ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀಸ್ವರ್ಣ ಗೌರಮ್ಮ ದೇವಿಯವರ 167 ನೇ ವರ್ಷಗಳ ಜಾತ್ರಾ ಮಹೋತ್ಸವವು ವಿಜೃ೦ಭಣೆಯಿಂದ ಜರುಗುತ್ತಿದ್ದು ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಸಂಪ್ರದಾಯದಂತೆ ಪದ್ಧತಿ ಪ್ರಕಾರ ಧಾರ್ಮಿಕ ವಿಧಿ ವಿಧಾನಗಳಿಂದ ಶ್ರೀಕಾಲ ಪೂಜೆ ನಡೆಯುತ್ತಿದ್ದು ದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಲ್ಲದೆ ಮತ್ತೆ ಕೆಲವರು ಕರ್ಪೂರ ಪ್ರಿಯ ಗೌರಮ್ಮ ತಾಯಿ ಗೆ ತಮ್ಮ ಕಷ್ಟ ಪರಿಹಾರಕ್ಕೆ ಹರಕೆ ತೀರಿಸಲು ದೇವಾಲಯದ ಮುಂಬಾಗ ಇರುವ ಅಗ್ನಿ ಕುಂಡಕ್ಕೆ ಕರ್ಪೂರ ಹಾಕಿ ತಲೆಯ ಮೇಲೆ ದುಗ್ಗಳದ ಬಟ್ಟಲಿನಲ್ಲಿ ಹೊತ್ತು ಹರಕೆ ತೀರಿಸುತ್ತಿರುವುದನ್ನು ಕಾಣಬಹುದು ನಾನಾ ರಾಜಕೀಯ ಪಕ್ಷಗಳ ಮುಖಂಡರು ವಿವಿಧ ಸಂಘ ಸಂಸ್ಥೆಗಳ ನಾಯಕರು ಪದಾಧಾರಿಗಳು ಹಾಗೂ ಸರ್ಕಾರದ ಹಿರಿಯ ಕಿರಿಯ ನೌಕರರು ದೇವಾಲಯಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಅಮ್ಮನವರಿಗೆ ಪೂಜೆ ಸಲ್ಲಿಸುತ್ತಿದ್ದರೆ ಮಂಗಳವಾರ ಮಧ್ಯಾಹ ಜಿಲ್ಲಾ ಪೋಲಿಸ್ ವರಿಷ್ಠಾ ಧಿಕಾರಿ ಶುಭನ್ವಿತಾ ದೇವಾಲಯಕ್ಕೆ ಭೇಟಿ ನೀಡಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು ನಂತರ ಮಾತನಾಡಿದ ಅವರು ದೇವಿ ದರ್ಶನಕ್ಕೆ ರಾಜ್ಯದ ನಾನಾ ಭಾಗಗಳಿಂದ ಮಹಿಳೆಯರು ಸೇರಿದಂತೆ ಮಕ್ಕಳು ಬರುತ್ತಿದ್ದು ಅವರಿಗೆ ಯಾವ ತೊಂದರೆಯಾಗದಂತೆ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಿ ಎಂದು ತಮ್ಮ ಜತೆಯಲ್ಲಿದ್ದ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು. ಅರಸೀಕೆರೆ ಪೋಲಿಸ್ ವಿಭಾಗದ ಉಪ ಅಧೀಕ್ಷಕ ಗೋಪಿ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ಬಾಣಾವರ ಪಿಎಸ್ ಐ ಸುರೇಶ್ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ ಎಸ್ ನಟರಾಜ ಮಾಡಾಳು ಶಿವಲಿಂಗಪ್ಪ ಮುಖಂಡ ರಾದ ಎಂ ಸಿ ನಟರಾಜ ಕೊಡ್ಲಿ ಬಸವರಾಜ ಎಂ ಜಿ ಶಿವಣ್ಣ ಆಶೋಕ್ ಮರುಳಸಿದ್ದ ಕುಮಾರ್ ಉಪಸ್ಥಿತರಿದ್ದರು..
