಬ ವಿನೂತನ ಕಾರ್ಯಕ್ರಮ ಅಂಗವಾಗಿ, ಸಕಲೇಶಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಯುತ ಮಹೇಶ್ ಅವರು ಚಾಲನೆ ನೀಡಿದರು.ಅಭಿಯಾನದ ಉದ್ದೇಶ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಅಸ್ತಿತ್ವದಲ್ಲಿರುವ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿ ಮತ್ತು ಕ್ರಿಯಾಶೀಲ ಪಡೆಯನ್ನಾಗಿ ಪರಿವರ್ತಿಸುವುದಾಗಿದೆ.’ಮನೆ ಮನೆಗೇ ಪೊಲೀಸ್’ ಪರಿಕಲ್ಪನೆ, ಪೊಲೀಸ್ ಸೇವೆ ಪ್ರತಿ ಮನೆಗೆ ತಲುಪಲಿ ಮತ್ತು ಪೊಲೀಸರ ಕಾರ್ಯಮನೆ ಮಂದಿಗೆ ಮನವರಿಕೆಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹೊರಡಿಸಿರುವ 27 ಅಂಶಗಳ ಸುತ್ತೋಲೆಯನ್ನು ಮನವರಿಕೆ ಮಾಡಿಕೊಂಡು ಪ್ರತಿ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶ.ಕಾರ್ಯಕ್ರಮದ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ. “ಸಾರ್ವಜನಿಕರು ತಮ್ಮ ಸಹಕಾರವನ್ನು ವಿಸ್ತರಿಸಲು ಪೊಲೀಸ್ ಇಲಾಖೆ ವಿನಂತಿಸುತ್ತದೆ” ಎಂದು ಸಾರ್ವಜನಿಕ ಜಾಗೃತಿಗಾಗಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಾಗ ತಿಳಿಸಲಾಗಿದೆ, ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ನಗರ ಪೋಲಿಸ್ ಸಿಬ್ಬಂದಿಗಳಾದ ಶ್ರೀಯುತ ಶ್ರೀಧರ್,ಶ್ರೀಯುತ ರೇವಣ್ಣ ಹಾಗೂ ಶ್ರೀಯುತ ಸುಜಾತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ವರದಿ : ಭರತ್ ಮಲ್ನಾಡ್

