ಸ್ವರ್ಣ ಗೌರಿ ಅಮ್ಮನವರ ಬೆನಕನ  ಅಮಾವಾಸ್ಯೆ ಪೂಜೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು ನಾಡಿನ  ಲಕ್ಷಾಂತರ ಮಂದಿಯ ಭಕ್ತರ ಆರಾಧ್ಯ ದೇವತೆ ಹಾಗೂ ಶಕ್ತಿ ದೇವತೆಯಂತೆ ಮನೆ ಮನದಲ್ಲಿ ನೆಲಸಿರುವ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಿ ಅಮ್ಮನವರ    ನೂತನ ದೇವಾಲಯದಲ್ಲಿ ಶ್ರಾವಣ ಮಾಸದ ಕೊನ ಬೆನಕನ ಅಮಾವಾಸ್ಯೆ ಅಂಗವಾಗಿ ದೇವಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು   ಹಾರನಹಳ್ಳಿ ಸುಕ್ಷೇತ್ರ ಕೂ
ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಮೇರೆಗೆ ಮತ್ತು ಶ್ರೀಗಳ ಸತ್ಸಂಕಲ್ಪದಂತೆ ಲೋಕಕಲ್ಯಾಣಾ ರ್ಥವಾಗಿ ಪ್ರತಿ ಅಮಾವಾಸ್ಯೆ ಯಂದು ಕೋಡಿಮಠದ ಮಹಾ ತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಮುಂಜಾನೆ ರುದ್ರಾಭಿಷೇಕ ಕುಂಕುಮಾರ್ಚನೆ ನೆರವೇರಿಸಿದರೆ ಸಂಜೆ ಅಮ್ಮನವರಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿದರು          ಅಮಾವಾಸ್ಯೆ ಪ್ರಯುಕ್ತ ನೂತನ ದೇವಾಲಯವನ್ನು ಮಾವಿನ ತಳಿರು ತೋರಣ ಹಾಗೂ ಬಾಳೆ ಕಂದುಗಳಿಂದ ಶೃಂಗರಿಸಿದ್ದರೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಭಕ್ತರ ಕಣ್ಮನ ಸೆಳೆಯಿತು ಅಲ್ಲದೆ ಕಾರ್ಯಕ್ರಮಕ್ಕೆ ಮೆರಗು ನೀಡಿ ಕಳಗಟ್ಟಿತ್ತು
  ಬಂದ ಭಕ್ತಾದಿಗಳಿಗೆ ಮಾಡಾಳು
ಶಿವಲಿಂಗಪ್ಪ
ಮತ್ತು ಮಕ್ಕಳು ವೈ ಸಿ ಚಂದ್ರಶೇಖರಪ್ಪ ಮತ್ತು ಮಕ್ಕಳು ವೈಜಿಹಳ್ಳಿ ಇವರಿಂದ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಮಾಡಾಳು ಗ್ರಾಮಸ್ಥರು ಸೇರಿದಂತೆಸೀತಾಪುರ ಕೊಪ್ಪಲು ಯರೇ ಹಳ್ಳಿ ವೈಜಿಹಳ್ಳಿ ದಿಬ್ಬೂರು ಕಣಕಟ್ಟೆ ಪಿ ಹೊಸಳ್ಳಿ ಕಿತ್ತನೆಕೆರೆ ದೊಣನಕಟ್ಟೆ ಬೊಮ್ಮಸಮುದ್ರ ಕೆ ಶಂಕರನಹಳ್ಳಿ ಕಡಲ ಮಗೆ ಡಿ ಎಂ ಕುರ್ಕೆ ಶಶಿವಾಳಚಿಕ್ಕ ಮೇಟಿ ಕುರ್ಕಿ ಹಾರನಹಳ್ಳಿ ಅಣ್ಣಾಯಕನಹಳ್ಳಿ ಯಳವಾರೆ ಹಿರೀ
ಸಾದರಹಳ್ಳಿ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆದು ತಾಯಿ ಕೃಪೆಗೆ ಪಾತ್ರರಾದರು

Share This Article
Leave a Comment

Leave a Reply

Your email address will not be published. Required fields are marked *