ಕರ್ನಾಟಕ ಸ್ಟೇಟ್ ಟೈಲರ್ಸ ಅಸೋಸಿಯೇಷನ್ ರಿ ಕ್ಷೇತ್ರ ಸಮಿತಿ ಉಡುಪಿ ಇದರ ವತಿಯಿಂದ ಸಂಘಟನೆಯ ರಜತ ಸಂಭ್ರಮದ ಪ್ರಯುಕ್ತ ಸ್ನೇಹ ಸಮ್ಮಿಲನ – ಪ್ರತಿಭಾ ಪುರಸ್ಕಾರ ಹಾಗೂ ಮಹಾಸಭೆಯು ಇಂದು ತಾ-20/7/25ರಂದು ಬೆಳಿಗ್ಗೆ 10ಗಂಟೆಗೆ ಉಡುಪಿ ಜಗನ್ನಾಥ ಸಭಾ ಭವನದಲ್ಲಿ ಶ್ರೀ ಸುರೇಶ್ ಪಾಲನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಪ್ರಭು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು . ವರದಿ,ಲೆಕ್ಕ-ಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು . ನಂತರ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಕೆ.ಶ್ರೀನಿವಾಸ್ ನೂತನ ಸಮಿತಿಯನ್ನು ರಚಿಸಿದರು.ಅಧ್ಯಕ್ಷರಾಗಿ ಸುರೇಶ್ ಪಾಲನ್ ಪುನರಾಯ್ಕೆಯಾದರು. ಶ್ರೀ ಬಾಲಕೃಷ್ಣ ನಾಯ್ಕ್ ಪ್ರಧಾನ ಕಾರ್ಯದರ್ಶಿಯಾಗಿ ,ಶ್ರೀ ದಯಾನಂದ ಪ್ರಭು ಕೋಶಾಧಿಕಾರಿಗಳಾಗಿ ಆಯ್ಕೆಯಾಗಿದ್ದು, ಜೊತೆ ಕಾರ್ಯದರ್ಶಿಗಳಾಗಿ ಸಾವಿತ್ರಿ ಪಾಲ್ ಹಾಗೂ ಶ್ರೀಮತಿ ಬೇಬಿ , ಉಪಾಧ್ಯಕ್ಷರಾಗಿ ಶ್ರೀ ವಾಸು ಆಚಾರ್ಯ, ಶ್ರೀಮತಿ ಮೀನಾಕ್ಷಿ ಆಚಾರ್ಯ, ಶ್ರೀಮತಿ ಸುಲತ ಸೋನ್ಸ್,ಸಂಘಟನಾ ಕಾರ್ಯದರ್ಶಿಗಳಾಗಿ ಹರಿಶ್ಚಂದ್ರ ಆಚಾರ್ಯ , ಶೇಖರ್ ಬಂಢಾರಿ, ಸುಭಾಷ್ ಮಲ್ಪೆ, ಅಚ್ಚುತ ಆಚಾರ್ಯ, ಸುನೀತಾ ಜಯಕರ್, ಸತೀಶ್ ಸಂತೆಕಟ್ಟೆ, ಸುಜಾತಾ ಆಚಾರ್ಯ, ಉಡುಪಿ ಕ್ಷೇತ್ರ ಸಮಿತಿಯಿಂದ ಚುನಾಯಿತ ಪ್ರತಿನಿಧಿಗಳಾಗಿ ಶ್ರೀ ದಯಾನಂದ ಕೋಟ್ಯಾನ್, ಶ್ರೀ ಕೆ.ರಾಮಚಂದ್ರ, ಶ್ರೀ ಗುರು ರಾಜ್ M ಶೆಟ್ಟಿ, ಶ್ರೀಮತಿ ಉಷಾ ಸೇರಿಗಾರ್ ಮತ್ತು ಈಶ್ವರ ಸೇರಿಗಾರ್ ಆಯ್ಕೆಯಾಗಿರುತ್ತಾರೆ. 10ಹಾಗೂ12ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ನೇಹ ಸಮ್ಮಿಲನದ ಅಂಗವಾಗಿ 25 ವರ್ಷಗಳಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವದಿಂದ ಸನ್ಮಾನಿಸಲಾಯಿತು. ಉತ್ತಮ ಸಂಘಟಕರಾದ ರಾಜ್ಯ ಸಮಿತಿಯ ಮಾಜಿ ಕೋಶಾಧಿಕಾರಿ ಶ್ರೀ ಅಬ್ದುಲ್ ಖಾದರ್ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ಉಡುಪಿ ಜಿಲ್ಲಾ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀ ವಿಠ್ಠಲ ಶೆಟ್ಟಿ ಯವರು ಮಾತನಾಡಿ 2000 ನೇ ಇಸವಿಯಲ್ಲಿ ಉಡುಪಿ ಕ್ಷೇತ್ರ ಸಮಿತಿಯು ರಚನೆಯಾಯಿತು.ಅಂದು ಉಡುಪಿಯ ಶ್ಯಾಂ ಕಾಂಪ್ಲೆಕ್ಸ್ ನಲ್ಲಿ ಅಂದಿನ ಪ್ರಸಿದ್ಧ ಟೈಲರ್ ಆಗಿದ್ದ ಶ್ರೀ ದಿ.ಶ್ಯಾಂ ಶೆಟ್ಟಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದ್ದರು ಸ್ಥಾಪಕ ಅಧ್ಯಕ್ಷರಾಗಿ ಶ್ರೀ ರಾಮಕೃಷ್ಣ ನಾಯಕ್ (ಆರ್.ಕೆ. )ಯವರು ಆಯ್ಕೆಯಾದರು ಎನ್ನುತ್ತಾ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.ಉಡುಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರಾಗಿ , ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸಾವಿತ್ರಿ .ಟಿ. ಸಾಲ್ಯಾನ್ ರಾಜ್ಯ ಸಮಿತಿಯ ಕೋಶಾಧಿಕಾರಿ ಶ್ರೀ ಕೆ. ರಾಮಚಂದ್ರ, ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ಗುರು ರಾಜ್ ಎಂ ಶೆಟ್ಟಿ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಕೋಟ್ಯಾನ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಕೆ ಶ್ರೀನಿವಾಸ್,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಡಾ.ವಿಷ್ಣುಮೂರ್ತಿ ಪ್ರಭು ಸಹ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಕೋಟ್ಯಾನ್ ಮಾತನಾಡಿ ಆಗಸ್ಟ್ 10ರಂದು ಉಡುಪಿ ಜಿಲ್ಲಾ ಸಮಾವೇಶ ದ ಪೂರ್ವ ತಯಾರಿ ಕುರಿತು ವಿವರಿಸಿ ಕರಪತ್ರವನ್ನು ಬಿಡುಗಡೆಗೊಳಿಸಿದರು. ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್ ವಂದಿಸಿದರು.

ಜೂ.26ರಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಪೌರ ಸನ್ಮಾನ  ಎಮ್ ಸಮೀವುಲ್ಲಾ*

ಅರಸೀಕೆರೆ: ಕ್ಷೇತ್ರದ ಅಭಿ ವೃದ್ಧಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ ರ್ ಸೇರಿದಂತೆ ಸಚಿವರಿಗೆ ಹಾಗೂ ಗಣ್ಯರಿಗೆ ನಗರದ ಮಹಾಜನತೆ ಪರವಾಗಿ ನಗರಸಭೆ ಆಡಳಿತದಿಂ ದ ಜುಲೈ 26ರಂದು ಪೌರ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಶಾಸಕರು ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ. ಶಿವಲಿಂಗೇಗೌಡರ ಉಪಸ್ಥಿತಿಯಲ್ಲಿ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರದ ರೈಲ್ವೆ ನಿಲ್ದಾಣ ರಸ್ತೆ ಮತ್ತು ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಹೊಂದಿಕೊಂಡಂತೆ ಇರುವ ನಗರಸಭೆ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಹಾಗೂ ಸಂತ ಮೇರಿ ಶಾಲೆ ಬಳಿ ಕನಕದಾಸರ ಪ್ರತಿಮೆ ಸ್ಥಾಪಿಸಲಾಗುತ್ತಿದೆ.

ಕಂತೆನಹಳ್ಳಿಯ ಅರಸೀ ಉದ್ಯಾನವನದಲ್ಲಿ ನಿರ್ಮಾಣ ಮಾಡಿರುವ ನೂತನ ಈಜುಕೊಳ, ಸಂತೆ ಮೈದಾನದಲ್ಲಿ ನಿರ್ಮಾಣ ಮಾಡಿರುವ ವಾಣಿಜ್ಯ ಸಂಕೀರ್ಣ.

ಯಾದಾಪುರ ರಸ್ತೆ ಬಲಭಾಗದ ಪ್ರದೇಶದಲ್ಲಿ ನಿರ್ಮಿಸಲಾದ ಜಿ-ಪ್ಲಸ್ ಒನ್ ಯೋಜನೆಯ 1188 ಮನೆಗಳ ಪೈಕಿ 300ಅರ್ಹರ ಫಲಾನುಭವಿಗಳಿಗೆ ನೂತನ ಮನೆಗಳ ಹಸ್ತಾಂತರ ಮುಖ್ಯ ಮಂತ್ರಿ ಅವರಿಂದ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮತ್ತು ಮುಖ್ಯಮಂತ್ರಿ ಅವರ ಕಾರ್ಯ ಕ್ರಮ ಯಶಸ್ವಿ ಬಗ್ಗೆ ಸಮಾಲೋ ಚಿಸಲು ಇಂದು ವಿಶೇಷ ಸಭೆ ಕರೆಯಲಾಗಿದೆ ಎಂದರು.

ನಗರದ ಅಭಿವೃದ್ಧಿಗೆ ಸ್ಪಂದಿಸಿ ದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ನಗರಸಭೆ ಆಡಳಿತ ‘ದಿಂದ ನಾಗರಿಕ ಸನ್ಮಾನ ಆಯೋಜಿಸಿರುವುದು ಸ್ವಾಗತ ರ್ಹವಾಗಿದೆ. ಕ್ಷೇತ್ರದ ಅಭಿವೃದ್ಧಿ

ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿಸುವುದು ನನ್ನ ಕರ್ತವ್ಯವಾಗಿದ್ದು, ಜನತೆ ಇಟ್ಟಿರುವ ನಂಬಿಕೆಗೆ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಿಸುತ್ತಿರುವ ಬಗ್ಗೆ ಹೆಮ್ಮೆ ನನಗಿದೆ. ಅರಸೀಕೆರೆ ನಗರವು ಆರ್ಥಿಕ ವಹಿವಾಟಿನಲ್ಲಿ ನಿರತ ಪತ್ರಕರ್ತರ ಭವನ ನಿರ್ಮಾ ಣಕ್ಕೆ ಸರ್ಕಾರವು ನಿವೇಶನ ಮಂಜೂರು ಮಾಡಿದ್ದು, ಕಟ್ಟಡ ಈ ಮಾದರಿ ನಗರವಾಗಿದೆ. ಕಾರ್ಯ ಅವರು ಅನುದಾನ ಘೋಷಣೆ : ನಿರ್ಮಾಣಕ್ಕೆ ಮುಖ್ಯ ಮಂತ್ರಿ ಮಾಡುವ ಸಂಭವ ವಿದ್ದು, ಆ ನಿಟ್ಟಿನಲ್ಲಿ ಸಂಗವು ಪೂರ್ವ ಸಿದ್ಧತೆ ಮಾಡಿಕೊಳ್ಳ ಬೇಕು. ಜುಲೈ : 26 ಮುಖ್ಯಮಂತ್ರಿ   ಕಾರ್ಯಕ್ರಮಕ್ಕೆ ನಗರಸಭೆ ಸರ್ವ ಸದಸ್ಯರು ತಮ್ಮ ವಾರ್ಡ್ಗಳ ಜನತ “ಯೊಂದಿಗೆ ಅಧಿಕ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಆಗಮಿ ಸಬೇಕೆಂದು ಮನವಿ ಮಾಡಿದರು..

ಹಾಸನ ಅರ್ಹರಿಗೆ ಸರ್ಕಾರಿ ಸೌಲಭ್ಯವನ್ನು ಒದಗಿಸಿ : ಜಿಲ್ಲಾಧಿಕಾರಿ ಲತಾ ಕುಮಾರಿಹಾಸನ          ಪೌತಿ ಖಾತೆ ಆಂದೋಲನದ ಜೊತೆಗೆ ಪಿಂಚಣಿ ಆಂದೋಲನ ಕೂಡಾ ನಡೆಸಿ ಕೈಬಿಟ್ಟು ಹೋಗಿರುವವರನ್ನು ಗುರುತಿಸಿ ಅರ್ಹರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಒದಗಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು..

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು ಕೆರೆ, ಗೋಮಾಳ ಮತ್ತು ಸ್ಮಶಾನ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು…

ಅರಸೀಕೆರೆ ತಾಲೂಕಿನ ತೆಂಗು ಬೆಳೆಗಳಿಗೆ ರೋಗದಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರಕ್ಕೆ ಧಾವಿಸುವಂತೆ ಗೃಹ ಮಂಡಳಿ ಅಧ್ಯಕ್ಷ ಶಾಸಕ ಶಿವಲಿಂಗೇಗೌಡರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿತೆಂಗು ಬೆಳೆಯ ವಿಸ್ತೀರ್ಣದಲಿ, ಹಾಸನ ಜಿಲ್ಲೆಯು ಎರಡನೇ ಸ್ಥಾನದಲ್ಲಿದ್ದು ಒಟ್ಟು 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ಪ್ರದೇಶದಲ್ಲಿ ಆರಸೀಕೆರೆ ತಾಲೂಕಿನಲ್ಲಿ ಒಟ್ಟು 56473 ಹೆಕ್ಟರ್ ವಿಶ್ರಾಣದಲ್ಲಿ ಬೆಳೆಯುವ ಪ್ರದೇಶದಲ್ಲಿ ಮುಂಚೂಣಿಯಲ್ಲಿರುತ್ತದೆ.

ಒಟ್ಟು 56473 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದರು ಸಹ ಬಹುತೇಕ ಶೇಕಡ 90ರಷ್ಟು ಪ್ರದೇಶದಲ್ಲಿ, ತೆಂಗಿನ ಬೆಳೆಯ ಇಳುವರಿಯಲ್ಲಿ ಗಣನೀಯ ಪ್ರಮಾಣದ ಇಳಿಮುಖ ಕಂಡು ಬಂದಿರುತ್ತದೆ. ಕಳೆದ…

ಸಕಲೇಶಪುರ : ಪುರಸಭೆ ವ್ಯಾಪ್ತಿಯ 21ನೇ ವಾರ್ಡ್ ನ (ಆಚಂಗಿ) 2ನೇ ಕ್ರಾಸ್, ಹದಗೆಟ್ಟ ರಸ್ತೆ ದುರಸ್ಥಿಗೆ ಒತ್ತಾಯ, ನಿವಾಸಿಗಳ ವಿನೂತನ ಪ್ರತಿಭಟನೆ! ತಕ್ಷಣವೇ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಶ್ರೀಯುತ ಸಿಮೆಂಟ್ ಮಂಜುಪುರಸಭೆ ವ್ಯಾಪ್ತಿಯ 21ನೇ ವಾರ್ಡ್ ನ (ಆಚಂಗಿ) 2ನೇ ಕ್ರಾಸ್ ಗ್ರಾಮಸ್ಥರು ನಿವಾಸಿಗಳು ತಮ್ಮ ಪ್ರದೇಶದ ರಸ್ತೆಯ ದಯನೀಯ ಸ್ಥಿತಿಯಿಂದ ಬೇಸತ್ತು ಸಾಂಕೇತಿಕವಾಗಿ ಗುಂಡಿ ಬಿದ್ದ ಜಾಗಕ್ಕೆ ಜಾಗೃತ ಮುನ್ಸೂಚನಾ ಕ್ರಮ ದೊಂದಿಗೆ ಪ್ರತಿಭಟನೆ ಮುಂದಾಗಿದ್ದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಶ್ರೀಯುತ ಸಿಮೆಂಟ್ ಮಂಜು ರಸ್ತೆಯನ್ನು ವೀಕ್ಷಿಸಿ ಮತ್ತು ಶೀತಲಾವಸ್ಥೆಯಲ್ಲಿರುವ ಒಳಚರಂಡಿ ದುರಸ್ತಿ ಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶೀಘ್ರವಾಗಿ ರಸ್ತೆ ಒಳ ಚರಂಡಿ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿದರು .ವರದಿ : ಭರತ್ ಮಲ್ನಾಡ್

ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಮ್ ರವರಿಗೆ ಎಲ್ಲಾ ಪತ್ರಕರ್ತರ ಸಂಘಟನೆಗಳ ಕಾರ್ಯಾಗಾರಕ್ಕೆ ಅನುದಾನ ಒದಗಿಸಲು ಮಹಾಒಕ್ಕೂಟ ಒತ್ತಾಯ :- ದಿನಾಂಕ 17-07-2025, ಗುರುವಾರ ಸಂಜೆ ಬೆಂಗಳೂರಿನಲ್ಲಿರುವ ರಾಜ್ಯದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಮಾನ್ಯ ಆಯೇಷಾ ಖಾನಮ್ ರವರನ್ನ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಭೇಟಿ ಮಾಡಿ, ರಾಜ್ಯದ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಮ್ ರವರಲ್ಲಿ ಮನವರಿಕೆ ಮಾಡಲಾಗಿ, ಸಣ್ಣ-ಮಧ್ಯಮ ಮತ್ತು ದಿನಪತ್ರಿಕೆ (ಮಾಧ್ಯಮ ಪಟ್ಟಿಗೆ ಸೇರಿಲ್ಲದ) ಪತ್ರಿಕೆಗಳಿಗೆ ವಾರ್ಷಿಕ 2,00,000 (ಎರಡು ಲಕ್ಷರೂಗಳ ಪ್ರೋತ್ಸಾಹ ಜಾಹೀರಾತು) ರಾಜ್ಯ ವಾರ್ತಾ ಇಲಾಖೆಯಿಂದ ಕೊಡಿಸುವಂತೆ ಮನವಿ ಮಾಡಲಾಗಿ, ಈ ವಿಚಾರದ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕೆಂದು ಮಾನ್ಯ ಆಯೇಷಾ ಖಾನಮ್ ರವರಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದಿಂದ ಮನವಿ ಮಾಡಲಾಗಿ, ನಮ್ಮ ಮನವಿಗೆ ಸ್ಪಂಧಿಸಿದ ಮಾನ್ಯ ಆಯೇಷಾ ಖಾನಮ್ ರವರಿಗೆ ಧನ್ಯವಾದಗಳ ಜೊತೆಗೆ ತಮ್ಮ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಕರ್ತರ ಕಾರ್ಯಗಾರಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೊಂದೇ ಅನುದಾನ ನೀಡುತ್ತಿದ್ದು ಇನ್ನು ಮುಂದೆ ಎಲ್ಲಾ ಪತ್ರಕರ್ತರ ರಾಜ್ಯ ಸಂಘಟನೆಗಳಿಗೆ ಅನುದಾನ ಹಂಚಿಕೆಯಾಗಿ ಕಾರ್ಯಗಾರಗಳು ನಡೆಸುವುದಕ್ಕೆ ತಾವುಗಳು ಅನುವು ಮಾಡಿಕೊಡಲೇಬೇಕೆಂದು ಒಕ್ಕೂಟ ಒತ್ತಾಯಿಸಿದ್ದಕ್ಕೆ ಎಲ್ಲಾ ಸಂಘಟನೆಗಳಿಗೂ ಅನುದಾನ ನೀಡುವುದಾಗಿ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಸಮ್ಮತಿ ಸೂಚಿಸಿದ್ದಾರೆ..

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರು), ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವಪ್ರಸಾದ್ ಜಿ…

:ಭೂಸ್ವಾಧೀನಾಧಿಕಾರಿ ಎನ್.ವಿ ನಟೇಶ್ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೊಡಿಗೆ.

ಅರಸೀಕೆರೆ : ಹಾಸನ-ಹಿರಿಯೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಚೇರಿಯಲ್ಲಿ ಇತ್ತೀಚಿಗೆ ತರೀಕೆರೆ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆಗೊಂಡ ಈ ಕಚೇರಿಯ ವಿಶೇಷ ಭೂಸ್ವಾಧೀನಾಧಿಕಾರಿ ಎನ್. ವಿ.ನಟೇಶ್…

- Advertisement -
Ad image